• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

AI ಶೃಂಗಸಭೆಯಲ್ಲಿ ರಾಜ್ಯದ ಸಾಧನೆ ಪ್ರದರ್ಶನ: ಜಾಗತಿಕ ದಿಗ್ಗಜರ ಜೊತೆ ಪ್ರಿಯಾಂಕ್‌ ಖರ್ಗೆ ಸಮಾಲೋಚನೆ

ಪ್ರತಿಧ್ವನಿ by ಪ್ರತಿಧ್ವನಿ
February 19, 2026
in Top Story, ಕರ್ನಾಟಕ, ರಾಜಕೀಯ
0
AI ಶೃಂಗಸಭೆಯಲ್ಲಿ ರಾಜ್ಯದ ಸಾಧನೆ ಪ್ರದರ್ಶನ: ಜಾಗತಿಕ ದಿಗ್ಗಜರ ಜೊತೆ ಪ್ರಿಯಾಂಕ್‌ ಖರ್ಗೆ ಸಮಾಲೋಚನೆ
Share on WhatsAppShare on FacebookShare on Telegram

ನವದೆಹಲಿ: ಕೃತಕ ಬುದ್ಧಿಮತ್ತೆ ಮತ್ತು ಡೀಪ್‌ ಟೆಕ್ನಾಲಜಿ ಕ್ಷೇತ್ರಗಳಲ್ಲಿ ಕರ್ನಾಟಕವು ಪ್ರಭಾವಶಾಲಿಯಾಗಿ ಬೆಳೆಯುತ್ತಿರುವುದನ್ನು ಇಲ್ಲಿ ನಡೆಯುತ್ತಿರುವ ʼಭಾರತ ಕೃತಕ ಬುದ್ಧಿಮತ್ತೆ ಪ್ರಭಾವ ಶೃಂಗಸಭೆʼಯಲ್ಲಿ ಕರ್ನಾಟಕದ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಜಾಗತಿಕ ದಿಗ್ಗಜರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಜಾಗತಿಕ ಉದ್ಯಮ ದಿಗ್ಗಜರು, ಸಂಶೋಧಕರು ಮತ್ತು ನವೋದ್ಯಮ ಸ್ಥಾಪಕರ ಜೊತೆಗೆ ಸಚಿವರು ವ್ಯಾಪಕ ಸಮಾಲೋಚನೆ ನಡೆಸಿದ್ದಾರೆ.

ADVERTISEMENT
DK Shivakumar: ಎರಡು ದಿನ ಅಸ್ಸಾಂ ಪ್ರವಾಸಕ್ಕೆ ತೆರಳುವ ಮುನ್ನ ಡಿಸಿಎಂ ಡಿಕೆಶಿ ಹೇಳಿದ್ದೇನು? #pratidhvani

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಪ್ರಗತಿಯ ದಾಪುಗಾಲು ಹಾಕುತ್ತಿರುವ ಕರ್ನಾಟಕವು ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ. ಹಾರ್ವೆ ಎಐ ಮತ್ತು ಆಂಥ್ರೊಪಿಕ್‌ನಂತಹ ಈ ವಲಯದ ಜಾಗತಿಕ ದೈತ್ಯ ಕಂಪನಿಗಳು ರಾಜ್ಯದಲ್ಲಿ ಈಗಾಗಲೆ ನೆಲೆವೂರಿವೆ. ವಾಲ್ಟ್ ಡಿಸ್ನಿ ಕಂಪನಿಯು ಬೆಂಗಳೂರಿನಲ್ಲಿ ತನ್ನ ʼಎಐʼ ಜಾಲ ವಿಸ್ತರಿಸುತ್ತಿದೆ. ʼಎಐʼ ಪ್ರತಿಭೆಗಳಿಗೆ ಬೆಂಗಳೂರು ಜಾಗತಿಕವಾಗಿ ಅಗ್ರ ಸ್ಥಾನದಲ್ಲಿದೆ. ರಾಜ್ಯ ಸರ್ಕಾರವು ₹ 1 ಕೋಟಿವರೆಗಿನ ಅನುದಾನದ ಮೂಲಕ ನವೋದ್ಯಮಗಳನ್ನು ಪ್ರೋತ್ಸಾಹಿಸುತ್ತಿದೆ. ʼಎಐʼ ನ ಹೊಣೆಗಾರಿಕೆಯುತ ಬಳಕೆ ಖಚಿತಪಡಿಸಿಕೊಳ್ಳಲು, ಕರ್ನಾಟಕವು ಈ ಕ್ಷೇತ್ರದ ಜಾಗತಿಕ ಮುಖಂಡರು ಮತ್ತು ಸಂಶೋಧಕರ ಜೊತೆಗೆ ನಿಕಟ ಸಂಪರ್ಕದಲ್ಲಿ ಇದೆಎಂದು ಹೇಳಿದರು.

ಆಸ್ಪತ್ರೆ ಕಾರ್ಯನಿರ್ವಹಣೆಗೆ ಸುಧಾರಿತ ಎಂಟರ್‌ಪ್ರೈಸ್ ʼಎಐʼ ಅನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲು ಎಚ್‌ ಕಂಪನಿ ಮತ್ತು ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜ್ ಮತ್ತು ಸೇಂಟ್ ಜಾನ್ಸ್ ಸಂಶೋಧನಾ ಸಂಸ್ಥೆ‌ ನಡುವಣ ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ಸಚಿವರು ಸಾಕ್ಷಿಯಾದರು.

AI Summit on PM Modi : ಹೊಸ ತಂತ್ರಜ್ಞಾನಗಳಿಂದ ಒಳ್ಳೆಯದರ ಜೊತೆ ಕೆಟ್ಟದ್ದು ಇದೆ..! #pratidhvani

ಕರ್ನಾಟಕ ಮತ್ತು ಜಾಗತಿಕ ಉದ್ಯಮಗಳ ನಡುವೆ ತಂತ್ರಜ್ಞಾನ ಸಹಯೋಗ, ಹೂಡಿಕೆ ಪಾಲುದಾರಿಕೆ ಮತ್ತು ನಾವೀನ್ಯತೆ ಆಧಾರಿತ ಬೆಳವಣಿಗೆ ಬಲಪಡಿಸುವ ಕುರಿತ ಚರ್ಚೆಗಳಿಗೆ ವೇದಿಕೆ ಕಲ್ಪಿಸಿದ್ದ ಅಮೆರಿಕ – ಭಾರತ ವಾಣಿಜ್ಯ ಮಂಡಳಿಯು (ಯುಎಸ್ಐಬಿಸಿ) ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಭಾಗವಹಿಸಿದ್ದರು.

Dk shivakumar : ಸಾರಿಗೆ ನೌಕರರು ಇಷ್ಟು ಕೊಟ್ಟಿರೋದಕ್ಕೆ ತೃಪ್ತಿ ಪಡಿ #pratidhvani #dkshivakumar #ksrtc

ಬೆಂಗಳೂರಿನಲ್ಲಿ ಅಮೆರಿಕದ ಕಂಪನಿಗಳು ತಮ್ಮ ವಹಿವಾಟು ವಿಸ್ತರಿಸಲು ಮತ್ತು ನಾವೀನ್ಯತೆ ಸಾಧಿಸಲು ಹೆಚ್ಚು ಅನುಕೂಲಕರ ವಾತಾವರಣ ಒದಗಿಸಲು ರಾಜ್ಯ ಸರ್ಕಾರದ ಬದ್ಧತೆಯನ್ನು ಈ ಸಭೆಯಲ್ಲಿ ಪುನರುಚ್ಚರಿಸಲಾಯಿತು. ಅಲ್ಲದೇ ಫಿನ್ಲೆಂಡ್‌ ಹಾಗೂ ಸೈಪ್ರಸ್‌ನ ಉನ್ನತ ನಿಯೋಗವನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಕರ್ನಾಟಕ ಪೆವಿಲಿಯನ್ ಮತ್ತು ಆರ್ಟ್‌ಪಾರ್ಕ್ ಪೆವಿಲಿಯನ್‌ಗಳಿಗೂ ಭೇಟಿ ನೀಡಿದ್ದರು. ವಿವಿಧ ನವೋದ್ಯಮಗಳ ಮುಖ್ಯಸ್ಥರ ಜೊತೆಗೆ ಸಚಿವರು ಸಮಾಲೋಚನೆ ನಡೆಸಿದರು.

Tags: AI Impact SummitDelhiIndiaKarnataka PoliticsNarebdra ModiPoliticsPriyank Kharge
Previous Post

ಶಾಲಿನಿ ರಜನೀಶ್‌ ವಿರುದ್ಧ ಇ.ಡಿ.ಗೆ ದೂರು : ದಾಖಲೆ ಸಮೇತ ಸ್ನೇಹಮಯಿ ಕೃಷ್ಣ ಸ್ಫೋಟಕ ಆರೋಪಗಳೇನು..?

Next Post

ಗ್ರಾಮೀಣ ಯುವಕರ ಮದುವೆಗೆ ಪ್ರೋತ್ಸಾಹ: ವಿಶೇಷ ಭತ್ಯೆ ನೀಡಲು ಸಿಎಂಗೆ ಶಾಸಕರ ಮನವಿ

Related Posts

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ
Top Story

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

by ಪ್ರತಿಧ್ವನಿ
April 9, 2026
0

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
ಗ್ರಾಮೀಣ ಯುವಕರ ಮದುವೆಗೆ ಪ್ರೋತ್ಸಾಹ: ವಿಶೇಷ ಭತ್ಯೆ ನೀಡಲು ಸಿಎಂಗೆ ಶಾಸಕರ ಮನವಿ

ಗ್ರಾಮೀಣ ಯುವಕರ ಮದುವೆಗೆ ಪ್ರೋತ್ಸಾಹ: ವಿಶೇಷ ಭತ್ಯೆ ನೀಡಲು ಸಿಎಂಗೆ ಶಾಸಕರ ಮನವಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada