ಬೆಂಗಳೂರು : ಕೊಟ್ಟೋನು ಕೋಡಂಗಿ ಇಸ್ಕೊಂಡೋನು ವೀರಭದ್ರ ಎಂಬ ಗಾದೆ ಮಾತೊಂದಿದೆ. ಇದೀಗ ರಾಜ್ಯ ಸರ್ಕಾರದ ಕತೆ ಕೂಡ ಇದೇ ಆಗಿದೆ. ಜುಲೈ 1ರಿಂದ ರಾಜ್ಯದ ಜನತೆಗೆ 200 ಯುನಿಟ್ ಕರೆಂಟ್ ಫ್ರೀ ಎಂದಿದ್ದ ಸಿದ್ದು ನೇತೃತ್ವ ಸರ್ಕಾರ ಇದರ ಬೆನ್ನಲ್ಲೇ ವಿದ್ಯುತ್ ದರ ಏರಿಕೆಯ ಶಾಕ್ನ್ನೂ ಕೊಟ್ಟಿದೆ. ಜುಲೈ 1ರಿಂಧ 200 ಯುನಿಟ್ ಕರೆಂಟ್ ಫ್ರೀ ಜೊತೆಯಲ್ಲಿ ಪ್ರತಿ ಯುನಿಟ್ಗೆ 70 ಪೈಸೆ ದರ ಏರಿಕೆ ಕೂಡ ಅನ್ವಯವಾಗಲಿದೆ.

ಏಪ್ರಿಲ್ ತಿಂಗಳಲ್ಲಿಯೇ ಈ ಬೆಲೆ ಏರಿಕೆ ಜಾರಿಯಾಗಬೇಕಿತ್ತು. ಆದರೆ ಚುನಾವಣೆಯಿಂದಾಗಿ ಈ ಆದೇಶಕ್ಕೆ ತಡೆ ಹಿಡಿಯಲಾಗಿತ್ತು. ಆದರೆ ಇದೀಗ ವಿದ್ಯುತ್ ಬೆಲೆ ಆದೇಶ ಹೊರಬಿದ್ದಿದ್ದು ಎಲ್ಲಾ ಐದು ನಿಗಮಗಳಲ್ಲಿಯೂ ಜುಲೈ 1ರಿಂದ ಪ್ರತಿ ಯುನಿಟರ್ಗೆ 70 ಪೈಸೆ ಏರಿಕೆಯಾಗಲಿದೆ.
2023ರ ಡಿಸೆಂಬರ್ವರೆಗೂ ಏರಿಕೆ ಮಾಡಲಾದ ವಿದ್ಯುತ್ ದರದ ಡಿಟೈಲ್ಸ್ನ ಸಂಪೂರ್ಣ ವಿವರ ಇಲ್ಲಿದೆ.
ಜುಲೈ 2023 ರಿಂದ ಸೆ.31 ರವರೆಗೆ ಹೆಚ್ಚಳ
ಬೆಸ್ಕಾಂ: 51 ಪೈಸೆ
ಮೆಸ್ಕಾಂ: 47 ಪೈಸೆ
ಚೆಸ್ಕಾಂ: 41 ಪೈಸೆ
ಹೆಸ್ಕಾಂ: 50 ಪೈಸೆ
ಜೆಸ್ಕಾಂ: 34 ಪೈಸೆ
ಅಕ್ಟೋಬರ್ 2023 ರಿಂದ ಡಿಸೆಂಬರ್ 30 ರವರೆಗಿನ ಹೆಚ್ಚಳ
ಬೆಸ್ಕಾಂ: 50 ಪೈಸೆ
ಮೆಸ್ಕಾಂ: 46 ಪೈಸೆ
ಚೆಸ್ಕಾಂ: 41 ಪೈಸೆ
ಹೆಸ್ಕಾಂ: 50 ಪೈಸೆ
ಜೆಸ್ಕಾಂ: 33 ಪೈಸೆ
ಹೀಗೆ 2023ರವರೆಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಹೆಚ್ಚಳ ಮಾಡಿದೆ.






