ರಾಜ್ಯದಲ್ಲಿ ಕರೋನಾ ನಿಯಂತ್ರಣ ಸಂಬಂಧ ಲಾಡ್‌ಡೌನ್ ವಿಧಿಸಿದ ಹಿನ್ನೆಲೆ, ಬಡವರು, ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೊಳಗಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ವಿವಿಧ ವರ್ಗಗಳಿಗೆ ಒಟ್ಟು 1250 ಕೋಟಿ ರೂ ಮೊತ್ತದ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಯಾವ್ಯಾವ ವರ್ಗಕ್ಕೆ ಎಷ್ಟು ಪರಿಹಾರ ಇಲ್ಲಿದೆ ಮಾಹಿತಿ
ಪ್ರತಿ ಹೆಕ್ಟೇರ್ ಹೂವು ಹಾನಿಗೆ 10 ಸಾವಿರ ರೂ. ಸಹಾಯಧನ – ಇದಕ್ಕಾಗಿ 12.73 ಕೋಟಿ ಖರ್ಚು -20 ಸಾವಿರ ರೈತರಿಗೆ ಸಹಾಯ
ಹಣ್ಣು ತರಕಾರಿ ಬೆಳೆಗಾರರಿಗೆ ಗರಿಷ್ಠ ಇಂದು ಹೆಕ್ಟೆರ್‌ಗೆ ತಲಾ 10 ಸಾವಿರ ರೂ ಸಹಾಯಧನ -69 ಕೋಟಿ ರೂ ಖರ್ಚು – ಸುಮಾರು 70 ಸಾವಿರ ರೈತರಿಗೆ ಸಹಾಯ
ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ 3 ಸಾವಿರ ಪರಿಹಾರ
ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ಪರಿಹಾರ.
ಅಸಂಘಟಿತ ವಲಯದ ಕ್ಷೌರಿಕರು, ಮಡಿವಾಳರು, ಕಮ್ಮಾರರು, ನೇಕಾರರು ಸೇರಿದಂತೆ ಕುಲಕಸುಬು ಆಧಾರಿತ ಕಾರ್ಮಿಕರಿಗೆ ತಲಾ 2 ಸಾವಿರ ಪರಿಹಾರ
ಬೀದಿ ವ್ಯಾಪಾರಸ್ತರಿಗೆ ತಲಾ 2 ಸಾವಿರ ಪರಿಹಾರ
ಕಲಾವಿದರು ಮತ್ತು ಕಲಾವಿದರು ಮತ್ತು ಕಲಾತಂಡಗಳಿಗೆ 3 ಸಾವಿರ ನೆರವು
ಪ್ರಧಾನ ಮಂತ್ರಿ ಗರೀಬ್ ಯೋಜನೆ ಅಡಿ ಬಿಪಿಎಲ್ ಕಾರ್ಡುದಾರರಿಗೆ 5 ಕೆ.ಜಿ ಅಕ್ಕಿ ವಿತರಿಸಲು ನಿರ್ಧಾರ
APL ಕಾರ್ಡುದಾರರಿಗೆ 15 ರೂ. ನಂತೆ 5 ಕೆಜಿ ಅಕ್ಕಿ
ಇಂದಿರಾ ಕ್ಯಾಂಟೀನ್‌ನಲ್ಲಿ ಆರು ಲಕ್ಷ ಜನರಿಗೆ ಉಚಿತ ಊಟ
ಲೈನ್ ಮೆನ್ ಗಳು, ಗ್ಯಾಸ್ ಸಿಲೆಂಡರ್ ವಿತರಕರನ್ನ ಫ್ರೆಂಟ್ ಲೈನ್ ವರ್ಕರ್ಸ್ ಎಂದು ಪರಿಗಣಿಸಿ ಲಸಿಕೆ ನೀಡಲು ಆದ್ಯತೆ
ರೈತರ ಸ್ವಸಹಾಯ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಮತ್ತು ಭೂ ಅಭಿವೃದ್ಧಿ ಬ್ಯಾಂಕ್‌ಗಳಿಂದ ಸಣ್ಣ, ಮಧ್ಯಮ, ದೀರ್ಘವಧಿಯ ಸಾಲಗಳ ಮರುಪಾವತಿಯ ದಿನಾಂಕವನ್ನು ಜುಲೈ 31 ರವರೆಗೆ ವಿಸ್ತರಿಸಲಾಗಿದೆ.
ಕೋವಿಡ್ ನಿರ್ವಹಣೆಗಾಗಿ ಎಸ್.ಡಿ.ಎಫ್ ಹಣವನ್ನ ಪ್ರತಿ ಗ್ರಾಮ ಪಂಚಾಯತಿಗಳಿಗೆ 50 ಸಾವಿರ ಅನುದಾನ . ಪ್ರತಿ ಗ್ರಾಮ ಪಂಚಾಯತ್‌ನಲ್ಲೂ ಕೋವಿಡ್ ನಿರ್ವಹಣೆಗೆ SDRF ಹಣ ಬಳಕೆ ಮಾಡಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಪರಿಹಾರದ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವುದಾಗಿ ತಿಳಿಸಲಾಗಿದೆ. ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ವಿಸ್ತರಣೆಯ ಬಗ್ಗೆ ಮೇ 23 ಕ್ಕೆ ನಿರ್ಧರಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.