ಎಚ್.ಡಿ.ಕೋಟೆ : ಮೇ.12: ವಿಧಾನಸಭಾ ಚುನಾವಣೆ ಪಲಿತಾಂಶದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಉಬಯ ಪಕ್ಷಗಳ ಪರವಾಗಿ 10ಲಕ್ಷ ಎಲೆಕ್ಷನ್ ಬೆಟ್ಟಿಂಗ್ ಕಟ್ಟಿ ಜಾಲತಾಣದಲ್ಲಿ ಹರಿಯ ಬಿಟ್ಟ 7ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ. ತಾಲೂಕಿನ ಬೆಳ್ತೂರು ಎ.ಕಾಲೋನಿ ಗ್ರಾಮದ ನಿವಾಸಿ ಜಯರಾಮನಾಯಕ, ಗುಂಡತ್ತೂರು ಗ್ರಾಮದ ಪ್ರಕಾಶ, ಬೆಳಗನಹಳ್ಳಿ ಗ್ರಾಮದ ಬಿ.ಕೆ.ಶಿವರಾಜು ಚಲುವರಾಜು ಇತರೆ ಮೂರು ಮಂದಿ ಸೇರಿ 7ಜನರ ವಿರುದ್ದ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ : ಖಲೆದ ಎರಡು ದಿನಗಳ ಹಿಂದೆ ನಡೆದ ವುಧಾನಸಭಾ ಚುನಾವಣೆಯಲ್ಲಿ ಎಚ್.ಡಿ.ಕೋಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅನಿಲ್ ಚಿಕ್ಕಮಾದು ಗೆಲುವು ಸಾಧಿಸಿವುದಾಗಿ ಜಯರಾಮನಾಯಕ 5ಲಕ್ಷ ಎಲೆಕ್ಷನ್ ಬೆಟ್ಟಿಂಗ್ ಕಟ್ಟಿದರೆ ಪ್ರಕಾಶ ಮತ್ತು ಶಿವರಾಜು ಜೆಡಿಎಸ್ ಗೆಲುವು ಸಾಧಿಸಿವುದಾಗಿ 5ಲಕ್ಷ ಸೇರಿ ಒಟ್ಟ 10ಲಕ್ಷ ಎಲೆಕ್ಷನ್ ಬೆಟ್ಟಿಂಗ್ ಕಟ್ಟಿ ಅಗ್ರಿಮೆಂಟ್ ಮಾಡಿಸಿದ ಅಗ್ರಿಮೆಂಟ್ ಪತ್ರ ಸೇರಿದಂತೆ ಪತ್ರದ ಕೈಯಲ್ಲಿ ಹಿಡಿದುಕೊಂಡ ಫೋಟೋಗಳನ್ನು ಜಾಲ ತಾಣದಲ್ಲಿ ಕಳೆದ ರಾತ್ರಿ ಹರಿಯ ಬಿಟ್ಟಿದ್ದರು.

ಬೆಟ್ಟಿಂಗ್ ಕಟ್ಟಿದ್ದ 10ಲಕ್ಷ ಹಣವನ್ನು ಉಬಯ ಕಡೆಯವರು ಎಚ್.ಡಿ.ಕೋಟೆ ಪಟ್ಟಣದ ವಾಸಿ ಪೂಜಾ ಎಲೆಕ್ಟ್ರಿಕಲ್ ಮತ್ತು ಹಾರ್ಡ್ ವೇರ್ ಅಂಗಡಿ ಮಾಲೀಕ ಸೇಮಿಚಂದ್ ಬಳಿ ನಿನ್ನೆಯೇ ಇರಿಸಿರುವುದಾಗಿ ಅಗ್ರಿಮೆಂಟ್ ಪತ್ರದಲ್ಲಿ ನಮೋದಿಸಿದ್ದರು. ಜಾಲತಾಣದಲ್ಲಿನ ಸುದ್ದಿ ಗಮನಿಸಿದ ಎಸ್ ಪಿ ಸೀಮಾ ಲಟ್ಕರ್ ಹಾಗೂ ಡುವೈಎಸ್ ಪಿ ಮಹೇಶ್ ಮಾರ್ಗದರ್ಶನದಲ್ಲಿ ಎಚ್.ಡಿ.ಕೋಟೆ ಸರ್ಕಲ್ ಇನ್ಸ್ ಪೆಕ್ಟರ್ ಶಬ್ಬೀರ್ ಹುಸೇನ್ ಪಿಎಸ್ ಐ ರಸೂಲ್ ಬೆಟ್ಟಿಂಗ್ ದಾರರನ್ನು ವಶಕ್ಕೆ ತೆಗೆದುಕೊಂಡು ಅಗ್ರಿಮೆಂಟ್ ಮಾಡಿದ್ದ ಮೂಲ ಅಗ್ರಿಮೆಂಟ್ ಪತ್ರ ಹಾಗೂ ಪಣಕ್ಕಿಟ್ಟಿದ್ದ 5ಲಕ್ಷ ನಗದು ವಶಕ್ಕೆ ತೆಗೆದುಕೊಂಡು ಘಟನೆಗೆ ಸಹಕಾರಿಯಾದ ಒಟ್ಟು 7ಜನರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.