• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, August 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಪ್ರಧಾನಿ ನರೇಂದ್ರ ಮೋದಿಗೆ ಪ್ರಶ್ನೆಗಳ ಸರಮಾಲೆ.. ಬಿಜೆಪಿ ಬಳಿ ಆನ್ಸರ್ ಇದ್ಯಾ..?

Krishna Mani by Krishna Mani
April 13, 2024
in ರಾಜಕೀಯ
0
ಪ್ರಧಾನಿ ನರೇಂದ್ರ ಮೋದಿಗೆ ಪ್ರಶ್ನೆಗಳ ಸರಮಾಲೆ.. ಬಿಜೆಪಿ ಬಳಿ ಆನ್ಸರ್ ಇದ್ಯಾ..?
Share on WhatsAppShare on FacebookShare on Telegram

ಭಾನುವಾರ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರ್ತಿದ್ದಾರೆ. ರಾಜ್ಯದ ಜನರ ಪರವಾಗಿ ಸರ್ಕಾರದಲ್ಲಿ ಮಂತ್ರಿ ಆಗಿರುವ ಕೃಷ್ಣಬೈರೇಗೌಡ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವುದು ಕರ್ನಾಟಕ. ಆದರೆ ದೇಶದಲ್ಲೇ ಅತಿ ಕಡಿಮೆ ವಾಪಸ್ ನಮ್ಮ ರಾಜ್ಯಕ್ಕೆ ಬರ್ತಿದೆ. ಕಳೆದ ಬಾರಿ 26 ಸೀಟುಗಳನ್ನ ಬಿಜೆಪಿ ಪಡೆದಿತ್ತು. ನಮ್ಮ ತೆರಿಗೆ ಹಣವನ್ನೂ ತೆಗೆದುಕೊಳ್ತಾರೆ, ನಮ್ಮ ಸಂಸದ ಸೀಟು ಪಡೆದುಕೊಳ್ತಾರೆ. ಆದರೆ ನಮಗೆ ಕೊಡಬೇಕಾದ ನ್ಯಾಯ ಕೊಡ್ತಿಲ್ಲ. ಮನೆಯಲ್ಲಿ ಎಲ್ಲ ಪಡೆದು ಖಾಲಿ ಕೈ ತೋರಿಸ್ತಾರೆ ಎಂದು ಕೃಷ್ಣಬೈರೇಗೌಡ ದೂರಿದ್ದಾ

ADVERTISEMENT

ಉಂಡುಹೋದ ಕೊಂಡು ಹೋದ ಎಂಬ ಮಾತಿದೆ. ನಮ್ಮ ಮನೆಯಲ್ಲೇ ಉಂಡು ಇಲ್ಲಿಂದಲೇ ಪಡೆದಿದ್ದಾರೆ. ಆದರೆ ತೆರಿಗೆ ಪಾಲು ಪಾತ್ರ ನಮಗೆ ಕೊಡ್ತಿಲ್ಲ. ರಾಜ್ಯ ಪ್ರತಿಭಾರಿ ನೀರಿನ ಸಮಸ್ಯೆ ಎದುರಿಸ್ತಿದೆ. ಅತಿ ಹೆಚ್ಚು ಖುಷ್ಕಿ ಪ್ರದೇಶ ಇರುವುದು ನಮ್ಮ ರಾಜ್ಯದಲ್ಲಿ. ಮಳೆ ಮೇಲೆ ಅವಲಂಬಿತ ಆಗಿರುವ ರಾಜ್ಯ ನಮ್ಮ ಕರ್ನಾಟಕ. ಬರಗಾಲಕ್ಕೆ ತುತ್ತಾಗುವುದು ಕರ್ನಾಟಕ, ನಮ್ಮ ಜೀವನ ನೀರಿನ ಮೇಲೆ ಅವಲಂಬಿತವಾಗಿದೆ. ನದಿಯ ನೀರು ಉಪಯೋಗಕ್ಕೂ ಬರ್ತಿಲ್ಲ. ಕೇಂದ್ರ ನಿರಂತರವಾಗಿ ಅನ್ಯಾಯ ಮಾಡ್ತಿದೆ. ನೀರು ಬಳಸಿಕೊಳ್ಳಲು ಅವಕಾಶ ಮಾಡಿಕೊಡ್ತಿಲ್ಲ. ಈ ಪ್ರಶ್ನೆಗಳಿಗೆ ಪ್ರಧಾನಿ ಉತ್ತರ ಕೊಡಲೇಬೇಕು ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರದ ಬಜೆಟ್ ಬುಕ್ ಪ್ರದರ್ಶಿಸಿದ ಕೃಷ್ಣಬೈರೇಗೌಡ, ಕಳೆದ ಬಾರಿ ಬಜೆಟ್‌ನಲ್ಲಿ ಅಪ್ಪರ್ ಭದ್ರಾ ಯೋಜನೆಗೆ 5,300 ಕೋಟಿ ನೀಡುವ ಘೋಷಣೆ ಮಾಡಲಾಗಿತ್ತು. ಬಜೆಟ್ ಪಾಸ್ ಆದ್ರೆ ಕಾನೂನಿಗೆ ಸಮಾನ. ಅದನ್ನು ಯಥಾವತ್ ಅನುಷ್ಠಾನ ಮಾಡಬೇಕು. 5300 ಕೋಟಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿ, 1 ವರ್ಷ ಮೂರು ತಿಂಗಳು ಮುಗಿದಿದೆ. ಆದರೆ ನಯಾಪೈಸೆ ಹಣವನ್ನ ಬಿಡುಗಡೆ ಮಾಡಿಲ್ಲ. ಇದರ ಬಗ್ಗೆ ಪ್ರಧಾನಿ ಭಾಷಣದಲ್ಲಿ ಉತ್ತರಿಸಬೇಕು. 16 ಆಗಸ್ಟ್‌ 2023 ರಂದು ಸರ್ಕಾರದಿಂದ ಪತ್ರ ಬರೆದು, ಅಪ್ಪರ್ ಭದ್ರಾ ಯೋಜನೆಯ ಹಣ ಕೊಡುವಂತೆ ಕೇಳಿಕೊಂಡಿದ್ದೆವು. ಡಿಸಿಎಂ ಡಿ.ಕೆ ಶಿವಕುಮಾರ್‌ ಕೂಡ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದರು. ಟಿ.ಬಿ ಜಯಚಂದ್ರ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕೂಡ ಪತ್ರ ಬರೆದಿದ್ರು. ಖುದ್ದು ಡಿ.ಕೆ ಶಿವಕುಮಾರ್‌ ಕೇಂದ್ರ ಸಚಿವರನ್ನ ಭೇಟಿ ಮಾಡಿದ್ರು. ಆದರೂ ಹಣ ಬಿಡುಗಡೆ ಮಾಡಲಿಲ್ಲ.

ಮಹದಾಯಿ ಯೋಜನೆಗೆ ಒಂದೇ ಒಂದು ಅನುಮತಿ ಕೊಟ್ಟಿಲ್ಲ. ಇದರ ಬಗ್ಗೆ ಪ್ರಧಾನಿಗಳು ಉತ್ತರಿಸಬೇಕು. ನಾವು ಅನುಮತಿ ಕೊಡ್ತೇವೆ ಅಂತ ಘೋಷಿಸಲಿ. ಸೆಂಟ್ರಲ್ ಮಿನಿಸ್ಟರ್ ಆಗಿದ್ದಾರೆ ಪ್ರಹ್ಲಾದ್ ಜೋಶಿ, ಅಷ್ಟಾದ್ರೂ ಯೋಜನೆಗೆ ಅನುಮತಿ ಕೊಡಿಸಿಲ್ಲ. ಮಹದಾಯಿ ಯೋಜನೆಯನ್ನ ತಪ್ಪಿಸಿದ್ದಾರೆ. ಮಹದಾಯಿ ಯೋಜನೆಗೆ ಯಾಕೆ ಅಡ್ಡಗಾಲು ಹಾಕಿದ್ರು..? ನಮಗೆ ಹಂಚಿಕೆಯಾದ ನೀರನ್ನ ಯಾಕೆ ಕೊಡಲಿಲ್ಲ..? ನಮ್ಮ ರಾಜ್ಯಕ್ಕೆ ಯಾಕೆ ಅನ್ಯಾಯ ಮಾಡ್ತಿದ್ದೀರಾ..? ಎಂದು ಕೃಷ್ಣಬೈರೇಗೌಡ ನೇರವಾಗಿ ಕೇಳಿದ್ದಾರೆ.

ಮೇಕೆದಾಟು ಬೇಡ ಅಂತ ತಮಿಳುನಾಡು ಸರ್ಕಾರ ಅರ್ಜಿ ಹಾಕಿಕೊಂಡಿದೆ. 2023ರಲ್ಲಿ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದೆ. ಆದರೆ ನ್ಯಾ. ಗವಾಯಿಯವರ ಪೀಠ ಸ್ಪಷ್ಟ ತೀರ್ಪು ಕೊಟ್ಟಿದ್ದು, ಹಂಚಿಕೆ ನೀರನ್ನ ತಮಿಳುನಾಡಿಗೆ ಬಿಡಬೇಕು, ಉಳಿದ ನೀರನ್ನ ಹೇಗೆ ಬೇಕಾದ್ರೂ‌ ಬಳಸಿಕೊಳ್ಳಬಹುದು. ಇದನ್ನ ತಮಿಳುನಾಡು ತಡೆಯೋಕೆ ಬರಲ್ಲ ಎಂದಿದೆ. ಇಷ್ಟಾದ್ರೂ ಕೇಂದ್ರ ಸರ್ಕಾರ ಅನುಮತಿ ಕೊಡ್ತಿಲ್ಲ. ಮೇಕೆದಾಟು ಯೋಜನೆಗೆ ಅವಕಾಶ ಕೊಟ್ಟಿಲ್ಲ. ಅವಶ್ಯತೆಕತೆಗಿಂತ ಹೆಚ್ಚು ನೀರು ಬಿಟ್ಟಿದ್ದೇವೆ. ಮೇಕೆದಾಟು ಆದರೆ ಬೆಂಗಳೂರು, ರಾಮನಗರ, ಮಂಡ್ಯಕ್ಕೆ ನೀರು ಸಿಗಲಿದೆ. ತಮಿಳುನಾಡಿಗೂ‌ ನೀರು ಸಿಗಲಿದೆ. ಆದರೂ ಯಾಕೆ ಪರ್ಮಿಷನ್‌ ಕೊಡ್ತಿಲ್ಲ ಪ್ರಧಾನಿ ಉತ್ತರಿಸಬೇಕು ಎಂದಿದ್ದಾರೆ.

ಕೃಷ್ಣಮಣಿ

Tags: BJPCongress PartyKrishnabyregowdaಕೃಷ್ಣಬೈರೇಗೌಡನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ‘ಉತ್ತರ’ ಕೇಳಿದ ಪ್ರೊಫೆಸರ್.!!

Next Post

ಮನ್ವಂತರ ಕಾಲದಲ್ಲಿ ಅಂಬೇಡ್ಕರ್‌ ಪ್ರಸ್ತುತತೆಡಿಜಿಟಲ್‌ ಜಗತ್ತಿನ ವಿಶ್ವಗುರುವಾದರೂ ಭಾರತವನ್ನು ಕಾಡುತ್ತಿರುವುದು ಪ್ರಾಚೀನ ಮನು-ಸ್ಥಿತಿ

Related Posts

ಶಿವಶಂಕರಪ್ಪ ಸಾಹುಕಾರ್‌ಗೆ ಬಿಗ್‌ ರಿಲೀಫ್‌: ಶೀಘ್ರವೇ ಮತ್ತೆ KPSC ಅಧ್ಯಕ್ಷ ಪಟ್ಟ
Top Story

ಶಿವಶಂಕರಪ್ಪ ಸಾಹುಕಾರ್‌ಗೆ ಬಿಗ್‌ ರಿಲೀಫ್‌: ಶೀಘ್ರವೇ ಮತ್ತೆ KPSC ಅಧ್ಯಕ್ಷ ಪಟ್ಟ

by ಪ್ರತಿಧ್ವನಿ
August 18, 2026
0

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಅಲ್ಲದೇ 7 ದಿನಗಳೊಳಗೆ ಮತ್ತೆ...

Read moreDetails
ಜೈಲಿಗೆ ಹಾಕಿದ್ರೂ ನಾವು ‘ವಂದೇ ಮಾತರಂ’ ಎರಡೇ ಪ್ಯಾರಾ ಹಾಡೋದು: ಬಿ.ಕೆ ಹರಿಪ್ರಸಾದ್‌

ಜೈಲಿಗೆ ಹಾಕಿದ್ರೂ ನಾವು ‘ವಂದೇ ಮಾತರಂ’ ಎರಡೇ ಪ್ಯಾರಾ ಹಾಡೋದು: ಬಿ.ಕೆ ಹರಿಪ್ರಸಾದ್‌

August 18, 2026
ರಾಜ್ಯದಲ್ಲಿ ಶೀಘ್ರವೇ ಉದ್ಯೋಗ ಸೇತು ಯೋಜನೆ ಆರಂಭ: ಸಿಎಂ ಡಿ.ಕೆ ಶಿವಕುಮಾರ್

ರಾಜ್ಯದಲ್ಲಿ ಶೀಘ್ರವೇ ಉದ್ಯೋಗ ಸೇತು ಯೋಜನೆ ಆರಂಭ: ಸಿಎಂ ಡಿ.ಕೆ ಶಿವಕುಮಾರ್

August 18, 2026
JSSC-CGL ಪರೀಕ್ಷೆ ರದ್ದು: 16 ದಿನಗಳ ಉಪವಾಸ ಅಂತ್ಯಗೊಳಿಸಿದ ವಿದ್ಯಾರ್ಥಿ ನಾಯಕ

JSSC-CGL ಪರೀಕ್ಷೆ ರದ್ದು: 16 ದಿನಗಳ ಉಪವಾಸ ಅಂತ್ಯಗೊಳಿಸಿದ ವಿದ್ಯಾರ್ಥಿ ನಾಯಕ

August 18, 2026
ರಾಮಮಂದಿರ ದೇಣಿಗೆ ಕಳವು ಪ್ರಕರಣ: ಚಂಪತ್ ರಾಯ್‌ಗೆ SIT ಕ್ಲೀನ್ ಚಿಟ್

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಚಂಪತ್ ರಾಯ್‌ಗೆ SIT ಕ್ಲೀನ್ ಚಿಟ್

August 18, 2026
Next Post
ಮನ್ವಂತರ ಕಾಲದಲ್ಲಿ ಅಂಬೇಡ್ಕರ್‌ ಪ್ರಸ್ತುತತೆಡಿಜಿಟಲ್‌ ಜಗತ್ತಿನ ವಿಶ್ವಗುರುವಾದರೂ ಭಾರತವನ್ನು ಕಾಡುತ್ತಿರುವುದು ಪ್ರಾಚೀನ ಮನು-ಸ್ಥಿತಿ

ಮನ್ವಂತರ ಕಾಲದಲ್ಲಿ ಅಂಬೇಡ್ಕರ್‌ ಪ್ರಸ್ತುತತೆಡಿಜಿಟಲ್‌ ಜಗತ್ತಿನ ವಿಶ್ವಗುರುವಾದರೂ ಭಾರತವನ್ನು ಕಾಡುತ್ತಿರುವುದು ಪ್ರಾಚೀನ ಮನು-ಸ್ಥಿತಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada