ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಮಹತ್ವದ ಯೋಜನೆಯದ ಗೃಹಲಕ್ಷ್ಮಿ ಯೋಜನೆಗೆ ಇದೀಗ ದಿನಾಂಕ ನಿಗದಿಯಾಗಿದೆ ಇದೆ 19 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಧಿಕೃತವಾದ ಮಾಹಿತಿ ನೀಡಿದ್ದು ಆ ಕುರಿತ ಸಂಪೂರ್ಣ ವಿವರ ಇಲ್ಲಿದೆ..
ಈ ಕುರಿತು ಮಾತನಾಡಿರುವ ಅವರು ಗೃಹಲಕ್ಷ್ಮೀ ಯೋಜನೆಯ ಕಾರ್ಯಕ್ರಮ ಉದ್ಘಾಟನೆಯನ್ನು ನಮ್ಮ ರಾಷ್ಟ್ರೀಯ ನಾಯಕರಲ್ಲಿ ಮಾಡುವಂತೆ ವಿನಂತಿಸಿಕೊಂಡಿದ್ದೇವೆ. ಈ ಬಗ್ಗೆ ಇಂದು ಮದ್ಯಾಹ್ನ 2 ಗಂಟೆಗೆ ರಾಷ್ಟ್ರೀಯ ನಾಯಕರು ಅಧಿಕೃತವಾಗಿ ಒಪ್ಪಿಗೆ ಸೂಚಿಸಲಿದ್ದಾರೆ ಎಂದು ನಾವು ಭಾವಿಸಿದ್ದೇವೆ. ಒಂದು ವೇಳೆ ಅವರು ಒಪ್ಪಿಗೆ ಸೂಚಿಸಿದರೆ ಸೋಮವಾರ ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ಉದ್ಘಾಟನೆ ಮಾಡಿಸಲಾಗುತ್ತದೆ. ಅವರು ಬರದೇ ಇದ್ದರೆ ಜುಲೈ 19 ರಂದು ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ
ಗೃಹ ಲಕ್ಷ್ಮೀ ಯೋಜನೆಯ ಲಾಭವನ್ನು ಸುಮಾರು 1.28 ಲಕ್ಷ ಕುಟುಂಬಗಳು ಪಡೆಯಬಹುದು ಎಂದಿರುವ ಲಕ್ಷ್ಮಿ ಹೆಬ್ಬಾಳ್ಕರ್, ನಾವು SMS ಮೂಲಕ ಫಲಾನುಭವಿಗಳಿಗೆ ಮೆಸೇಜ್ ಕಳುಹಿಸುತ್ತೇವೆ. ಈ ಮೆಸೇಜ್ ನಲ್ಲಿ ಅರ್ಜಿ ಹಾಕುವ ಸಮಯ, ಸ್ಥಳ ತಿಳಿಸಿರುತ್ತೇವೆ ಅಲ್ಲಿ ಹೋಗಿ ನೋಂದಣಿ ಮಾಡಿಸಬಹುದಾಗಿದೆ. ಅರ್ಜಿ ಹಾಕಲು ಯಾವುದೇ ಕೊನೆಯ ದಿನಾಂಕ ನಿಗದಿ ಮಾಡಿಲ್ಲ. ಏನಾದ್ರೂ ಗೊಂದಲ ಇದ್ರೆ 8147500500 ಮೊಬೈಲ್ ಸಂಖ್ಯೆಗೆ ಮೆಸೇಜ್ ಮಾಡಬಹುದು. 1902 ಹೆಲ್ಪ್ ಲೈನ್ ನಂಬರ್‌ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಅರ್ಜಿ ಹಾಕಲು ಯಾವುದೇ ಹಣ ನೀಡುವಂತಿಲ್ಲ ಎಂದು ಮಾಹಿತಿ ನೀಡಿದ್ದಾರೆ
ಅರ್ಜಿ ಹಾಕಿದ ಮಹಿಳೆಯರ ಖಾತೆಗೆ ಆಗಸ್ಟ್ ತಿಂಗಳಿನಿಂದ ಹಣ ಬರಲಿದೆ ಎಂಬ ಮಾಹಿತಿ ನೀಡಿರುವ ಸಚಿವೆ. ಅರ್ಜಿ ಹಾಕಿದ ತಿಂಗಳಿಂದ ಮಹಿಳೆಯರಿಗೆ ಹಣ ಬರುತ್ತೆ ಅನ್ನೋದನ್ನ ಖಚಿತ ಪಡಿಸಿದ್ದಾರೆ. ಜೂನ್, ಜುಲೈ ತಿಂಗಳ ಹಣ ಕೊಡಲು ಬರುವುದಿಲ್ಲ ಎನ್ನಲಾಗಿದ್ದು. ಕಾರ್ಡ್‌ನಲ್ಲಿರುವ ಮನೆಯ ಯಜಮಾನಿ ಮರಣ ಹೊಂದಿದ್ರೆ. ಅಂತವರ ಮರಣ ಪತ್ರವನ್ನ ಮನೆಯವರು ನೀಡಬೇಕು. ಮನೆಯ ಇತರ ಮಹಿಳೆಯ ಖಾತೆ ನೀಡಬೇಕು, ಅವರ ಖಾತೆಗೆ ಹಣ ವರ್ಗಾವಣೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.