ಸುಳ್ಯದ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ರಾಜ್ಯದ್ಯಂತ ಆಕ್ರೋಶ ಭುಗಿಲೆದಿದ್ದು ದಕ್ಷಿಣ ಕನ್ನಡದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಇಲ್ಲಿವೆ ಪ್ರಮುಖ ಅಂಶಗಳು :
1) ಪೊಲೀಸರು ಹೇಳುವ ಪ್ರಕಾರ ಪ್ರವೀಣ್ ತಮ್ಮ ಕೋಳಿ ಅಂಗಡಿಯನ್ನು ಮುಚ್ಚಿ ಮನೆಗೆ ಹಿಂತಿರುಗುವ ಸಮಯದಲ್ಲಿ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ದುಷ್ಕರ್ಮಿಗಳು ಪ್ರವೀಣರನ್ನು ಅಡ್ಡಗಟ್ಟಿ ಹತ್ಯೆ ಮಾಡಿದ್ದಾರೆ.
2) ಕೂಡಲೇ ಅಲ್ಲಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಸ್ಪತ್ರಗೆ ತಲುಪುವಷ್ಟರಲ್ಲೇ ಪ್ರವೀಣ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
3) ಹತ್ಯೆ ಸಮಂಬಂಧ ಪೊಲೀಸರು ಆರು ತಂಡಗಳನ್ನು ರಚಿಸಿದ್ದು 10 ಮಂದಿ ಶಂಕಿತರನ್ನು ವಶಕ್ಕೆ ಪಡೆಯಲಗಿದ್ದು ನೆರೆಯ ಕೇರಳ, ಹಾಸನ ಹಾಗೂ ಮಡಿಕೇರಿಗೆ ಮೂರು ತಂಡಗಳನ್ನು ಕಳುಹಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
4) ಪ್ರವೀಣ್ ಹತ್ಯೆಯೂ ಸುಳ್ಯ, ದಕ್ಷಿಣ ಕನ್ನಡ ಹಾಗೂ ಬೆಳ್ಳಾವೆಯಲ್ಲಿ ಕಿಡಿ ಹೊತ್ತಿಸಿದ್ದು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಬುಧವರಾ ಬೆಳ್ಳಗ್ಗೆ ಅವರ ಪಾರ್ಥಿವ ಶರೀರವನ್ನು ಮನೆಗೆ ಕೊಂಡೊಯ್ಯುವ ಸಮಯದಲ್ಲಿ ನೂರಾರು ಮಂದಿ ಹಿಂದೂ ಪರ ಸಂಘಟನೆಗಳ ಹಾಗೂ ಸರ್ವಾಜನಿಕರು ಜಮಾಯಿಸಿದ್ದರು.
5) ನೆಟ್ಟಾರು ಹತ್ಯೆ ಹಿಂದೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಹಾಗೂ ಸೋಶಿಯಾಲಿಸ್ಟಿಕ್ ಡೆಮಾಕ್ರೆಟಿಕ್ ಫ್ರಂಟ್ ಆಫ್ ಇಂಡಿಯಾ(SDPI)ದ ಕೈವಾಡವಿದೆ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿವೆ.
6) ಸದ್ಯ ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉದ್ವಿಘ್ನ ವಾತವರಣ ನಿರ್ಮಾಣವಾಗಿದ್ದು ಜಿಲ್ಲೆಯಾದ್ಯಂತ ಸೆಕ್ಷನ್ 144 ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ರುಶಿಕೇಶ್ ಸೋನಾಯ್ ತಿಳಿಸಿದ್ದಾರೆ.
7) ಹಂತಕರು ಹತ್ಯೆಗೆ ಕೇರಳ ನೋಂದಣಿಯಿರುವ ಗಾಡಿಯನ್ನು ಉಪಯೋಗಿಸಿದ್ದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆಯಲ್ಲಿ ಪೊಲೀಸರು ತೊಡಗಿದ್ದಾರೆ.
8) ಹತ್ಯೆ ಸಂಬಂಧ ನಾವು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದೇವೆ ಅಂತ್ಯೆಕ್ರಿಯೆ ಬಗ್ಗೆ ನಾವು ಕುಟುಂಬದವರೊಂದಿಗೆ ಚರ್ಚಿಸಿ ಅವರ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿದ್ದೇವೆ ಎಂದು ಮಂಗಳೂರು ಡಿಸಿಪಿ ರಾಜೇಂದ್ರ ತಿಳಿಸಿದ್ದಾರೆ.
9) ಹತ್ಯೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇದು ಹೇಯ ಕೃತ್ಯ ಎಂದಿದ್ದಾರೆ. ತ್ವರಿತ ತನಿಖೆಗೆ ಆದೇಶಿಸಲಾಗಿದ್ದು ಘಟನೆ ಹಿಂದೆ ಯಾರ ಕೈವಾಡವಿದ್ದರು ಸಹ ಅವರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
10) ಘಟನೆ ನಡೆದ ಸ್ಥಳದಿಂದ ಕೇರಳ ಗಡಿ ಹತ್ತಿರವಿದ್ದು ನೆರೆಯ ರಾಜ್ಯದ ಪೊಲೀಸರೊಂದಿಗೆ ತನಿಖಾ ತಂಡ ಸಂಪರ್ಕದಲ್ಲಿದೆ. ಹತ್ಯೆಯನ್ನು ಖಂಡಿಸುವುದು ಸಹಜ ಆದರೆ, ಜನರು ತಾಳ್ಮೆ ಕಳೆದುಕೊಳ್ಳಬಾರದು ಎಲ್ಲರು ಶಾಂತ ರೀತಿಯಿಂದ ವರ್ತಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿನಂತಿಸಿಕೊಂಡಿದ್ದಾರೆ.
11) ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಡದಂತೆ ಬಿಗಿ ಪೊಲೀಸ್ ಬಂದೋಬಸ್ಥ್ ಕಲ್ಪಿಸಲಾಗಿದೆ. ನಿಷೇಧಾಜ್ಞೆ ಹೇರಲಾಗಿದ್ದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
12) ಈ ಮಧ್ಯೆ ಪ್ರವೀಣ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಬಂದ ಸಚಿವ ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಹರೀಶ್ ಪೂಂಜಾ ಕಾರಿಗೆ ಮುತ್ತಿಗೆ ಹಾಕಿದ ಉದ್ರಿಕ್ತ ಹಿಂದೂ ಸಂಘಟನೆಗಳ ಸದಸ್ಯರು ಹಲ್ಲೆ ನಡೆಸಲು ಮುಂದಾಗಿದ್ದಾರೆ.