ಶಿವಮೊಗ್ಗ-ಗೀತಾ ಶಿವರಾಜ್ ಕುಮಾರ್

ಉಡುಪಿ-ಚಿಕ್ಕಮಗಳೂರು –ಜಯಪ್ರಕಾಶ್ ಹೆಗಡೆ

ವಿಜಯಪುರ- ರಾಜು ಅಲಗೂರು

ಮಂಡ್ಯ- ಸ್ಟಾರ್ ಚಂದ್ರು

ತುಮಕೂರು -ಮುದ್ದಹನುಮೇಗೌಡ

ಚಿತ್ರದುರ್ಗ- ಬಿಎನ್ ಚಂದ್ರಪ್ಪ

ಬೆಂಗಳೂರು ಗ್ರಾಮಾಂತರ –ಡಿ.ಕೆ ಸುರೇಶ್

ಹಾಸನ – ಶ್ರೇಯಸ್ ಪಾಟೀಲ್

ದೇಶಾದ್ಯಂತ ಲೋಕಸಭಾ ಎಲೆಕ್ಷನ್ ಕಾವು ಹೆಚ್ಚಾಗ್ತಿದೆ. ಎಲ್ಲಾ ಪಕ್ಷಗಳು ಹುರಿಯಾಳುಗಳ ಆಯ್ಕೆಯಲ್ಲಿ ತೊಡಗಿವೆ. ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಲಾಗುತ್ತಿದೆ. ಈ ನಡುವೆ
ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸುತ್ತಿರುವ ಕಾಂಗ್ರೆಸ್ ಇದೀಗ ರಾಜ್ಯದ 8 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನ ಫೈನಲ್ ಮಾಡಿದ್ದು ಅಧಿಕೃತವಾಗಿ ಬಿಡುಗಡೆ ಮಾಡುವುದೊಂದೆ ಬಾಕಿ ಇದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಶಿವಮೊಗ್ಗದಿಂದ ಗೀತಾ ಶಿವರಾಜ್ ಕುಮಾರ್, ಮಂಡ್ಯದಿಂದ ಸ್ಟಾರ್ ಚಂದ್ರು ಅವರ ಹೆಸರು ಅಂತಿಮವಾಗಿದೆ ಎನ್ನಲಾಗಿದೆ.
8 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಹೀಗಿದೆ.