ಇಷ್ಟು ದಿನ ತಾನು ಮಾಡಿದ ತಪ್ಪುಗಳನ್ನೇ ಬೇರೆಯವರತ್ತ ಬೊಟ್ಟು ಮಾಡಿ ತೋರಿಸುತ್ತಿದ್ದ ಪಾಕಿಸ್ತಾನ (Pakistan), ಇದೀಗ ಕೊನೆಗೂ ಸತ್ಯವನ್ನು ಅರ್ಥ ಮಾಡಿಕೊಂಡು ಜಗತ್ತಿನ ಮುಂದೆ ತೆರೆದಿಟ್ಟಿದೆ. ಅಲ್ಲದೆ ಕಾರ್ಗಿಲ್ (Kargil) ಯುದ್ಧ ನಡೆಯಲು ಸಹ ತನ್ನದೇ ತಪ್ಪು ಕಾರಣ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ (Nawaz Sharif) ಹೇಳಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal bihari vajapeyi) ಅವರು ಭಾರತದೊಂದಿಗೆ ಸಹಿ ಮಾಡಿದ್ದ 1999ರ ಒಪ್ಪಂದವನ್ನು ಪಾಕ್ ಉಲ್ಲಂಘಿಸಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮಂಗಳವಾರ ಒಪ್ಪಿಕೊಂಡಿದ್ದಾರೆ.
ಆ ಮೂಲಕ ಪಾಕಿಸ್ತಾನ ತನ್ನ ನರಿಬುದ್ದಿ ಏನೆಂಬುದನ್ನ ವಿಶ್ವದ ಮುಂದೆ ಒಪ್ಪಿಕೊಂಡಿದ್ದು, ಕಾರ್ಗಿಲ್ ಯುದ್ಧಕ್ಕೆ ಕಾರಣ ತಾವೇ ಹೊರತು ಭಾರತವಲ್ಲ (India) ಎಂದು ತಪ್ರೊಪ್ಪಿಕೊಂಡಿದೆ.