ಕಾಂತಾರ-೧ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಅದ್ಯಾಕೋ ಏನೋ ಮೇಲಿಂದ ಮೇಲೆ ಚಿತ್ರ ತಂಡಕ್ಕೆ ಸಮಸ್ಯೆಗಳು ಎದುರಾಗುತ್ತಿವೆ. ಸದ್ಯ ಚಿತ್ರ ಪ್ರಮುಖ ಭಾಗದ ಶೂಟಿಂಗ್ ಷೆಡ್ಯೂಲ್ ಆರಂಭವಾಗಿದ್ದು, ಈಗ ಕಾಂತಾರ ಚಿತ್ರತಂಡಕ್ಕೆ ಮತ್ತೊಂದು ಸಮಸ್ಯೆ ಎದುರಾಗಿದೆ.
ಕಾಂತಾರ ಪ್ರಿಕ್ವೆಲ್ ಸಿನಿಮಾದ ಚಿತ್ರೀಕರಣಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಜೂನಿಯರ್ ಆರ್ಟಿಸ್ಟ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ. ನಿನ್ನೆ ಶೂಟಿಂಗ್ ಮುಗಿಸಿ ಜೂನಿಯರ್ ಆರ್ಟಿಸ್ಟ್ ಗಳು ಖಾಸಗಿ ಬಸ್ ನಲ್ಲಿ ವಾಪಸ್ ತೆರಳುವ ವೇಳೆ ಬಸ್ ಅಪಘಾತಕ್ಕೀಡಾಗಿದೆ. ಬಸ್ ಗೆ ಅಡ್ಡ ಬಂದ ಬೈಕ್ ತಪ್ಪಿಸಲು ಹೋಗಿ ಬಸ್ ಪಲ್ಟಿಯಾಗಿದೆ. ಈ ಬಸ್ ನಲ್ಲಿ ಕಾಂತಾರ ಚಿತ್ರ ತಂಡದ ಜೂನಿಯರ್ ಆರ್ಟಿಸ್ಟ್ ಗಳು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಇದೇ ಕೆಲವು ದಿನಗಳ ಹಿಂದೆ, ಸಿನಿಮಾ ತಂಡ ಹಾಗೂ ಹೊಂಬಾಳೆ ಫಿಲಂ ವಿರುದ್ಧ ಕೆಲವು ಜೂನಿಯರ್ ಆರ್ಟಿಸ್ಟ್ ಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ನಮಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಪೇಮೆಂಟ್ ಕೂಡ ಸರಿಯಾಗಿ ನೀಡಿಲ್ಲ ಎಂದು ಆಕ್ರೋಶ ವ್ಯಾಕಪಡಿಸಿದ್ದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಮತೊಮ್ಮೆ ಚಿತ್ರ ತಂಡಕ್ಕೆ ಮತ್ತೊಂದು ಸಂಸ್ಯೆ ಎದುರಾಗಿದೆ.
ಈ ಘಟನೆಗಳು ಹಲವು ರೀತಿಯ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಯಾವ ಕಾರಣಕ್ಕೆ ಕಾಂತಾರ ಚಿತ್ರ ತಂಡಕ್ಕೆ ಈ ರೀತಿ ಮೇಲಿಂದ ಮೇಲೆ ವಿಘ್ನಗಳು ಎದುರಾಗುತ್ತಿವೆ ಎಂಬ ಪ್ರಶ್ನೆಗಳು ಎದುರಾಗಿದೆ. ಆದ್ರೆ ಈ ಘಟನೆಗಳ ಬಗ್ಗೆ ಇದುವರೆಗೂ ಚಿತ್ರ ತಂಡ ಅಧಿಕೃತವಾಗಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.












