
ದೇವರ ನಾಡು ಕೇರಳ (God’s Land Kerala) ಭಯಾನಕ ಸಂಕಷ್ಟಕ್ಕೆ ಸಿಲುಕಿದೆ. ಭೀಕರ ಭೂಕುಸಿತದಿಂದ ವಯನಾಡು ತತ್ತರಿಸಿ ಹೋಗಿದೆ. ಮುಂಡಕ್ಕೈ, ಅಟ್ಟಮಲ, ಪುಂಜಿರಿಮಟ್ಟಂನಲ್ಲಿ ಕಣ್ಮರೆಯಾದ ಜನರಿಗಾಗಿ ತೀವ್ರ ಶೋಧ ನಡೆಸಲಾಗ್ತಿದೆ. ಕೈ, ಕಾಲು ಕಳೆದುಕೊಂಡ ಶವಗಳು, ಕೊಳೆತ ಶವಗಳು ಹೀಗೆ ಭಿನ್ನ ವಿಭಿನ್ನವಾಗಿ ಮೃತದೇಹಗಳು ಸಿಗ್ತಿದೆ. ಭೂಕುಸಿತದಿಂದಾಗಿ ಸುಮಾರು 400 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ. ಇನ್ನೂ 300ಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಿಲುಕಿದ್ದಾರೆ ಎನ್ನಲಾಗ್ತಿದೆ. ಸುಮಾರು 6 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ. ಭಾರತೀಯ ಸೇನೆ, NDRF, SDRF, ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಕಾರ್ಯಚರಣೆ ಮಾಡುತ್ತಿದೆ.

ಕೇರಳದ ಒಂದೊಂದು ಕಣ್ಣೀರಿನ ಕಥೆಗಳು ಕರುಳು ಹಿಂಡುತ್ತಿವೆ. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರ್ತಿದೆ. ಭೂಕುಸಿತದ ಹೊಡೆತಕ್ಕೆ ಪುಂಜಿರಿಮಟ್ಟಂ(Punjiri Mattam Village) ಗ್ರಾಮ ಊಹೆಗೂ ನಿಲುಕದಂತೆ ಸರ್ವನಾಶವಾಗಿದೆ. ಕೆರೆ, ಮನೆ, ಬಾವಿ, ವಾಹನ ಎಲ್ಲವೂ ಕ್ಷಣ ಮಾತ್ರದಲ್ಲಿ ಕೊಚ್ಚಿಕೊಮಡು ಹೋಗಿದೆ.. ಪುಂಜಿರಿಮಟ್ಟಂನಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದ್ದು, ಭಾರತೀಯ ಸೇನೆಯ ಟ್ರಕ್ಕಿಂಗ್ ಎಕ್ಸ್‌ಫರ್ಟ್ ಟೀಂ ಹಾಗು 112 ಇನ್ಫ್ಯಾಂಟ್ರಿ ಬೆಟಾಲಿಯನ್ ಸೈನಿಕರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ವಯನಾಡು (Waynad) ಭೂಕುಸಿತ ಪ್ರದೇಶಕ್ಕೆ ಕೇರಳ ಖ್ಯಾತ ನಟ ಮೋಹನ್ ಲಾಲ್ (Cinema Actor Mohan Lal) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೇನೆಯ ಜೊತೆಗೆ ದುರಂತ ನಡೆದ ಸ್ಥಳವನ್ನು ವೀಕ್ಷಿಸಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಪದವಿ ಹೊಂದಿರುವ ಮೋಹನ್ ಲಾಲ್, ಸೇನೆಯ ವಾಹನದಲ್ಲಿ ಸೇನಾ ಉಡುಪು ತೊಟ್ಟು ದುರಂತ ಸ್ಥಳಕ್ಕೆ ಬಂದಿದ್ರು. ಸಂತ್ರಸ್ತರ ಮರು ವಸತಿಗಾಗಿ 3 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಮೋಹನ್ ಲಾಲ್ ಘೋಷಿಸಿದ್ದಾರೆ(Mohanlal has announced a donation of 3 crore rupees for the resettlement of the victims).
ವಯನಾಡು ಗುಡ್ಡ ಕುಸಿತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಬೆಂಗಳೂರಿನ ವೈದ್ಯರ ತಂಡ ಕೇರಳಕ್ಕೆ ತೆರಳಿದೆ(A team of doctors from Bangalore has gone to Kerala). ಕೇರಳ ವೈದ್ಯರ ಜೊತೆ ಕರ್ನಾಟಕದ ವೈದ್ಯರು ಸಾಥ್ ನೀಡ್ತಿದ್ದಾರೆ. 5 ಮಂದಿ ಡಾಕ್ಟರ್ಸ್(5 Doctors), ಇಬ್ಬರು ಸ್ಟಾಪ್ ನರ್ಸ್(2 Staff Nurse), ಸಹಾಯಕರು ಸೇರಿ 9 ಜನರ ಟೀಂ ಮೆಪ್ಪಾಡಿ ಆಸ್ಪತ್ರೆಯಲ್ಲಿ (Meppadi Hospital) ಬೀಡುಬಿಟ್ಟಿದೆ.. ಗಾಯಾಳುಗಳಿಗೆ 3 ದಿನದಿಂದಲೂ ಚಿಕಿತ್ಸೆ ಕೊಡ್ತಿದ್ದಾರೆ. ಎಷ್ಟು ದಿನ ಸಹಾಯ ಬೇಕಾಗುತ್ತದೆಯೇ ಅಷ್ಟೂ ದಿನ ಇಲ್ಲೇ ಇರ್ತೀವಿ ಎಂದಿದ್ದಾರೆ ಡಾಕ್ಟರ್ಸ್.

ಬಿಬಿಎಂಪಿ ಸಿಬ್ಬಂದಿಗಳು ಸೇರಿದಂತೆ ಸಂಘ ಸಂಸ್ಥೆಗಳು ಆಹಾರ ಧಾನ್ಯ ಸೇರಿದಂತೆ ಅವಶ್ಯಕತೆ ಇರುವ ವಸ್ತುಗಳು, ಮೆಡಿಸಿನ್ ರವಾನೆ ಮಾಡ್ತಿದ್ದಾರೆ. ಇನ್ನು ಕರ್ನಾಟಕ ಸರ್ಕಾರ ಕೇರಳದ ವಯನಾಡು ಗುಡ್ಡ ಕುಸಿತದ ದುರಂತದಲ್ಲಿ ಮನೆ ಕಳೆದುಕೊಂಡವರ ನೆರವಿಗೆ ನಿರ್ಧಾರ ಮಾಡಿದೆ. ಇಂದು ಸಿಎಂ ಸಿದ್ದರಾಮಯ್ಯ ಕರ್ನಾಟಕ ಸರ್ಕಾರದಿಂದ 100 ಮನೆಗಳನ್ನ ನಿರ್ಮಾಣ ಮಾಡಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ನೊಂದವರಿಗೆ ಕರುನಾಡು ನೆರವಿಗೆ ನಿಂತಿದೆ ಎನ್ನುವುದು ಹೆಮ್ಮೆಯ ಸಂಗತಿ.

ಕೃಷ್ಣಮಣಿ