ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಕ್ಷಿಪ್ರ ಬೆಳವಣಿಗೆಯಲ್ಲಿ ಬಂಡಾಯವೆದ್ದಿರುವ ಮೈತ್ರಿ ಸರ್ಕಾರದ ಶಾಸಕರು ಉದ್ಧವ್ ಠಾಕ್ರೆ ವಿರುದ್ದ ತೊಡೆ ತಟ್ಟಿದ್ದಾರೆ.
ಇನ್ನು ಇದಕ್ಕೂ ವಿವಾದಾತ್ಮಕ ನಟಿ ಕಂಗನಾ ರಣಾವತ್ಗೂ ಏನೆಉ ಸಂಬಂಧ ಎಂದು ತಲೆಕೆಡಿಸಿಕೊಳ್ಳಬಹುದು. ಯಾಕೆಂದರೆ 2020ರಲ್ಲಿ ಏಕವಚನದಲ್ಲೇ ನಟಿ ನುಡಿದಿದ್ದ ಭವಿಷ್ಯ ವೈರಲ್ ಆಗಿದ್ದು ನೆಟ್ಟಿಗರು ಹೆಚ್ಚೆಚ್ಚು ಶೇರ್ ಮಾಡಿದ್ದಾರೆ.
2020ರಲ್ಲಿ ನಟಿ ಕಂಗನಾ ರನಾವತ್ ನಿಯಮ ಉಲ್ಲಂಘಿಸಿ ಮನೆ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಮನೆಯನ್ನು ಕೆಡವಲು ಮುಂದಾಗಿತ್ತು. ಇದಕ್ಕೆ ಕೆಂಡಾಮಂಡಲರಾಗಿದ್ದ ನಟಿ ಮುಖ್ಯಮಂತ್ರಿಗಳ ವಿರುದ್ದ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು.
ಮಿ.ಉದ್ಧವ್ ಠಾಕ್ರೆ ನೀನು ಸಿನಿಮಾ ಹಾಗು ಮಾಫಿಯಾ ಗೂಂಡಾಗಳ ಪ್ರಭಾವಕ್ಕೆ ಒಳಗಾಗಿ ನನ್ನ ವಿರುದ್ದ ದ್ವೇಷ ಸಾಧಿಸುತ್ತಿದ್ದೀಯಾ. ಇಂದು ನನ್ನ ಮನೆ ಒಡೆದು ಹಾಕಲು ಯತ್ನಿಸಿದ್ದೀಯಾ ಮುಂದೊಂದು ಉನ-ದಿನ ನಿನ್ನ ಘನತೆ ಮಣ್ಣು ಪಾಲಾಗಿ ಗಂಟು ಮೂಟೆ ಸಮೇತ ಪಲಾಯನ ಮಾಡಬೇಕಾಗುತ್ತದೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ಆಗಿತ್ತು ಮತ್ತು ಪರ-ವಿರೋಧದ ಚರ್ಚೆಯನ್ನ ಸಹ ಹುಟ್ಟು ಹಾಕಿತ್ತು.
ಅದಕ್ಕೆ ಪೂರಕವೆಂಬಂತೆ ಬುಧವಾರ ಮುಖ್ಯಮಂತ್ರಿ ಠಾಕ್ರೆ ನಾನು ಸಿಎಂ ಸ್ಥಾನ ತೊರೆಯಲು ಸಿದ್ದ ನಿಮ್ಮಗೆ ಸಮಸ್ಯೆ ಇದ್ದರೆ ನನ್ನ ಜೊತೆ ಚರ್ಚಿಸಿ ಎಂದು ತಮ್ಮ ಪತ್ನಿ ನಮ್ರತಾ ಹಾಗು ಪುತ್ರ ಆದಿತ್ಯ ಠಾಕ್ರೆ ಜೊತೆಗೆ ಅಧಿಕೃತ ಸರ್ಕಾರಿ ಬಂಗಲೆಯನ್ನು ತೊರೆದು ತಮ್ಮ ಸ್ವಗೃಹ ಮಾತೃಶ್ರೀಗೆ ತೆರಳಿದ್ದರು.
ಇದಕ್ಕೆ ಕಂಗನಾ ನೀಡಿದ ಹೇಳಿಕೆ ಜೊತೆ ಠಾಕ್ರೆ ಬಂಗಲೆಯಿಂದ ಹೊರ ನಡೆಯುತ್ತಿರುವ ವಿಡಿಯೋವನ್ನು ಜೋಡಿಸಿ ಟ್ರೋಲ್ ಮಾಡಲಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ಆಗಿದೆ.