ಲೋಕಸಭಾ ಚುನಾವಣೆಗೆ (MP election) ತಮ್ಮ ಸ್ಪರ್ಧೆಯ ಕುರಿತು ಇನ್ನೂ ಗೊಂದಲದಲ್ಲಿರುವ ಮಂಡ್ಯ ಸಂಸದೆ ದೆಹಲಿಯಲ್ಲಿದ್ದಾರೆ(Delhi) .ಬಿಜೆಪಿ ಹೈಕಮಾಂಡ್ (BJP Highcommand) ಬುಲಾವ್ ನೀಡಿದ ಹಿನ್ನಲೆ ದೆಹಲಿಗೆ ತೆರಳಿರುವ ಸುಮಲತಾ (Sumalatha) ಯಾವ ನಿರ್ಧಾರದೊಂದಿಗೆ ಮರಳಲಿದ್ದಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಯಾವುದೇ ಕಾರಣಕ್ಕೂ ಮಂಡ್ಯ (Mandya) ಬಿಡುವುದಿಲ್ಲ ಮತ್ತು ಪಕ್ಷೇತರವಾಗಿ ಸ್ಪರ್ಧೆ ಮಾಡುವುದಿಲ್ಲ ಎಂದಿದ ಸುಮಲತಾಗೆ ಇದೀಗ ಸಂಧಿಗ್ಧತೆ ಎದುರಾಗಿದ್ದು ಅವರ ಮುಂದಿನ ನಡೆ ಕುತೂಹಲಕಾರಿಯಾಗಿದೆ

ಸದ್ಯ ಸುಮಲತಾರ ಮುಂದೆ ಎರಡು ಆಯ್ಕೆಗಳಿವೆ. ಒಂದು ಸ್ವತಂತ್ರವಾಗಿ (Independent) ಮಂಡ್ಯದಿಂದ ಸ್ಪರ್ಧೆ ಮಾಡೋದು , ಮತ್ತೊಂದು ಬಿಜೆಪಿ (BJP) ಸೇರ್ಪಡೆಯಾಗಿ ಜೆಡಿಎಸ್ (Jds) ಗೆ ಬೆಂಬಲ ಘೋಷಿಸಿ ಚುನಾವಣಾ ಕಣದಿಂದ ಹಿಂದೆ ಸರಿಯೋದು. ಈ ಪೈಕಿ ಸಂಸದೆ ಯಾವ ಹಾದಿ ತುಳಿಯಲಿದ್ದಾರೆ ಎಂಬುದು ದೆಹಲಿಯಿಂದ(Delhi) ಬಂದ ನಂತರ ತಿಳಿಯಬೇಕಿದೆ.

ಬಿಜೆಪಿಯಿಂದಲೇ (BJP) ಸ್ಪರ್ಧಿಸೋ ಇಚ್ಛೆ ವ್ಯಕ್ತಪಡಿಸಿದ್ದ ಸುಮಲತಾಗೆ ಮೈತ್ರಿಯಿಂದಾಗಿ ಶಾಕ್ ಎದುರಾಗಿತ್ತು. ಇದೀಗ ಮಂಡ್ಯವನ್ನು (Mandya) ಬಿಜೆಪಿ ಜೆಡಿಎಸ್ ಗೆ ಬಿಟ್ಟುಕೊಟ್ಟಿರೋ ಪರಿಣಾಮ ಬಿಜೆಪಿಯಿಂದ ಸ್ಪರ್ಧೆ ಮಾಡಲು ಯಾವುದೇ ಅವಕಾಶ ಇಲ್ಲ. ಪಕ್ಷೇತರರಾಗಿ ಸ್ಪರ್ಧಿಸಲು ಸುಮಲತಾರಿಗೆ ಮನಸ್ಸಿಲ್ಲ. ಹೀಗಾಗಿ ಬಿಜೆಪಿ ಹೈಕಮಾಂಡ್ ಯಾವ ರೀತಿ ಸುಮಲತಾ ಮನವೊಲಿಸಲಿದೆ ಎಂಬುದು ಕೌತುಕ. ಮೂಲಗಳ ಪ್ರಕಾರ ಸುಮಲತಾರನ್ನ (Sumalatha) ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಬಿಜೆಪಿ ಹೈ ನಾಯಕರು ( bjp leaders) ಯಶಸ್ವಿಯಾಗಬಹುದು ಎನ್ನಲಾಗ್ತಿದೆ.