ರಾಜ್ಯದಲ್ಲಿ ಅತಿ ವೃಷ್ಠಿಯಿಂದ 73 ಮಂದಿ ಮೃತಪಟ್ಟಿದ್ದು, ಪರಿಹಾರ ಕಾರ್ಯ ಭರದಿಂದ ಸಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾನತಾಡಿದ ಅವರು, ಮನೆ ಕುಸಿತದಿಂದ 23, ಸಿಡಿಲು ಬಡಿದು 15, ಮರಬಿದ್ದು 5, ಮನೆ ಕುಸಿದು 19, ಪ್ರವಾಹಕ್ಕೆ ಸಿಲುಕಿ 24, ಭೂಕಕಿಸಿತ 9 ವಿದ್ಯುತ್ ಅಪಘಾತದಿಂದ 1 ಸಾವು ಸಂಭವಿಸಿದೆ ವಿವರ ನೀಡಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾಳಜಿ ಕೇಂದ್ರಕ್ಕೆ ಬಂದು ಮನೆಗೆ ಹೋಗುವವರಿಗೆ ಕಾಳಜಿ ಕಿಟ್ ನೀಡಲಾಗುತ್ತಿದೆ. ಅಲ್ಲದೇ ಮಳೆಯಿಂದ ಮನೆ ಹಾನಿಗೊಳಗಾದವರಿಗೂ ಕಾಳಜಿ ಕಿಟ್ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಂತ್ರಸ್ತರಿಗೆ ನೀಡಲಾಗುವ ಕಾಳಜಿ ಕಿಟ್ ನಲ್ಲಿ 10 ಕೆಜಿ ಅಕ್ಕಿ, 1 ಕೆಜಿ ಬೇಳೆ, 1 ಕೆಜಿ ಉಪ್ಪು, 1 ಕೆಜಿ ಸಕ್ಕರೆ 1 ಲೀಟರ್ ಅಡುಗೆ ಎಣ್ಣೆ ಸೇರಿದಂತೆ 11 ಪದಾರ್ಥಗಳು ಇರುತ್ತವೆ ಎಂದು ಅಶೋಕ್ ವಿವರಿಸಿದರು.