ಕಲಬುರಗಿ: ಸೋಮವಾರ ತಡರಾತ್ರಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ(ಕೆಕೆಆರ್‌ಟಿಸಿ) ಸೇರಿದ್ದ ಬಸ್’ನ್ನೆ ಖತರ್ನಾಕ್ ಕಳ್ಳರು ಕದ್ದಿರುವ ಘಟನೆ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬೀದರ್ ಬಸ್ ಡಿಪೋ- 2ಗೆ ಸೇರಿದ ಕೆಎ 38 ಎಫ್ 971 ಸಂಖ್ಯೆಯ ಬಸ್ ಕಳುವಾಗಿದೆ. ಬೆಳಿಗ್ಗೆ ಸುಮಾರು 3:30ರ ವೇಳೆಗೆ ಕಳ್ಳತನ ಮಾಡಿದ ಖದಿಮರು, ಮಿರಿಯಾಣ ಮಾರ್ಗವಾಗಿ ತಾಂಡೂರು ಮೂಲಕ ತೆಲಂಗಾಣದ ಕಡೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಬಸ್ ಹುಡುಕಾಟಕ್ಕಾಗಿ ಎರಡು ಪೊಲೀಸ್ ತಂಡಗಳು ತೆಲಂಗಾಣಕ್ಕೆ ತೆರಳಿವೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.












