ಕಲಬುರಗಿ: ಇತ್ತೀಚೆಗೆ ಜಿಲ್ಲೆಯಾದ್ಯಂತ ಬಸ್ ಚಾಲಕರ ನಿರ್ಲಕ್ಷ್ಯದಿಂದ ಅಪಘಾತಗಳು ನಿರಂತರವಾಗಿ ನಡೆಯುತ್ತಿವೆ. ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಜಯಕರ್ನಾಟಕ ಸಂಘಟನೆಯ ವತಿಯಿಂದ ಅಫಜಲಪುರ ಮುಖ್ಯರಸ್ತೆ ತಡೆದು ಪ್ರತಿಭಟನೆ ಮಾಡಿ ಬಸ್ ಘಟಕ ನಿರ್ವಾಹಕರಿಗೆ ಮನವಿ ಸಲ್ಲಿಸಿದರು.
ಬಳಿಕ, ವಾರದಲ್ಲೆ ಸುಮಾರು ನಾಲ್ಕು ಬಸ್ ಅಪಘಾತಗಳಾಗಿವೆ. ದೇ.ವಲ ಗಾಣಗಾಪುರದ ನಿವಾಸಿಗಳು ರಸ್ತೆ ಅಪಘಾತದಲ್ಲಿ ಬಲಿಯಾಗಿ ಇಡೀ ಕುಟುಂಬ ಸ್ಮಶಾನದ ದಾರಿ ನೋಡುವಂತಾಗಿದೆ. ಒಂದೇ ಮನೆಯ ಅಣ್ಣ- ತಮ್ಮಂದಿರು ಸಾವನಪ್ಪಿದ್ದಾರೆ. ತಾಯಿ ತಂಗಿ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ನೋವಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ನಿಂಗರಾಜ ಕಟ್ಟಿಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಅಫಜಲಪುರ ತಾಲೂಕಿನ ಚೌಡಾಪುರ ಕ್ರಾಸ್‌ನ ಗೊಬ್ಬೂರ ಹತ್ತಿರ ಸರಣಿ ಅಪಘಾತಗಳು ಸಂಭವಿಸಿವೆ. ಬಸ್ ಚಾಲಕರ ನಿರ್ಲಕ್ಷ್ಯವೇ ಈ ಪ್ರತ್ಯೇಕ ಅಪಘಾತಗಳಿಗೆ ಕಾರಣ. ಪ್ರಯಾಣಿಕರನ್ನು ಹೊತ್ತೊಯ್ಯುವ ಬಸ್ ಚಾಲಕರು ಜವಾಬ್ದಾರಿಯಿಂದ ಚಾಲನೆ ಮಾಡಬೇಕು. ಒಂದು ವೇಳೆ ಅವರ ನಿರ್ಲಕ್ಷ್ಯತನ ಸಾಬಿತಾದರೆ ಅಪಘಾತದಲ್ಲಿ ತೊಂದರೆ ಅನುಭವಿಸುವ ಕುಟುಂಬಗಳಿಗೆ ಅವರೇ ಆರ್ಥಿಕ ಸಹಾಯ ಮಾಡಬೇಕು. ಅಲ್ಲದೆ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ರೀತಿಯ ಕಟ್ಟುನಿಟ್ಟಿನ ಕ್ರಮಗಳು ಜರುಗಿಸದೇ ಇದ್ದಲ್ಲಿ ರಾಜ್ಯಾದ್ಯಂತ ಜಯಕರ್ನಾಟಕ ಸಂಘಟನೆ ಉಗ್ರವಾದ ಪ್ರತಿಭಟನೆ ಮಾಡಲಿದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಅಜಿತ್ ಪವಾರ್ NDA ಕೂಟ ಬಿಟ್ಟು, INDIA ಒಕ್ಕೂಟ ಸೇರ್ಪಡೆಯಾಗಬೇಕಿತ್ತು: ವಿಮಾನ ಅಪಘಾತಕ್ಕೆ ದೀದಿ ಸ್ಪೋಟಕ ತಿರುವು..?
ಇನ್ನೂ ಉಪಾಧ್ಯಕ್ಷ ಮೌಲಾಲಿ ಪಟೇಲ ಮಾತನಾಡಿ, ಮದ್ಯ ಸೇವನೆ ಮಾಡಿ ಬಸ್ ಚಲಾಯಿಸುವುದರಿಂದ ಈ ಅಪಘಾತಗಳು ಸಂಭವಿಸುತ್ತವೆ. ಅದರಲ್ಲೂ ಕೆಲವು ಬಸ್ ಚಾಲಕರು ಮೊಬೈಲ್‌ನಲ್ಲಿ ಮಾತನಾಡುವಾಗ ಅಪಘಾತಗಳು ಸಂಭವಿಸಿವೆ. ಆದ್ದರಿಂದ ಕೂಡಲೇ ಬಸ್ ಚಾಲಕರಿಗೆ ಬಸ್ ಘಟಕ ವ್ಯವಸ್ಥಾಪಕರು ಕಟ್ಟುನಿಟ್ಟಿನ ಸೂಚನೆ ನೀಡಿ ಯಾವುದೇ ಅಮಾಯಕರ ಪ್ರಾಣ ಹಾನಿಯಾಗದ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ ಬಸ್ ಚಾಲಕರು ತಮ್ಮ ವ್ಯಸನಗಳಿಗೆ ದಾಸರಾಗಿ ಈ ರೀತಿಯ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ. ಅಫಜಲಪುರ ಪಟ್ಟಣದಿಂದ ದೂರದಲ್ಲಿರುವ ಅಂಧಮಕ್ಕಳಿಗೆ ಬಸ್ ನಲ್ಲಿ ಹೋಗಲು ಅವಕಾಶ ಕೊಡದ ಚಾಲಕರು, ದೂರದ ಬಿಸಿಎಮ್ ಹಾಸ್ಟೆಲ್ ಬಸ್ ತಂಗುದಾಣದಲ್ಲಿಯೂ ಬಸ್ ನಿಲ್ಲಿಸುವುದಿಲ್ಲ. ಅಂಧ ಮಕ್ಕಳು ಶಾಲೆಗೆ ತೆರಳಲು ಆಟೋ ಹಿಡಿದುಕೊಂಡು ನೂರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಘಟಕ ವ್ಯವಸ್ಥಾಪಾಕರು ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಅಂಧ ಮಕ್ಕಳ ಶಾಲೆ ಹಾಗೂ ಬಿಸಿಎಂ ಹಾಸ್ಟೆಲಗಳ ಮುಂದೆ ಬಸ್ ನಿಲ್ಲಿಸುವ ವ್ಯವಸ್ಥೆ ಕಲ್ಪಿಸಬೇಕೆಂದು ಯುವ ಘಟಕ ಅಧ್ಯಕ್ಷ ಹಿಮಾಲಯ ಸಿಂಗೆ ಬೇಡಿಕೆ ಇಟ್ಟಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ಜಯ ಕರ್ನಾಟಕ ಸಂಘಟನೆಯ ,ತ್ರಿಧರ್ ಹೂಗಾರ, ಗೌರವ ಅಧ್ಯಕ್ಷ ಸುರೇಶ ಜಮಾದಾರ, ಅಭಿಷೇಕ್ ಮಾಲೀಪಾಟಿಲ ವಲಯ ಅಧ್ಯಕ್ಷರು ಬಡದಾಳ, ಆನೂರ ಘಟಕ ಅಧ್ಯಕ್ಷ ಆರೆಪ್ಪ , ಅಂಕುಶ ಕುಲಕರ್ಣಿ ಗುಳನೂರ. ಚೆತನ್ ಮಾಲಿಪಾಟೀಲ. ವಿಜಯ ಜವಲೇಕರ,ಸೇರಿದಂತೆ ಹಲವು ಜನ ಜಯಕರ್ನಾಟಕ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.












