
ಕಲಬುರಗಿ: ಇಲ್ಲಿನ ಹುಮನಾಬಾದ್ ರಿಂಗ್ ರೋಡ್ ಪ್ರದೇಶದಲ್ಲಿರುವ ಓಲಾ ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ ಸಂಭವಿಸಿ ಆರು ಎಲೆಕ್ಟ್ರಿಕ್ ಬೈಕ್ ಸೇರಿದಂತೆ ಅಪಾರ ಹಾನಿ ಸಂಭವಿಸಿರುವ ಘಟನೆ ನಡೆದಿದೆ.ಮಂಗಳವಾರ ಅಂಗಡಿ ತೆರೆಯುವ ಮುನ್ನವೇ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಇಡೀ ಶೋರೂಂಗೆ ವ್ಯಾಪಿಸಿತ್ತು.


ಈ ಅವಘಡದಲ್ಲಿ ಅರು ಎಲೆಕ್ಟ್ರಿಕ್ ಬೈಕ್, ಲ್ಯಾಪ್‌ಟಾಪ್, ಎಸಿ ಸೇರಿದಂತೆ ಇತರೆ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದು, ಈ ಕುರಿತು ನಗರದ ಚೌಕ್ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.