ಮಾಜಿ ಸ್ಪೀಕರ್(Former Speaker) ಕಾಗೋಡು ತಿಮ್ಮಪ್ಪ ಆರೋಗ್ಯದಲ್ಲಿ ಏರುಪೇರಾಗಿದ್ದು, ನಿನ್ನೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ(Hospital) ದಾಖಲು ಮಾಡಲಾಗಿದೆ. 91 ವರ್ಷದ ಕಾಗೋಡು ತಿಮ್ಮಪ್ಪ(Kagodu Thimmappa) ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರಾಗಿದ್ದು, ವಯೋಸಹಜ ಅನಾರೋಗ್ಯಕ್ಕೆ(Illness) ತುತ್ತಾಗಿದ್ದಾರೆ ಎನ್ನಲಾಗಿದೆ.
ಜ್ವರ(Fever) ಸುಸ್ತಿನಿಂದ ಬಳಲುತ್ತಿದ್ದ ಕಾಗೋಡು ತಿಮ್ಮಪ್ಪ ಅವರನ್ನು ತಕ್ಷಣವೇ ಸಾಗರದ(Sagar) ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಕುಟುಂಬಸ್ಥರು. ಕಾಗೋಡು ತಿಮ್ಮಪ್ಪನವರಿಗೆ ಜ್ವರ ಹಾಗೂ ತೀವ್ರ ಸುಸ್ತು ಕಾಣಿಸಿಕೊಂಡಿದೆ. ಈಗಾಗಿ ಹೆಚ್ಚಿನ ಚಿಕಿತ್ಸೆಗಾಗಿ(Treatment) ಶಿವಮೊಗ್ಗಕ್ಕೆ ಕರೆತಂದಿದ್ದಾರೆ ಪುತ್ರಿ ಡಾ. ರಾಜನಂದಿನಿ(Raja Nandini).
ಶಿವಮೊಗ್ಗದ(Shivamogga) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸದ್ಯಕ್ಕೆ ಕಾಗೋಡು ತಿಮ್ಮಪ್ಪ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದೆ ಎಂದು ವೈದ್ಯರು(Doctors) ಮಾಹಿತಿ ನೀಡಿದ್ದಾರೆ. ವಿಧಾನಸಭಾ ಅಧ್ಯಕ್ಷರಾಗಿ(President) ಸೇವೆ ಸಲ್ಲಿಸಿರುವ ಕಾಗೋಡು ತಿಮ್ಮಪ್ಪ, ಕಂದಾಯ(Revenue) ಸಚಿವ ಹಾಗು ಆರೋಗ್ಯ ಮತ್ತು ಸಮಾಜ ಕಲ್ಯಾಣ(Social Welfare) ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಮಳೆಗಾಲ(Rainy Season) ಆರಂಭವಾಗುವ ಸಮಯದಲ್ಲಿ ಮಲೆನಾಡು ಭಾಗದಲ್ಲಿ ವಿಷಮ ಶೀತ(Cold) ಜ್ವರ(Fever) ಕಾಣಿಸಿಕೊಳ್ಳುವುದು ಸಾಮಾನ್ಯ. ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ವಾಸವಾಗಿರುವ ಕಾಗೋಡು. ಸರ್ವೇ ಸಾಮಾನ್ಯವಾಗಿ ಜ್ವರ ಕಾಣಿಸಿಕೊಂಡಿದೆ ಅಷ್ಟೆ ಎಂದು ಕುಟುಂಬದ(Family) ಮೂಲಗಳು ತಿಳಿಸಿವೆ.