
ಬೆಂಗಳೂರು: ರಾಷ್ಟ್ರಗೀತೆ ಬಗ್ಗೆ ಹೇಳಿಕೆ ನೀಡಿರುವ ಕರ್ನಾಟಕ ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗ್ಡೆ ಕಾಗೇರಿ ವಿರುದ್ಧ ಸಚಿವ ಪ್ರಿಯಾಂಕ್ ಗಾಂಧಿ ಕಿಡಿಕಾರಿದ್ದಾರೆ.
RSSನ 150 ವರ್ಷಾಚರಣೆ ವೇಳೆ ಮಾತಾನಾಡಿರೋ ಕಾಗೇರಿ, ಜನಗಣಮನ ರಾಷ್ಟ್ರಗೀತೆ ಬ್ರೀಟಿಷರ
ಎಂದು ಹೇಳಿದ್ದರು. ಇದಕ್ಕೆ X ನಲ್ಲಿ ಆಕ್ರೋಶ ವ್ಯಕ್ತಪಡಿಸಿರೋ ಪ್ರಿಯಾಂಕ್ ಗಾಂಧಿ ಈ ಹೇಳಿಕೆ RSS “WhatsApp ಇತಿಹಾಸ”ದ ಮತ್ತೊಂದು ಪಾಠವಾಗಿದೆ ಎಂದಿದ್ದು ರಾಷ್ಟ್ರಗೀತೆ ಇತಿಹಾಸ ನೆನಪಿಸಿ ತಿವಿದಿದ್ದಾರೆ. .
ಕಾಗೇರಿಯವರು ಹೇಳಿರುವುದು ಸಂಪೂರ್ಣ ಅಸಂಬದ್ಧವಾಗಿದೆ. ಟ್ಯಾಗೋರ್ 1911 ರಲ್ಲಿ ಭರೋತೋ ಭಾಗ್ಯೋ ಬಿಧಾತ ಎಂಬ ಸ್ತುತಿಗೀತೆಯನ್ನು ಬರೆದರು. ಅದರ ಮೊದಲ ಚರಣ ಜನಗಣಮನವಾಯಿತು. ಇದನ್ನು ಡಿಸೆಂಬರ್ 27, 1911 ರಂದು ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಮೊದಲು ಹಾಡಲಾಯಿತೇ ಹೊರತು ಇದು ರಾಜ ಗೌರವವಾಗಿ ಹಾಡಿದ್ದಲ್ಲ. ಹಾಗೆ ಟ್ಯಾಗೋರ್ 1937 ಮತ್ತು 1939 ರಲ್ಲಿ ಈ ವಿವಾದಕ್ಕೆ ಸ್ಪಷ್ಟನೆ ನೀಡಿದ್ದು, ಜನಗಣಮನ ಸಾಲು ಭಾರತದ ಹಣೆಬರಹ ರೂಪಿಸುವವರನ್ನ ಹೊಗಳುವ ಅರ್ಥವಿದೆಯೇ ಹೊರತು “ಜಾರ್ಜ್ V, ಜಾರ್ಜ್ VI ಅಥವಾ ಬೇರೆ ಯಾವುದೇ ಜಾರ್ಜ್ ರನ್ನ ಹೊಗಳುವ ಸಾಲು ಆಗಿರಲು ಸಾಧ್ಯವಿಲ್ಲ” ಎಂದಿದ್ದರು.

ಈ ಸಂಸದರು ಇತಿಹಾಸವನ್ನು ಕೆದಕಲು ಬಯಸುವುದಿಲ್ಲ ಎನ್ನುತ್ತಾರೆ. ಆದರೆ ಪ್ರತಿಯೊಬ್ಬ ಬಿಜೆಪಿ, ಆರ್‌ಎಸ್‌ಎಸ್ ನಾಯಕರು, ಕಾರ್ಯಕರ್ತರು ಮತ್ತು “ಸ್ವಯಂಸೇವಕರು” ತಮ್ಮ ಸಂಘದ ಮುಖವಾಣಿ ಆರ್ಗನೈಸರ್‌ನ ಸಂಪಾದಕೀಯಗಳನ್ನು ಓದುವ ಮೂಲಕ ಇತಿಹಾಸವನ್ನು ಪುನರ್ವಿಮರ್ಶಿಸಬೇಕು. ಸಂವಿಧಾನ, ತ್ರಿವರ್ಣ ಧ್ವಜ ಮತ್ತು ರಾಷ್ಟ್ರಗೀತೆಯನ್ನು ಅಗೌರವಿಸುವ ದೊಡ್ಡ ಸಂಪ್ರದಾಯವನ್ನು RSS ಹೊಂದಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ನಾನು ಬಲವಾಗಿ ಒತ್ತಾಯಿಸುತ್ತೇನೆ ಎಂದು ಕಾಗೇರಿ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೆ ಈ “ವೈಆರ್‌ಎಸ್‌ಎಸ್” ಅನ್ನು ಗುಣಪಡಿಸಬೇಕಾಗಿದೆ ಎಂದು ವ್ಯಂಗ್ಯವಾಡಿದ್ದಾರೆ
ಕೆಲ ದಿನಗಳಿಂದಲೂ ಅನೇಕ ರಾಜಕಾರಣಿಗಳು ಜನಗಣಮನವನ್ನು ಬ್ರಿಟಿಷರನ್ನು ಸ್ವಾಗತಿಸಲು ಬರೆಯಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಇದು ನಿಜವಲ್ಲ ಎಂದು ಇತಿಹಾಸಕಾರರು ಪದೇ ಪದೇ ವಿವರಿಸಿದ್ದಾರೆ. ರವೀಂದ್ರನಾಥ ಟ್ಯಾಗೋರ್ ಡಿಸೆಂಬರ್ 11, 1911 ರಂದು ಭರೋತೋ ಭಾಗ್ಯೋ ಬಿಧಾತವನ್ನು ಬರೆದರು. ಮರುದಿನ, ಕಿಂಗ್ ಜಾರ್ಜ್ V ಅನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಲು ಕೊರೊನೇಷನ್ ಪಾರ್ಕ್‌ನಲ್ಲಿ ದೆಹಲಿ ದರ್ಬಾರ್ ಅನ್ನು ಆಯೋಜಿಸಲಾಯಿತು. ಇದು ಪಟ್ಟಾಭಿಷೇಕ ಕಾರ್ಯಕ್ರಮಕ್ಕಾಗಿ ಈ ಹಾಡನ್ನು ಬರೆಯಲಾಗಿದೆ ಎಂಬ ತಪ್ಪು ಕಲ್ಪನೆಗೆ ಕಾರಣವಾಯಿತು.

ಆದರೆ ಈ ಹಾಡನ್ನು ಮೊದಲು ಡಿಸೆಂಬರ್ 28, 1911 ರಂದು ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು. ಫೆಬ್ರವರಿ 1912 ರಲ್ಲಿ ಆದಿ ಬ್ರಹ್ಮ ಸಮಾಜದ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲೂ ಇದನ್ನು ಹಾಡಲಾಯಿತು.
ಇದರ ಗೊಂದಲ ಅಧಿನಾಯಕ ಎಂಬ ಒಂದೇ ಪದದ ಸುತ್ತ ಕೇಂದ್ರೀಕೃತವಾಗಿತ್ತು. ಇದಕ್ಕೆ 1937 ರಲ್ಲಿ ಟಾಗೋರ್ ಒಂದು ಪತ್ರದಲ್ಲಿ ಐದನೆಯವರೂ ಅಥವಾ ಆರನೆಯವರೂ ಅಥವಾ ಯಾವುದೇ ಜಾರ್ಜ್ ಕೂಡ ಯುಗಯುಗಾಂತರಗಳಲ್ಲಿ ಮಾನವ ಹಣೆಬರಹವನ್ನು ರೂಪಿಸಲು ಸಾಧ್ಯವಿಲ್ಲ. ಜನಗಣಮನ ಹಾಡಿನಲ್ಲಿ ನಾನು ಭಾರತದ ಹಣೆಬರಹದ ರೂಪಿಸುವರನ್ನ ಹೊಗಳಿದ್ದೆ. ಅವನು ಎಲ್ಲಾ ಏರಿಳಿತಗಳ ಮೂಲಕ ದಾರಿಹೋಕರಿಗೆ ಮಾರ್ಗದರ್ಶನ ನೀಡುತ್ತಾನೆ. ಜನರಿಗೆ ದಾರಿ ತೋರಿಸುತ್ತಾನೆ ಎಂದು ಶ್ಲಾಘಿಸಿದ್ದೆ ಎಂದು ಹೇಳಿದ್ದರು.


