ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಾಡೆಂದರೆ ಅದು ಕಚ್ಚಾ ಬಾದಾಮ್ ಹಾಡು. ಸೆಲೆಬ್ರಿಟಿಗಳು ಸೇರಿದಂತೆ ಪ್ರತಿಯೊಬ್ಬರು ಈ ಹಾಡಿಗೆ ಸ್ಟೆಪ್ಸ್ ಹಾಕುತ್ತಿದ್ದಾರೆ. ಸದ್ಯ ಈ ಹಾಡು ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕಿನಲ್ಲಿ ವೈರಲ್ ಟ್ರೆಂಡ್ಗೆ ಸೇರಿಕೊಂಡು ಎಲ್ಲರು ಗಮನ ಸೆಳೆದಿದೆ.
ಆದರೆ, ಎಲ್ಲರೂ ಗಮನಿಸಬೇಕಾದ ಒಂದು ಅಂಶವೇನೆಂದರೆ ಈ ಹಾಡಿನ ಹಿಂದಿರುವ ಧ್ವನಿಯ ಕುರಿತು ಜನರು ಅಷ್ಟಾಗಿ ಯಾರು ತಲೆಕೆಡಿಸಿಕೊಂಡಿಲ್ಲ. ಹೌದು ಸದ್ಯ ವೈರಲ್ ಆಗಿರುವ ಈ ಹಾಡಿನ ಹಿಂದಿರುವ ವ್ಯಕ್ತಿ ಭುವನ್ ಬದ್ಯಕರ್.
ಭುವನ್ ಬದ್ಯಕರ್ ಅವರು ಮೂಲತಃ ಪಶ್ಚಿಮ ಬಂಗಾಳದ ಬಿರ್ಭೊಮ್ ಜಿಲ್ಲೆಯ ಲಕ್ಷೀನಾರಾಯಣ ತಾಲೂಕಿನ ಕುರಲ್ಜುರಿ ಗ್ರಾಮದ ದುಬ್ರಾಜ್ಪುರದ ನಿವಾಸಿ. ವೃತ್ತಿಯಲ್ಲಿ ಕಡೆಲೇಕಾಯಿ ವ್ಯಾಪಾರಿಯಾಗಿರುವ ಇವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಒರ್ವ ಪುತ್ರಿಯಿದ್ದಾರೆ. ಪ್ರತಿನಿತ್ಯ ಸೈಕಲ್ ತುಳಿದುಕೊಂಡು ದೂರದ ಊರುಗಳಿಗೆ ಕಡಲೇಕಾಯಿ ಮಾರಾಟ ಮಾಡಲು ಹೋಗುತ್ತಿದ್ದ ಇವರು ಗ್ರಾಹಕರನ್ನು ತಮ್ಮತ್ತ ಸೆಳೆಯಲು ಹಾಡುತ್ತಿದ್ದರು. ಇದೀಗ ಇವರ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಇವರ ವ್ಯಾಪಾರದಲ್ಲಿ ಹೆಚ್ಚಳ ಕಂಡಿದೆ. ಸದ್ಯ ಇವರ ಹಾಡಿಗೆ ಬೇಡಿಕೆ ಹೆಚ್ಚಾಗಿದ್ದು, ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ಇವರನ್ನು ಆಹ್ವಾನಿಸಿ ಹಾಡಿಸಲಾಗುತ್ತಿದೆ.
“ನಾನು ಬಿಡುವಿನ ಸಮಯದಲ್ಲಿ ಹಾಡುಗಳನ್ನು ಬರೆದು ವ್ಯಾಪಾರದ ಸಮಯದಲ್ಲಿ ಹಾಡಿ ಜನರನ್ನು ಹೆಚ್ಚು ರಂಜಿಸುತ್ತಿದ್ದೆ. ನಾನು ಹಾಡುವ ಹಾಡುಗಳ ಬಗ್ಗೆ ಜನರು ಹೆಚ್ಚಾಗಿ ತಿಳಿದುಕೊಳ್ಳಬೇಕು ಎಂದು ಬಯಸುತ್ತೇನೆ ಮತ್ತು ಈ ಮೂಲಕ ನಮಗೆ ಜೀವನೋಪಾಯಕ್ಕಾಗಿ ಸರ್ಕಾರ ಶಾಶ್ವತ ವ್ಯವಸ್ಥೆಗಳನ್ನು ಮಾಡಿಕೊಡಬೇಕು,” ಎಂದು ಭುವನ್ ಬದ್ಯಕರ್ ಅಭಿಪ್ರಾಯ ಪಟ್ಟಿದ್ದಾರೆ.
ಕಚ್ಚಾ ಬಾದಾಮ್ ಹಾಡಿನ ಬಗ್ಗೆ ಮಾತನಾಡಿದ ಭುವನ್ ತಾವು ಈ ಹಾಡನ್ನು ಜನಪ್ರಿಯ ಬೌಲ್ ಜಾನಪದ ರಾಗವನ್ನು ಆಧರಿಸಿ ಬಾದಾಮ್ ಹಾಡನ್ನು ರಚಿಸಿ ಹಾಡಿದ್ದಾಗಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹಾಡು ಅದ್ದೇಗೆ ವೈರಲ್ ಆಯಿತು ಎಂಬ ಬಗ್ಗೆ ನನ್ನಗೆ ತಿಳಿದಿಲ್ಲ ನಾನು ಬೀದಿಬದಿಯಲ್ಲಿ ಹಾಡನ್ನು ಹಾಡಿಕೊಂಡು ವ್ಯಾಪಾರ ಮಾಡುವ ಸಮಯದಲ್ಲಿ ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರಬಹುದು ಅದ್ದರಿಂದ ಅದು ವೈರಲ್ ಆಗಿ ಎಲ್ಲೆಡೆ ಪ್ರಸಿದ್ಧಿ ಪಡೆದಿರಬೇಕು ಎಂದು ಹೇಳಿದ್ದಾರೆ.