ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ʻಕಬ್ಜʼ ಸಿನಿಮಾ, ಅಭಿಮಾನಿಗಳ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡಿತ್ತು.

ಕಳೆದ ಮಾರ್ಚ್ 17ರಂದು ತೆರೆಕಂಡ ʻಕಬ್ಜʼ ಸಿನಿಮಾ, ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆದಿತ್ತು. ಆರ್.ಚಂದ್ರು ನಿರ್ದೇಶನದ ಈ ಚಿತ್ರದಲ್ಲಿ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಉಪ್ಪಿಗೆ ಸಾಥ್ ನೀಡಿದ್ರು.

ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಮೂಡಿ ಬಂದ ʻಕಬ್ಜʼ ಸಿನಿಮಾ ಇದೀಗ ಒಟಿಟಿಗೆ ಲಗ್ಗೆ ಇಡುತ್ತಿದೆ. ಇದೇ ಏಪ್ರಿಲ್ 14ರಂದು ಈ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಡುತ್ತಿದ್ದು, ಅಮೇಜಾನ್ ಪ್ರೈಂನಲ್ಲಿ ಚಿತ್ರ ಸ್ಟ್ರೀಮ್ ಆಗಲಿದೆ.

ʻಕಬ್ಜʼ ಸಿನಿಮಾದಲ್ಲಿ ಉಪೇಂದ್ರಗೆ ಜೋಡಿಯಾಗಿ ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಯಾ ಸರಣ್ ಕಾಣಿಸಿಕೊಂಡಿದ್ದಾರೆ. ಅಕಸ್ಮಾತ್ ನೀವೇನಾದ್ರೂ ಚಿತ್ರಮಂದಿರದಲ್ಲಿ ʻಕಬ್ಜʼ ಸಿನಿಮಾ ನೋಡೋದನ್ನ ಮಿಸ್ ಮಾಡಿಕೊಂಡಿದ್ರೆ, ಏಪ್ರಿಲ್ 14ಕ್ಕೆ ಮನೆ ಮಂದಿ ಜೊತೆ ಕುಳಿತು ʻಕಬ್ಜʼ ಸಿನಿಮಾ ವೀಕ್ಷಿಸಬಹುದು.
