“ಕಬ್ಜ” ಸಿನಿಮಾ ಬಗ್ಗೆ ಕ್ರಿಯೇಟ್ ಆಗಿರೋ ಕ್ರೇಜ್ ಅಷ್ಟಿಷ್ಟಲ್ಲ. ಇಷ್ಟೊಂದು ಎಕ್ಸ್ಪೆಕ್ಟೇಷನ್ ಸುಮ್ ಸುಮ್ಮನೆ ಮೂಡಿದ್ದಲ್ಲ. ಅದರ ಹಿಂದೆ ನಿರ್ದೇಶಕ ಆರ್. ಚಂದ್ರು ಅವರ ಪರಿಶ್ರಮ ಇದೆ. ಹಗಲು-ರಾತ್ರಿ ಎನ್ನದೇ ಕಷ್ಟಪಟ್ಟು ಕೆಲಸ ಮಾಡಿದ ದೊಡ್ಡ ಟೀಮ್ ಇದೆ. ರೆಟ್ರೋ ಕಾಲದ ಕಥೆಯನ್ನ ತೆರೆಗೆ ತರೋದು ಅಂದ್ರೆ ಸುಲಭ ಅಲ್ಲ. ಆ ಕಾಲದ ರೀತಿ ಕಾಣೋಕೆ ಪ್ರಾಪರ್ಟೀಸ್ ಬೇಕು. ಅದನ್ನೆಲ್ಲ ಹೊಂದಿಸುವಲ್ಲಿ ಆರ್. ಚಂದ್ರು ಟೀಮ್ ಸಿಕ್ಕಾಪಟ್ಟೆ ಎಫರ್ಟ್ ಹಾಕಿದೆ. ಅದಕ್ಕೆ ಸಾಕ್ಷಿಯೇ ಈ ಸಿನಿಮಾದಲ್ಲಿ ಇರುವ ಕಾರುಗಳ ಕಲೆಕ್ಷನ್.
ಕಬ್ಜ ಅಂದ್ರೆ ಬರೀ ಸಿನಿಮಾ ಅಲ್ಲ. ಅದು ನಿರ್ದೇಶಕ/ನಿರ್ಮಾಪಕ ಆರ್. ಚಂದ್ರು ಕಂಡ ಬಹುದೊಡ್ಡ ಕನಸು. ಅದನ್ನು ನನಸಾಗಿಸೋಕೆ ಕೋಟಿ ಕೋಟಿ ಹಣ ಸುರಿಯಲಾಗಿದೆ. ಕ್ವಾಲಿಟಿಯಲ್ಲಿ ಕಾಂಪ್ರಮೈಸ್ ಆಗುವ ಮಾತೇ ಇಲ್ಲ. ಇದು ಚಂದ್ರು ಪಾಲಿಸಿ. ಕಬ್ಜ ಸಿನಿಮಾದಲ್ಲಿ ಕಾಣಿಸುವ ಕಾರುಗಳನ್ನು ನೋಡಿದ್ರೆ ಗೊತ್ತಾಗುತ್ತೆ ನಿರ್ದೇಶಕರ ವಿಷನ್ ಎಂಥದ್ದು ಅಂತ.
ಇಂಡಿಯನ್ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಶ್ರೀಯಾ ಶರಣ್ ಅವರ ಅಭಿಮಾನಿಗಳಿಗೆ ‘ಕಬ್ಜ’ ಸಿನಿಮಾ ಎಂದರೆ ಮನರಂಜನೆಯ ಹಬ್ಬ. ಪಾತ್ರಗಳ ರೀತಿಯೇ ಈ ಸಿನಿಮಾದಲ್ಲಿ ಆ ಕಾಲದ ಕಾರುಗಳು, ಬೈಕ್ ಗಳು, ಲಾರಿಗಳು ಗಮನ ಸೆಳೆಯಲಿವೆ. ಈಗಾಗಲೇ ಟ್ರೇಲರ್ ನಲ್ಲಿ ಅವುಗಳ ಝಲಕ್ ಕಾಣ್ಸಿದೆ. ಮಿರಮಿರ ಮಿಂಚುವ ಕಾರುಗಳು ಹೈಲೈಟ್ ಆಗಿವೆ.
ಕಬ್ಜ ಶೂಟಿಂಗ್ಗಾಗಿ ಕಲಾ ಫಾರ್ಮ್ನಿಂದ 30 ವಿಂಟೇಜ್ ಕಾರುಗಳನ್ನ ತರಿಸಲಾಗಿತ್ತು. ಬೇರೆ ಬೇರೆ ಕಡೆಗಳಿಂದ 30 ಲಾರಿಗಳನ್ನ ತರಿಸಿ ಶೂಟಿಂಗ್ ಮಾಡಲಾಗಿದೆ. ಬರೋಬ್ಬರಿ 300 ಬೈಕ್ಗಳು ಬಳಕೆ ಆಗಿವೆ. 70 ಜೀಪುಗಳು ಕೂಡ ಅಬ್ಬರಿಸುತ್ತವೆ. 1945ರ ಕಾಲದ ಸೀನ್ಗಳನ್ನ ತೆರೆ ಮೇಲೆ ಮೂಡಿಸೋಕೆ ಕಬ್ಜ ತಂಡ ಇಷ್ಟೆಲ್ಲ ಕಷ್ಟಪಟ್ಟಿದೆ. ಒಟ್ಟಿನಲ್ಲಿ ಸಿನಿಮಾ ನೋಡೋರಿಗೆ ರೆಟ್ರೋ ಜಮಾನದ ಫೀಲ್ ಆಗಬೇಕು. ನೋಡಿದವರೆಲ್ಲ ವಾವ್ ಅನ್ನಲೇಬೇಕು ಎನ್ನುವಂತಹ ಗುರಿ ಇಟ್ಕೊಂಡು ಮಾಡಿದ ಪ್ರಯತ್ನವೆಲ್ಲ ತೆರೆ ಮೇಲೆ ಕಾಣಿಸ್ತಿದೆ.
ಆರ್. ಚಂದ್ರು ಒಬ್ಬ ಛಲಗಾರ. ಅಂದುಕೊಂಡ ರೀತಿಯೇ ಸಿನಿಮಾ ಮೂಡಿಬರಬೇಕು ಅಂತ ಪಟ್ಟು ಹಿಡಿಯುವ ಹಠವಾದಿ. ಕೊರೊನಾ ಲಾಕ್ಡೌನ್ ಕಾರಣಕ್ಕೆ ಶೂಟಿಂಗ್ಗೆ ಅಡೆಚಣೆ ಉಂಟಾಗಿತ್ತು. ಆ ರೀತಿ ಎಷ್ಟೇ ಕಷ್ಟ ಬಂದ್ರೂ ಹಿಡಿದ ಕೆಲಸವನ್ನು ಅವರು ಅರ್ಧಕ್ಕೆ ಬಿಟ್ಟಿಲ್ಲ. ಅಂದುಕೊಂಡ ರೀತಿಯೇ ‘ಕಬ್ಜ’ ಲೋಕವನ್ನ ಅವರು ಕಟ್ಟಿದ್ದಾರೆ. ಅದರಲ್ಲಿನ ಪ್ರತಿಯೊಂದು ವಸ್ತುಗಳೂ ಪ್ರೇಕ್ಷಕರ ಕಣ್ಣಿಗೆ ಹಬ್ಬ.
ವಿಂಟೇಜ್ ಕಾರುಗಳನ್ನ ಇಟ್ಕೊಂಡು ನೂರಾರು ದಿನಗಳ ಕಾಲ ಶೂಟಿಂಗ್ ಮಾಡೋದು ಸುಲಭ ಅಲ್ಲ. ಆ್ಯಕ್ಷನ್ ಸೀಕ್ವೆನ್ಸ್ ಮಾಡುವಾಗ ಮೈಯೆಲ್ಲ ಕಣ್ಣಾಗಿರಬೇಕು. ಒಂದು ಕಾರಿಗೂ ಹಾನಿ ಆಗದಂತೆ ನೋಡಿಕೊಳ್ಳಬೇಕು. ಯಾಕೆಂದ್ರೆ ಈ ವಾಹನಗಳಿಗೆ ಬೆಲೆ ಕಟ್ಟೋಕಾಗಲ್ಲ. ಇಂಥ ಸಾಕಷ್ಟು ಚಾಲೆಂಜ್ಗಳ ನಡುವೆಯೇ ‘ಕಬ್ಜ’ ಸಿನಿಮಾ ನಿರ್ಮಾಣ ಆಗಿದೆ. 1945ರಿಂದ 1987ರವರೆಗೆ ಸಾಗುವ ಕಥೆಯಲ್ಲಿ ಯಾವ ಯಾವ ರೀತಿ ವಾಹನಗಳು ಬರುತ್ತವೋ ಅದೆನ್ನೆಲ್ಲ ಕಷ್ಟಪಟ್ಟು ಸಂಗ್ರಹಿಸಿ ಶೂಟಿಂಗ್ ಮಾಡಲಾಗಿದೆ.
ಆರ್. ಚಂದ್ರು ಅವರ ಈ ಪರಿಶ್ರಮದಿಂದಾಗಿ ಎಲ್ಲರೂ ಕಬ್ಜ ಚಿತ್ರದ ಬಗ್ಗೆ ಮಾತಾಡುವಂತಾಗಿದೆ. ಕ್ವಾಲಿಟಿ ಅಂದ್ರೆ ಕಬ್ಜ, ಕಬ್ಜ ಅಂದ್ರೆ ಕ್ವಾಲಿಟಿ ಅಂತ ಎಲ್ಲರೂ ಕಮೆಂಟ್ ಮಾಡ್ತಿದ್ದಾರೆ. ಮೇಕಿಂಗ್ ಸ್ಟೈಲ್ ನೋಡಿ ಪರಭಾಷೆಯ ಮಂದಿ ಬಾಯಿ ಮೇಲೆ ಬೆರಳು ಇಟ್ಕೊಂಡಿದಾರೆ. ಕಬ್ಜ ಬ್ಲಾಕ್ ಬಸ್ಟರ್ ಹಿಟ್ ಆಗೋದ್ರಲ್ಲಿ ಅನುಮಾನವೇ ಇಲ್ಲ ಎಂಬ ಟಾಕ್ ಕ್ರಿಯೇಟ್ ಆಗಿದೆ.