
ಚಿತ್ರದುರ್ಗ: ಚಿತ್ರದುರ್ಗ ನಗರಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ಸಚಿವ ಜಾರ್ಜ್, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಗೃಹ ಜ್ಯೋತಿ ಯೋಜನೆ ಪ್ರತಿ ತಿಂಗಳು ಮನೆಗೆ ಶೂನ್ಯ ಬಿಲ್ ಹೋಗುತ್ತಿದೆ. ಬೇರೆ ಯೋಜನೆಗಳು ಬೇರೆ ಇಲಾಖೆಯ ವ್ಯಾಪ್ತಿಗೆ ಬರುತ್ತದೆ, ಹೀಗಾಗಿ ನೀವು ಅವರನ್ನ ಕೇಳಬೇಕು ಎಂದಿದ್ದಾರೆ.

ಹಣಕಾಸು ಸಚಿವರಾಗಲು ಸಿದ್ದರಾಮಯ್ಯ ನಾಲಾಯಕ್ ಎಂಬ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದು, ಈಶ್ವರಪ್ಪ ಅವರು ಯಾವುದಕ್ಕೆ ಲಾಯಕ್ ಎಂದು ನಿಮಗೆ ಗೊತ್ತಿದೆ. ಇವತ್ತು ಜನ ಅವರನ್ನ ಸೋಲಿಸಿದ್ದಾರೆ. ಸಿದ್ದರಾಮಯ್ಯ ಎಂಥ ದಕ್ಷ ನಾಯಕ ಎಂದು ಪ್ರಪಂಚಕ್ಕೆ ಗೊತ್ತಿದೆ ಎಂದು ಸೈಲೆಂಟ್ ಆಗಿಯೇ ಟಾಂಗ್ ಕೊಟ್ಟಿದ್ದಾರೆ.
ಗ್ಯಾರಂಟಿ ಯೋಜನೆ ಜಾರಿಯಲ್ಲಿ ಕೆಲವರಿಗೆ ವಿಳಂಬ ಆಗಿದ್ದು, ಸಂಬಂಧ ಪಟ್ಟ ಸಚಿವರಿಗೆ ಗೊತ್ತಿರುತ್ತದೆ. ಆ ವಿಷಯ ಗೊತ್ತಾದ ಬಳಿಕ ಸಂಬಂಧಪಟ್ಟ ಸಚಿವರು ನೋಡುತ್ತಾರೆ. ಮಾರ್ಚ್ ಒಳಗೆ ಎಲ್ಲವೂ ಬಿಡುಗಡೆ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಈಶ್ವರಪ್ಪ ಕೈನಲ್ಲಿ ಗ್ಯಾರಂಟಿ ಕೊಡಲು ಅಧಿಕಾರ ಇದಿಯಾ..? ಪ್ರಧಾನಿ ಮೋದಿ ಅವರು ಎಲೆಕ್ಷನ್ ಗೆಲ್ಲೋದಕ್ಕೆ ಗ್ಯಾರಂಟಿ ಕೊಟ್ಟಿದ್ರು. ಈಶ್ವರಪ್ಪ ಪ್ರಧಾನಿ ಮೋದಿ ಅವರನ್ನ ಹೋಗಿ ಕೇಳಲಿ ಎಂದಿದ್ದಾರೆ.

DCM ಡಿ.ಕೆ ಶಿವಕುಮಾರ್ ಅವರನ್ನು ಸಚಿವರು ಟಾರ್ಗೆಟ್ ಮಾಡುತ್ತಿರುವ ವಿಚಾರದ ಬಗ್ಗೆ ಮಾತನಾಡಿ, ಈ ವಿಚಾರದಲ್ಲಿ AICC ನಾಯಕರು ಮಾತನಾಡುತ್ತಾರೆ. ಪಕ್ಷದ ಅಧ್ಯಕ್ಷರಾದ DK ಶಿವಕುಮಾರ್ ಮಾತನಾಡುತ್ತಾರೆ. ಈ ವಿಚಾರದಲ್ಲಿ ನಾನು ಕಾಮೆಂಟ್ ಮಾಡಲು ಹೋಗಲ್ಲ. ಮೀಡಿಯಾ ಅವರು & ಬಿಜೆಪಿ ಅವರು ಈ ರೀತಿ ಮಾಡ್ತಾರೆ. ಗಂಟೆಗೊಂದು ಬ್ರೇಕಿಂಗ್ ನ್ಯೂಸ್ ಬರಲು ಈತರ ಆಗ್ತಿದೆ ಎಂದಿದ್ದಾರೆ.

ಬಿಜೆಪಿ ಪಕ್ಷದಲ್ಲಿ ನಡೆಯುವ ಗೊಂದಲ ಮುಚ್ಚಿಕೊಳ್ಳಲು ನಮ್ಮ ಪಕ್ಷದ ಮೇಲೆ ಹಾಕುತ್ತಾರೆ. ಸಚಿವ ರಾಜಣ್ಣ ಅವರು ವೈಯಕ್ತಿಕ ವಿಚಾರ ಹೇಳಿದ್ದಾರೆ. ಅವರು ಏನೂ ಹೇಳಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ನೀವು ಹೋಗಿ ಅವರನ್ನೇ ಕೇಳಿ ಉತ್ತರ ಕೊಡುತ್ತಾರೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ತಣ್ಣನೆ ಉತ್ತರ ನೀಡಿದ್ದಾರೆ.