
ರಾಜ್ಯದ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗ್ತಿರೋ ವಿಚಾರ ರಾಷ್ಟ್ರಮಟ್ಟಕ್ಕೆ ತಲುಪಿದೆ. ವಕ್ಪ್ ಕಿರಿಕ್ ಶುರುವಾಗಿದ್ದು ವಿಜಯಪುರ ಜಿಲ್ಲೆಯಲ್ಲಿ ಹೀಗಾಗಿ ಈಗಾಗಲೇ ವಕ್ಪ್ ಆಸ್ತಿ ವಿವಾದ ವಿರೋಧಿಸಿ ಬಿಜೆಪಿ ನಾಯಕರು ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ. ಈ ನಡುವೆ ವಿಜಯಪುರಕ್ಕೆ ಜಾಯಿಂಟ್ ಪಾರ್ಲಿಮೆಂಟ್ರಿ ಕಮಿಟಿ ಚೇರ್ಮನ್ ಜಗದಂಬಿಕಾ ಪಾಲ್ ಭೇಟಿ ನೀಡುತ್ತಿದ್ದಾರೆ.

ನವೆಂಬರ್ 7 ರಂದು ವಿಜಯಪುರಕ್ಕೆ ಜೆಪಿಸಿ ಚೇರ್ಮನ್ ಜಗದಂಬಿಕಾ ಪಾಲ್ ಭೇಟಿ ನೀಡಲಿದ್ದಾರೆ. ರೈತರನ್ನ ಭೇಟಿ ಮಾಡಲಿರುವ ವಕ್ಫ್ ಜೆಪಿಸಿ ಚೇರ್ಮನ್ ಜಗದಂಬಿಕಾ ಪಾಲ್, ಮೊದಲಿಗೆ ಹುಬ್ಬಳ್ಳಿಗೆ ಬಂದು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ವಿಜಯಪುರಕ್ಕೆ ಬರಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ವಿಜಯಪುರಕ್ಕೆ ಭೇಟಿ ನೀಡಿ, ರೈತರೊಂದಿಗೆ ಚರ್ಚೆ ನಡೆಸಲಿದ್ದಾರೆ
ವಕ್ಫ್‌ನಿಂದ ತೊಂದರೆಗೆ ಒಳಗಾದ ರೈತರ ಸಮಸ್ಯೆ ಆಲಿಸಿದ ಬಳಿಕ ಮಧ್ಯಾಹ್ನ 2.30ಕ್ಕೆ ಸುದ್ದಿಗೋಷ್ಟಿ ನಡೆಸಲಿದ್ದಾರೆ. ಸಂಜೆ 4.45ಕ್ಕೆ ಹೆಲಿಕಾಪ್ಟರ್ ಮೂಲಕ ಬೆಳಗಾವಿ ತಲುಪಲಿರುವ ಜೆಪಿಸಿ ಚೇರ್ಮನ್ ಜಗದಂಬಿಕಾ ಪಾಲ್, ಅಲ್ಲಿಯೂ ಸಭೆಯಲ್ಲಿ ಭಾಗಿಯಾಗಿ ದೆಹಲಿಗೆ ವಾಪಸ್ ಆಗಲಿದ್ದಾರೆ ಎನ್ನಲಾಗಿದೆ.


