ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಜೋಸ್ ಬಟ್ಲರ್ ಅತ್ಯಂತ ವೇಗವಾಗಿ ಐಪಿಎಲ್ ನಲ್ಲಿ 600 ರನ್ ಪೂರೈಸಿದ ಜಂಟಿ ದಾಖಲೆಗೆ ಪಾತ್ರರಾದರು.
ಪಂಜಾಬ್ ಕಿಂಗ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಬಟ್ಲರ್ ಈ ದಾಖಲೆ ಬರೆದರು. ಒಂದೇ ಋತುವಿನಲ್ಲಿ ಆಡಿದ 11 ಪಂದ್ಯಗಳಲ್ಲಿ 600 ರನ್ ಪೂರೈಸುವ ಮೂಲಕ ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್, ಶಾನ್ ಮಾರ್ಷ್ ಮತ್ತು ಕ್ರಿಸ್ ಗೇಲ್ ದಾಖಲೆಯನ್ನು ಸರಿಗಟ್ಟಿದರು.
ಆರ್ ಸಿಬಿ ತಂಡದ ಪರ ಆಡಿದಾಗ ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಈ ಸಾಧನೆ ಮಾಡಿದ್ದರು. ಕೊಹ್ಲಿ 2016ರಲ್ಲಿ ಈ ಸಾಧನೆ ಮಾಡಿದರೆ, ಗೇಲ್ 2019ರಲ್ಲಿ 600 ರನ್ ಪೂರೈಸಿದ ದಾಖಲೆ ಮಾಡಿದರು. ಡೇವಿಡ್ ವಾರ್ನರ್ 2019ರಲ್ಲಿ ಸನ್ ರೈಸರ್ಸ್ ಪರ 600 ರನ್ ಪೂರೈಸಿದರು.