• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆಗಸ್ಟ್ 20ಕ್ಕೆ ಉದ್ಘಾಟನೆಯಲಿದೆ ಜಾಲಿವುಡ್- ಸ್ಟುಡಿಯೋಸ್ ಅಂಡ್ ಅಡ್ವೆಂಚರ್ಸ್ ಥೀಮ್ ಪಾರ್ಕ್

ಪ್ರತಿಧ್ವನಿ by ಪ್ರತಿಧ್ವನಿ
August 17, 2023
in Top Story, ಇತರೆ / Others, ಇದೀಗ, ಕರ್ನಾಟಕ, ವಿಶೇಷ
0
ಆಗಸ್ಟ್ 20ಕ್ಕೆ ಉದ್ಘಾಟನೆಯಲಿದೆ ಜಾಲಿವುಡ್- ಸ್ಟುಡಿಯೋಸ್ ಅಂಡ್ ಅಡ್ವೆಂಚರ್ಸ್ ಥೀಮ್ ಪಾರ್ಕ್
Share on WhatsAppShare on FacebookShare on Telegram

ಚೆನ್ನೈ (chennai ) ಮೂಲದ ವೇಲ್ಸ್ ಗ್ರೂಪ್‌ ನ (wells Groups ) ಅಂಗಸಂಸ್ಥೆಯಾದ ವೇಲ್ಸ್ ಸ್ಟುಡಿಯೋಸ್ ( wells Studios ) ಅಂಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು, ಇಡೀ ಕುಟುಂಬಕ್ಕೆ ( Family ) ಭರಪೂರ ಮನರಂಜನೆ ( Entertainment ) ನೀಡುವ ಉದ್ದೇಶದಿಂದ ಬಿಡದಿ ( Bidadi ) ಬಳಿ ಜಾಲಿವುಡ್ – ಸ್ಟುಡಿಯೋಸ್ ಅಂಡ್ ಅಡ್ವೆಂಚರ್ಸ್ ಎಂಬ ಥೀಮ್ ಪಾರ್ಕ್ ಶುರು ಮಾಡಿದೆ.

ಈ ಥೀಮ್ ಪಾರ್ಕ್ ಇದೇ ಆಗಸ್ಟ್ 20ರಂದು ಅದ್ಧೂರಿಯಾಗಿ ಲೋಕಾರ್ಪಣೆ ಆಗಲಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ( D.K. Shivakumar ), ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ( Dr. Shivarajkumar ), ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ( D.K. Suresh ) , ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಈ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಂದು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ಎಲ್ಲ ಕಾರ್ಯಕ್ರಮಗಳಿಗೂ ವೇಲ್ಸ್ ಸ್ಟುಡಿಯೋಸ್ ಅಂಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರಾದ ಡಾ. ಇಶಾರಿ ಕೆ ಗಣೇಶ್, ಸಂಸ್ಥೆಯ ನಿರ್ದೇಶಕರಾದ ಡಾ. ಪ್ರೀತಾ ಗಣೇಶ್ ಮತ್ತು ಕುಶ್ಮಿತಾ ಗಣೇಶ್ ಸ್ವಾಗತ ಕೋರಿದ್ದಾರೆ.

ADVERTISEMENT


ಜಾಲಿವುಡ್ ಬಗ್ಗೆ: ಬೆಂಗಳೂರು ಮತ್ತು ಮೈಸೂರು ನಡುವೆ ಬಿಡದಿ ಬಳಿ ಸುಮಾರು 40 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಮತ್ತು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆ ಯಿಂದ 10 ನಿಮಿಷ ದೂರದಲ್ಲಿರುವ ಈ ಜಾಲಿವುಡ್ ಎಲ್ಲಾ ವಯಸ್ಸಿನವರಿಗೂ ಒಂದು ಅದ್ಭುತ ತಾಣವಾಗಿದೆ. ಸಿನಿಮಾ ಮತ್ತು ಸಾಹಸ ಮಿಳಿತವಾಗಿರುವ ಈ ಥೀಮ್ ಪಾರ್ಕ್ ನಲ್ಲಿ ಚಿತ್ರಗಳಲ್ಲಿ ಬಳಸಲಾಗುವ ಕೆಲವು ಸೆಟ್ ಗಳು, ಬಾಲಿವುಡ್ ನಡೆದು ಬಂದ ಹಾದಿ, ನಿಮ್ಮ ಮೆಚ್ಚಿನ ದೃಶ್ಯಗಳನ್ನು ನೋಡಬಹುದಾಗಿದೆ. ಹಾಡು-ನೃತ್ಯ ಕಾರ್ಯಕ್ರಮಗಳು, ಲೈವ್ ಪ್ರದರ್ಶನಗಳು ಸಹ ಇರಲಿವೆ. ಇದರ ಜೊತೆಗೆ ಇಡೀ ಕುಟುಂಬದವರು ಆಡಿ ಖುಷಿಪಡಬಹುದಾದ ಹಲವು ಸಾಹಸ ಕ್ರೀಡೆಗಳಿವೆ.


ಜಾಲಿವುಡ್ ನ ಹೈಲೈಟ್ ಎಂದರೆ ಜಾಲಿ ಐಲ್ಯಾಂಡ್ ಎಂಬ ವಾಟರ್ ಪಾರ್ಕ್. ಈ ಥೀಮ್ ಪಾರ್ಕ್ನ ಹೃದಯಭಾಗದಲ್ಲಿರುವ ಜಾಲಿ ಐಲ್ಯಾಂಡ್ ನಲ್ಲಿ ಸಮುದ್ರದ ಅಲೆಗಳನ್ನು ನೆನಪಿಸುವ ವೇವ್ ಪೂಲ್ ಇದೆ. ಕುಟುಂಬದ ಎಲ್ಲಾ ಸದಸ್ಯರ ಮನರಂಜನೆಗಾಗಿ ಹಲವು ವಾಟರ್ ಸ್ಲೈಡ್ ಗಳು, ಸ್ಪ್ಲಾಶ್ ಜೋನ್ ಗಳು ಮತ್ತು ಆಟ ಆಡಿ ಸುಸ್ತಾದಾಗ ವಿಶ್ರಾಂತಿ ಪಡೆಯಲು ಪ್ರತ್ಯೇಕ ಸ್ಥಳಗಳು ಸಹ ಇವೆ.


ಸಿನಿಮಾ, ಮನರಂಜನೆ ಮತ್ತು ಸಾಹಸವಲ್ಲದೆ ನಿಮಗಿಷ್ಟವಾದ ಮತ್ತು ಸ್ವಾಧಿಷ್ಟವಾದ ಉತ್ತರ ಭಾರತ, ದಕ್ಷಿಣ ಭಾರತ, ಚೈನೀಸ್, ಕಾಂಟಿನೆಂಟಲ್ ಮುಂತಾದ ತಿಂಡಿ-ತಿನಿಸುಗಳನ್ನು ಉಣಬಡಿಸುವ ರೆಸ್ಟೋರೆಂಟ್ ಗಳು ನಿಮ್ಮ ಹೊಟ್ಟೆ ತುಂಬಿಸುವುದಕ್ಕೆ ಸದಾ ಸಿದ್ದವಾಗಿರುತ್ತವೆ.


ಈ ಥೀಮ್ ಪಾರ್ಕ್ ನ ಪ್ರವೇಶ ದರ, ಮಾರ್ಗ ಮುಂತಾದ ಹಲವು ವಿಷಯಗಳಿಗೆ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಆದ www.jollywood.co.in ಲಾಗಿನ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

Tags: CMSiddaramaiahDKShivakumarEntertainmentjollywood
Previous Post

ಭಾರಿ ಮೊತ್ತಕ್ಕೆ ಮಾರಾಟವಾಯಿತು “ರಾನಿ” ಆಡಿಯೋ ರೈಟ್ಸ್ , ಸಿನಿ ರಸಿಕರಲ್ಲಿ ಹೆಚ್ಚಾಯ್ತು ನಿರೀಕ್ಷೆ.!

Next Post

ಹಳ್ಳಿ ಸೊಗಡು ಕಟ್ಟಿಕೊಡುವ ’ಟಗರು ಪಲ್ಯ’ ಟೈಟಲ್ ಟ್ರ್ಯಾಕ್ ರಿಲೀಸ್..!

Related Posts

ದೇವೇಗೌಡರಿಗೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್..!‌: ಗುರುವಿಗೆ ಶಿಷ್ಯನ ಕೊಡುಗೆ ಏನು..?
Top Story

ದೇವೇಗೌಡರಿಗೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್..!‌: ಗುರುವಿಗೆ ಶಿಷ್ಯನ ಕೊಡುಗೆ ಏನು..?

by ಪ್ರತಿಧ್ವನಿ
April 21, 2026
0

ಬೆಂಗಳೂರು: ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್‌ಡಿ ದೇವೇಗೌಡರಿಗೆ (Former Prime Minister, Rajya Sabha Member HD Deve Gowda) ಇದೀಗ ಮುಖ್ಯಮಂತ್ರಿ...

Read moreDetails
ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

April 20, 2026
ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

April 20, 2026
“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

April 20, 2026
ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

April 20, 2026
Next Post
ಹಳ್ಳಿ ಸೊಗಡು ಕಟ್ಟಿಕೊಡುವ ’ಟಗರು ಪಲ್ಯ’ ಟೈಟಲ್ ಟ್ರ್ಯಾಕ್ ರಿಲೀಸ್..!

ಹಳ್ಳಿ ಸೊಗಡು ಕಟ್ಟಿಕೊಡುವ ’ಟಗರು ಪಲ್ಯ’ ಟೈಟಲ್ ಟ್ರ್ಯಾಕ್ ರಿಲೀಸ್..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada