ಸೆಪ್ಟೆಂಬರ್ 29ರಿಂದ ಬೆಂಗಳೂರು ಸೇರಿದಂತೆ ದೇಶದ 13 ನಗರಗಳಲ್ಲಿ5ಜಿ ತರಂಗಾಂತರ ಸೇವೆ ಮೊದಲ ಹಂತದಲ್ಲೇ ದೊರೆಯಲಿದೆ.
5ಜಿ ತರಂಗಾಂತರ ಸೇವೆ ಹರಾಜು ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಅಕ್ಟೋಬರ್ ನಲ್ಲಿ ಸೇವೆ ಆರಂಭವಾಗುವ ನಿರೀಕ್ಷೆ ಇತ್ತು. ಆದರೆ ಇದೀಗ ಜಿಯೊ, ಏರ್ ಟೆಲ್, ಐಡಿಯಾ-ವೋಡಾಫೋನ್ ಟೆಲಿಕಾಂ ಕಂಪನಿಗಳು ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ ನಲ್ಲಿಯೇ ಸೇವೆ ಆರಂಭಿಸಲು ಸಿದ್ಧತೆ ನಡೆಸಿವೆ.
5ಜಿ ತರಂಗಾಂತರ ಸೇವೆ ಆರಂಭಿಸಲು ಬೆಂಗಳೂರು ಸೇರಿದಂತೆ 13 ಪ್ರಮುಖ ನಗರಗಳಲ್ಲಿ ಆಯ್ಕೆ ಮಾಡಲಾಗಿದೆ. ಅತ್ಯಂತ ವೇಗದ ಇಂಟರ್ ನೆಟ್ ಸೇವೆ ಒದಗಿಸುವ 5ಜಿ ಸೇವೆ ಆರಂಭಿಸುವ ಕುರಿತು ಈಗಾಗಲೇ ಕೇಂದ್ರ ಟೆಲಿಕಾಂ ಕಂಪನಿಗಳಿಗೆ ಅನುಮತಿ ಪತ್ರವನ್ನೂ ನೀಡಿದೆ.
ಬೆಂಗಳೂರು, ಅಹಮದಾಬಾದ್, ಮುಂಬೈ, ದೆಹಲಿ, ಚಂಡೀಗಢ, ಗಾಂಧಿನಗರ, ಗುರ್ ಗಾಂವ್, ಹೈದರಾಬಾದ್, ಜಾಮ್ ನಗರ್, ಕೋಲ್ಕತಾ, ಲಕ್ನೋ ಮತ್ತು ಪುಣೆ ನಗರಗಳಲ್ಲಿ ಮುಂದಿನ ತಿಂಗಳ ಆರಂಭದಲ್ಲೇ 5ಜಿ ಸೇವೆ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರಕಾರ ಈಗಾಗಲೇ 17,876 ಕೋಟಿ ರೂ. ಶುಲ್ಕವನ್ನು ಪಡೆಯಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ರಸೀದಿ ನೀಡಿದೆ.
ಸೆಪ್ಟೆಂಬರ್ 29ರಂದು ದೇಶಾದ್ಯಂತ 5ಜಿ ತರಂಗಾಂತರದ ಮೊದಲ ಹಂತದ ಸೇವೆ ಆರಂಭಗೊಳ್ಳಲಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ (2022) 5ಜಿ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 15ರಂದು ೫ಜಿ ತರಂಗಾಂತರ ಸೇವೆ ಆರಂಭದ ಘೋಷಣೆ ಮಾಡಿದ್ದಾರೆ. ಆದರೆ ಅಂಗಡಿ ಮಾಲೀಕರು ಹಾಗೂ ಮಾರುಕಟ್ಟೆದಾರರು ಪೂರ್ಣ ಸಿದ್ಧತೆ ಇಲ್ಲದ ಕಾರಣ ಸೇವೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು. ಇದರಿಂದ ಅಧಿಕೃತವಾಗಿ ಸೆಪ್ಟೆಂಬರ್ ಕೊನೆಯಲ್ಲಿ ಉದ್ಘಾಟನೆ ಆಗಲಿದೆ.