~ಡಾ. ಜೆ ಎಸ್ ಪಾಟೀಲ
ಮೋದಿ ಸರಕಾರ ತರಲು ಉದ್ದೇಶಿಸಿರುವ ಏಕರೂಪ ನಾಗರಿಕ ಸಂಹಿತೆಯ ವಿರುದ್ಧ ಭಾರೀ ಪ್ರತಿಭಟನೆಗೆ ಸಜ್ಜಾಗಿರುವ ಜಾರ್ಖಂಡಿನ ಬುಡಕಟ್ಟು ಜನಾಂಗ ಆ ಮೂಲಕ ಮೋದಿಗೆ ಕಠಿಣ ಸಂದೇಶವನ್ನು ರವಾನಿಸಿದೆ. ಹುಟ್ಟಿನಿಂದ ಸಾವಿನವರೆಗೆ ಈ ದೇಶದಲ್ಲಿ ಎಲ್ಲವೂ ಭಿನ್ನ ವಿಭಿನ್ನವಾಗಿದೆ. ಭಾರತವನ್ನು ಒಗ್ಗೂಡಿಸಲು, ಮಹಿಳಾ ಸಮಾನತೆಯನ್ನು ತರುವ ಮತ್ತು ಹಳತಾದ ಹಾಗು ಮೌಢ್ಯಯುಕ್ತವಾದ ಧಾರ್ಮಿಕ ಆಚರಣೆಗಳನ್ನು ತೊಡೆದುಹಾಕುವ ಪ್ರಯತ್ನಗಳ ನಡುವೆ ಈಗ ತರಲಿಚ್ಛಿಸಿರುವ ಏಕರೂಪತೆ ನಾಗರಿಕ ಸಂಹಿತೆಯು ರಾಜಕೀಯ ಬಣ್ಣ ಹೊಂದಿರುವುದು ಬಹಿರಂಗಗೊಂಡಿದೆ. ಮುಂಬರುವ ಸಂಸತ್ ಚುನಾವಣೆಯ ಗೆಲುವನ್ನು ದೃಷ್ಠಿಯಲ್ಲಿಟ್ಟುಕೊಂಡು ಏಕರೂಪ ನಾಗರಿಕ ಸಂಹಿತೆಯ ಗದ್ದಲದಿಂದ ಹಿಂದೂ-ಮುಸ್ಲಿಮ್ ಮತಗಳ ದೃವೀಕರಣಕ್ಕೆ ಬಿಜೆಪಿ ಕೈಹಾಕಿದಂತಿದೆ. ಈ ಕುರಿತು ಕೃಷ್ಣ ಮುರಾರಿ ಎಂಬ ಲೇಖಕರು ಇದೇ ೩೧ ಜುಲೈ, ೨೦೨೩ ರ ‘ದಿ ಪ್ರಿಂಟ್’ ವೆಬ್ ಪತ್ರಿಕೆಯಲ್ಲಿ ಒಂದು ಸುದೀರ್ಘ ಲೇಖನವನ್ನು ಬರೆದಿದ್ದಾರೆ. ಆ ಲೇಖನವನ್ನು ನಾನಿಲ್ಲಿ ಪುನಃ ವಿಮರ್ಶಿಸಿದ್ದೇನೆ.
ಭಾನುವಾರ ದಿನಾಂಕ ೬ ಆಗಸ್ಟ್ ೨೦೨೩ ರಂದು, ಬುಡಕಟ್ಟು ಜನರು ತಮ್ಮ ಸಾಂಪ್ರದಾಯಿಕ ಬಟ್ಟೆ ಮತ್ತು ಆಭರಣಗಳನ್ನು ಧರಿಸಿ ಜಾರ್ಖಂಡ್ನ ಖುಂತಿಯಲ್ಲಿ ಸೇರಿ, ತಮ್ಮ ಸಂಸ್ಕೃತಿ ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಪುನರುಜ್ಜೀವನಗೊಳಿಸುವುದು ಹೇಗೆ ಎಂದು ಚರ್ಚಿಸಿದ್ದಾರೆ. ಇದು ೧೨ ವರ್ಷಗಳ ಆಚರಣೆ. ಆದರೆ ಕಳೆದ ಎರಡು ವಾರಗಳಲ್ಲಿ, ಈ ಜನರಲ್ಲಿ ಸ್ಪಷ್ಟವಾದ ಭೀತಿ ಉಂಟಾಗಿದೆ ಮತ್ತು ಭಾರತದಾದ್ಯಂತ ಏಕರೂಪ ನಾಗರಿಕ ಸಂಹಿತೆ ತರಬೇಕೆನ್ನುವ ಪ್ರಧಾನಿ ನರೇಂದ್ರ ಮೋದಿಯವರ ಕ್ರಮದ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ. ಬುಡಕಟ್ಟು ಜನಾಂಗದ ಈ ಸಭೆಗಳು ಈಗ ಭಾರತೀಯ ಜನತಾ ಪಕ್ಷ ತರಬಯಿಸಿರುವ ಯುಸಿಸಿ ಕ್ರಮವನ್ನು ವಿರೋಧಿಸಲು ತರಬೇತಿ ಶಿಬಿರಗಳಾಗಿ ಬದಲಾಗುತ್ತಿವೆ. ಈ ಆತಂಕವು ಕೇವಲ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಮಾತ್ರವಲ್ಲದೆ; ಭಾರತೀಯ ಬುಡಕಟ್ಟು ಸಂಸ್ಕೃತಿಯ ನೆಲದಲ್ಲಿ ಈಗಾಗಲೇ ನಡುಕ ಹುಟ್ಟಿಸಿದೆ. ದೇಶಾದ್ಯಂತ ಯುಸಿಸಿ ವಿರೋಧಿಸಿ ಇದುವರೆಗೆ ೧೦೦ಕ್ಕೂ ಹೆಚ್ಚು ಪ್ರತಿಭಟನೆಗಳು ನಡೆದಿವೆ ಎನ್ನುತ್ತಾರೆ ಲೇಖಕರು.
ಜುಲೈ ಆರಂಭದಲ್ಲಿ ರಾಂಚಿಯಲ್ಲಿ ಆದಿವಾಸಿ ಸಮನ್ವಯ ಸಮಿತಿಯ ಅಡಿಯಲ್ಲಿ ೩೦ ಕ್ಕೂ ಹೆಚ್ಚು ಬುಡಕಟ್ಟು ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇದನ್ನು ಅವು ಆಕ್ರೋಶದ ಮೆರವಣಿ ಎಂದು ಕರೆದಿವೆ. ಅವು ರಾಜ್ಯ ಬಿಜೆಪಿ ಪ್ರಧಾನ ಕಛೇರಿಯ ಹೊರಗೆ ಪಿಕೆಟಿಂಗ್ ನಡೆಸಿವೆ. ಬಿಳಿ, ಹಸಿರು ಮತ್ತು ಕೆಂಪು ಸೀರೆಗಳನ್ನು ಧರಿಸಿದ ಬುಡಕಟ್ಟು ಮಹಿಳೆಯರು ಇತ್ತೀಚಿನ ಭಾನುವಾರದಂದು ಮುಂಡಾ ಬುಡಕಟ್ಟು ಜನಾಂಗದವರ ನಂಬಿಕೆಯ ಕೇಂದ್ರವಾದ ಖುಂತಿಯ ಕರಮ್ ಅಖಾಡಾಕ್ಕೆ ತಮ್ಮ ಹಳ್ಳಿಗಳಿಂದ ಟೆಂಪೋಗಳು ಮತ್ತು ಸ್ಥಳೀಯ ಬಸ್ಗಳ ಮೂಲಕ ಕುಟುಂಬಗಳೊಂದಿಗೆ ಬರಲು ಪ್ರಾರಂಭಿಸಿದರು. ಅವರ ನಿಜವಾದ ಭಯ ಏನೆಂದರೆ ತಮ್ಮ ಕಠಿಣ ಹೋರಾಟದ ಫಲದಿಂದ ಪಡೆದ ಭೂ ಒಡೆತನದ ಹಕ್ಕುಗಳನ್ನು ಕಳೆದುಕೊಳ್ಳುತ್ತೇವೆ ಎಂಬುದು. ಆನಂತರ ಯುಸಿಸಿ ಕಾನೂನು ಅನುಷ್ಟಾನಗೊಂಡರೆ ಬುಡಕಟ್ಟು ಜನಾಂಗದ ಮದುವೆ, ಉತ್ತರಾಧಿಕಾರ ಮತ್ತು ಮಕ್ಕಳ ದತ್ತು ಹಕ್ಕು ಹಾಗು ಅವರ ಸ್ಥಳೀಯ ಸಾಂಸ್ಕೃತಿಕ ಆಚರಣೆಗಳು ನಿಂತು ಹೋಗುತ್ತವೆ ಎನ್ನುವ ಭಯ ಅವರನ್ನು ಆವರಿಸಿದೆ ಎನ್ನುತ್ತಾರೆ ಲೇಖಕರು.
ತನ್ನೊಂದಿಗೆ ಪ್ರತಿಭಟನೆಗೆ ಬಂದಿದ್ದ ಬುಡಕಟ್ಟು ಜನಾಂಗದ ಇತರರೊಂದಿಗೆ ಹಸಿರು ಮತ್ತು ನೀಲಿ ಪಟ್ಟೆಯುಳ್ಳ ಚಾಪೆಯ ಮೇಲೆ ಕುಳಿತಿರುವ ಮುಡೆಸ್ನಾ ಟೊಪ್ನೊ, ಬುಡಕಟ್ಟು ಮಹಿಳೆಯಾಗಿ ತನ್ನ ಹಕ್ಕುಗಳ ಮೇಲೆ ಯುಸಿಸಿ ಹೇಗೆ ದುಸ್ಪರಿಣಾಮ ಬೀರುತ್ತದೆ ಎಂದು ಚರ್ಚಿಸುತ್ತಾಳೆ. ಆಕೆ ಉದ್ರೇಕಗೊಂಡಂತಿದ್ದು ಕೋಪದಿಂದ ಅನೇಕ ಪ್ರಶ್ನೆಗಳನ್ನು ಹಾಕುತ್ತಾಳೆ. ಉಳಿದ ಬುಡಕಟ್ಟು ಜನರು ತಮ್ಮ ಪೂರ್ವಜರ ಆಸ್ತಿಯ ಒಂದು ಭಾಗವನ್ನು ಕಿತ್ತಿಕೊಳ್ಳಹುದೆಂಬ ಯುಸಿಸಿ ಪಿತ್ರಾರ್ಜಿತ ಕಾನೂನುನಿನ ಅನುಷ್ಟಾನದ ಬಗ್ಗೆ ಅಸಮಾಧಾನಗೊಂಡಿದ್ದಾರೆ. “ನಾವು ಬಿರ್ಸಾ ಮುಂಡಾನ ವಂಶಸ್ಥರು. ನಮ್ಮ ಭೂಮಿಯ ರಷಣೆಗಾಗಿ ಹೇಗೆ ಹೋರಾಡಬೇಕೆಂದು ನಮಗೆ ತಿಳಿದಿದೆ” ಎಂದು ಇನ್ನೊಬ್ಬ ಬುಡಕಟ್ಟು ಮಹಿಳೆ ಮನೋನಿತಾ ಹೇಳುತ್ತಾರೆ. ಬುಡಕಟ್ಟು ಜನಾಂಗದ ಐಕಾನ್ಗಳಾದ ಗಯಾ ಮುಂಡಾ, ಬಿರ್ಸಾ ಮುಂಡಾ ಮತ್ತು ಸಿಧು-ಕನ್ಹು ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಿಧು ಮತ್ತು ಕನ್ಹು ಮುರ್ಮು ಅವರ ದೊಡ್ಡ ಭಾವಚಿತ್ರಗಳು ಅವರ ಪ್ರತಿಭಟನಾ ಸ್ಥಳದ ಗೋಡೆಗಳ ಮೇಲೆ ನೇತಾಡುತ್ತಿವೆ ಎಂದು ಲೇಖಕರು ವರದಿ ಮಾಡಿದ್ದಾರೆ.
ದೊಡ್ಡ ಸಾಂಪ್ರದಾಯಿಕ ಸಂಗೀತ ವಾದ್ಯ, ಮತ್ತು ಅವರ ಮಂದರ್ ವಾದ್ಯಗಳು ಅಲ್ಲಿನ ಛಾವಣಿಯಲ್ಲಿ ನೇತಾಡುತ್ತದೆ. “ನಮ್ಮದೆಯಾದ ವಿಶಿಷ್ಟ ಬುಡಕಟ್ಟು ಸಾಂಪ್ರದಾಯ ಹೊಂದಿರುವ ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಬದಲಾಯಿಸಲು ಬಿಡುವುದಿಲ್ಲ, ನಮ್ಮ ಭೂಮಿಯನ್ನು ನಾವು ರಕ್ಷಿಸಲು ಬಯಸುತ್ತೆವೆ” ಎನ್ನುತ್ತಾಳೆ ಆಕೆ. ಉಳಿದವರು ಅದಕ್ಕೆ ಧನಿಗೂಡಿಸುತ್ತಾರೆ. ಭಾರತದ ಪ್ರಜೆಗಳು ಪ್ರತ್ಯೇಕ ಕಾನೂನುಗಳನ್ನು ಹೊಂದಲಾಗದು ಮತ್ತು ಪ್ರತಿಪಕ್ಷಗಳು ಮುಸ್ಲಿಮರನ್ನು ಪ್ರಚೋದಿಸುವುದು ನಿಲ್ಲಿಸಬೇಕು ಎಂದು ಮೋದಿ ಹೇಳಿದಾಗಿನಿಂದ, ಕಾನೂನು ಆಯೋಗವು ಯುಸಿಸಿ ಕುರಿತು ಸಾರ್ವಜನಿಕ ಸಮಾಲೋಚನೆ ನಡೆಸಿತು. ಆದರೆ ಜಾರ್ಖಂಡ್, ಛತ್ತೀಸ್ಗಢ, ನಾಗಾಲ್ಯಾಂಡ್, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಹಲವಾರು ಬುಡಕಟ್ಟು ಗುಂಪುಗಳು ಇದನ್ನು ವಿರೋಧಸಿದವು. ಬಿಜೆಪಿ ಸಂಸದ ಮತ್ತು ಕಾನೂನು ಮತ್ತು ನ್ಯಾಯ ಸಂಸದೀಯ ಸಮಿತಿಯ ಅಧ್ಯಕ್ಷ ಸುಶೀಲ್ ಕುಮಾರ್ ಮೋದಿ, ಬುಡಕಟ್ಟು ಜನರನ್ನು ಯುಸಿಸಿಯಿಂದ ಹೊರಗಿಡಬೇಕು ಎಂದು ಹೇಳಿದ್ದಾರೆ ಎಂದು ಲೇಖಕರು ಬರೆದಿದ್ದಾರೆ.
ಜಾರ್ಖಂಡ್ ಮತ್ತು ಭಾರತದ ಇತರ ಭಾಗಗಳಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ-ಸಂಯೋಜಿತ ಸಂಸ್ಥೆ ವನವಾಸಿ ಕಲ್ಯಾಣ ಆಶ್ರಮವು ಬಂಡೆ ಮತ್ತು ಗಟ್ಟಿಯಾದ ಸ್ಥಳದ ನಡುವೆ ಸಿಲುಕಿಕೊಂಡಿದೆ. “ಯುಸಿಸಿ ಒಳ್ಳೆಯದು, ಆದರೆ ನಾವು ಬುಡಕಟ್ಟು ಪ್ರದೇಶಗಳಿಗೆ ಭೇಟಿ ನೀಡಲು ಮತ್ತು ಸಾಂಪ್ರದಾಯಿಕ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಕಾನೂನು ಆಯೋಗವನ್ನು ವಿನಂತಿಸಿದ್ದೇವೆ. ಆಯೋಗವು ತರಾತುರಿಯಲ್ಲಿ ತನ್ನ ವರದಿ ನೀಡಬಾರದು” ಎಂದು ವನವಾಸಿ ಕಲ್ಯಾಣ ಆಶ್ರಮದ ಉಪಾಧ್ಯಕ್ಷ ಸತ್ಯೇಂದ್ರ ಸಿಂಗ್ ಹೇಳುತ್ತಾರೆ. ದುರ್ಗಾವತಿ ಒಡೆಯˌ ಸುಲಭವಾಗಿ ಮಣಿಯುವ ಹೆಣ್ಣುಮಗಳಲ್ಲ. ಕೇಂದ್ರ ಸರಣ ಸಂಗೋಮ್ ಸಮಿತಿಯ ಸಂಸ್ಥಾಪಕಿ ಮತ್ತು ಮುಖ್ಯಸ್ಥಯಾಗಿ, ಆಕೆ ಬುಡಕಟ್ಟು ಜನಾಂಗದ ಸಂಪ್ರದಾಯ ಮತ್ತು ಪದ್ಧತಿಗಳ ಬಗ್ಗೆ ಶಿಕ್ಷಣ ನೀಡುತ್ತಾರೆ. ಈ ಗುರಿಯ ಅನ್ವೇಷಣೆಯಲ್ಲಿ, ಆಕೆ ಯುಸಿಸಿ ವಿರುದ್ಧ ಪ್ರತಿಭಟಿಸಲು ತರಬೇತಿ ಶಿಬಿರಗಳನ್ನು ನಡೆಸುತ್ತಾರೆ ಎಂದು ಲೇಖಕರು ಬರೆದಿದ್ದಾರೆ.
ಆಕೆ ಕಟ್ಟಿಗೆಯ ಕುರ್ಚಿಯ ಮೇಲೆ ಕುಳಿತು, ತನ್ನ ಕೈಯಲ್ಲಿ ತಮ್ಮ ಪ್ರಕೃತಿ ದೈವವಾಗಿರುವ ಸಿಂಗ್ಬೊಂಗಾದ ಪುಸ್ತಕ ಹಿಡಿದಿರುತ್ತಾರೆ. ಆಕೆಯ ಗುಂಪು ಗ್ರಾಮ ಸಭೆಗಳ ಮೂಲಕ ಯುಸಿಸಿ ಕುರಿತು ಜಾಗೃತಿ ಮೂಡಿಸುತ್ತದೆ ಮತ್ತು ಸಾಂಪ್ರದಾಯಿಕ ಮಂದಾರ ಡೋಲು ಬಾರಿಸುವ ಮೂಲಕ ಗ್ರಾಮಸ್ಥರನ್ನು ಒಟ್ಟುಗೂಡಿಸುತ್ತದೆ. ನಾವು ಈ ಹಿಂದೆ ನಮ್ಮ ಭೂಮಿಯನ್ನು ಕಳೆದುಕೊಂಡಿದ್ದೇವೆ ಮತ್ತು ಯುಸಿಸಿ ನಮಗೆ ಹೊಸ ಬೆದರಿಕೆಯನ್ನು ಒಡ್ಡಿದೆ. ನಾವು ಪ್ರಕೃತಿಯನ್ನು ಆರಾಧಿಸುವ ಜನರು. ಹಿಂದೂ ಸಂಸ್ಕೃತಿಗೆ ನಮ್ಮನ್ನು ಸೇರಿಸಲಾಗದು. ನಮ್ಮ ಸಾಂಪ್ರದಾಯಿಕ ಮದುವೆ, ದತ್ತು, ವಿಚ್ಛೇದನ, ಉತ್ತರಾಧಿಕಾರದಲ್ಲಿ ಯಾವುದೇ ಬದಲಾವಣೆಯನ್ನು ನಾವು ಬಯಸುವುದಿಲ್ಲ ಎಂದು ದುರ್ಗಾವತಿ ಹೇಳಿರುವುದನ್ನು ಲೇಖಕರು ದಾಖಲಿಸಿದ್ದಾರೆ. ಕೊನೆಯಲ್ಲಿ, ಅವರು ಯುಸಿಸಿಯಿಂದ ರಕ್ಷಿಸಲು ನಮ್ಮ ದೈವ ಸಿಂಗ್ಬೊಂಗಾಗೆ ಪ್ರಾರ್ಥಿಸುತ್ತಾರೆ. ಅವರು ದೇವರುಗಳಿಗೆ ಮನವಿ ಮಾಡಲ್ಲ. ಚಪ್ಪಾಳೆ ತಟ್ಟುತ್ತಾರೆ, ತಮ್ಮ ದೇಹವನ್ನು ಚಲಿಸುತ್ತಾ ತಮ್ಮ ಕೂದಲನ್ನು ಹಾರಿಸಿ ಅದರಿಂದ ಬದಲಾವಣೆಯ ಗಾಳಿಯು ಬೀಸುವಂತೆ ಪ್ರಾರ್ಥಿಸುತ್ತಾರೆ ಎನ್ನುತ್ತಾರೆ ಲೇಖಕರು.
ಭಾರತವನ್ನು ಒಗ್ಗೂಡಿಸುತ್ತೇವೆ ಎನ್ನುವ ಈ ಯುಸಿಸಿ ಪ್ರತಿಪಾದಕರು, ಮಹಿಳಾ ಸಮಾನತೆˌ ಹಾಗು ಧಾರ್ಮಿಕ ಮೌಢ್ಯಗಳ ನಿವಾರಣೆಯ ಪ್ರಯತ್ನ ಮಾಡುತ್ತಿಲ್ಲ. ಇವರು ತರಲುದ್ದೇಶಿಸಿರುವ ಏಕರೂಪ ಕಾನೂನು ರಾಜಕೀಯ ಉದ್ದೇಶ ಹೊಂದಿರುವ ಪ್ರಮಾದವಾಗಿದೆ. ಭಾರತದ ವೈವಿಧ್ಯತೆಯ ಫ್ಯಾಬ್ರಿಕ್ ಅನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ, ಆದರೆ ೨೧ ನೇ ಶತಮಾನದ ಬದುಕು ಸಾಮಾನ್ಯ ನಾಗರಿಕ ಕಾನೂನನ್ನು ಬಯಸುವುದಿಲ್ಲ. ಯುಸಿಸಿ ಚರ್ಚೆಯ ಕೇಂದ್ರವಾಗಿರುವ ಈ ಸಂಘರ್ಷವು ಕೆಲವು ಸಮುದಾಯಗಳಿಗೆ ವಿನಾಯಿತಿಯ ಬೇಡಿಕೆಗಳನ್ನು ಹುಟ್ಟುಹಾಕುತ್ತಿದೆ. ಆದಿವಾಸಾಗಳಿಗೆ ಅವರ ಭೂಮಿಯು ಪವಿತ್ರ. ಬಿಳಿ ಮತ್ತು ಕೆಂಪು ಬಣ್ಣದ ಧ್ವಜಗಳು ಆದಿವಾಸಿ ವಸಾಹತುಗಳ ಧಾರ್ಮಿಕ ಸ್ಥಳಗಳಲ್ಲಿ ಸಖುವ ಅಥವಾ ಸಾಲ್ ಮರಗಳ ಕೊಂಬೆಗಳನ್ನು ಅಲಂಕರಿಸುತ್ತವೆ. ಅವರ ದೇವರುಗಳಾದ ಬುರುಬೊಂಗಾ, ಎಕಿರ್ಬೊಂಗಾ ಮತ್ತು ಸಿಂಗ್ಬೊಂಗಾ ಸೂರ್ಯ, ಪರ್ವತಗಳು, ಭೂಮಿ ಮತ್ತು ಜಲಮೂಲಗಳನ್ನು ಸಾಕಾರಗೊಳಿಸುತ್ತವೆ ಎನ್ನುತ್ತಾರೆ ಲೇಖಕರು.
ಜಾರ್ಖಂಡ್ನಲ್ಲಿರುವ ಭೂಮಿಯು ಬುಡಕಟ್ಟು ಜನಾಂಗದ ಗುರುತು ಮತ್ತು ಅಸ್ಮಿತೆಯ ಕೇಂದ್ರವಾಗಿದೆ. ಇದನ್ನು ಸಮುದಾಯದ ಆಸ್ತಿ ಎಂದು ಪರಿಗಣಿಸಲಾಗುತ್ತದೆಯೆ ಹೊರತು ಒಬ್ಬ ವ್ಯಕ್ತಿಯ ವ್ಯಯಕ್ತಿಕ ಆಸ್ತಿಯಲ್ಲ. ಅದಕ್ಕಾಗಿ, ಅವರು ಕ್ರಿ.ಶ. ೧೭೦೦ ರಿಂದ ೨೦ ನೇ ಶತಮಾನದ ಮೊದಲಾರ್ಧದವರೆಗೆ ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಅನೇಕ ಯುದ್ಧಗಳನ್ನು ನಡೆಸಿದ್ದಾರೆ. ಅವರ ಹೋರಾಟವು ವ್ಯರ್ಥವಾಗಿಲ್ಲ. ೧೯೦೮ ರ ಚೋಟಾ ನಾಗ್ಪುರ್ ಟೆನೆನ್ಸಿ ಆಕ್ಟ್ (CNTA), ೧೮೭೬ ರ ಸಂತಾಲ್ ಪರಗಣ ಟೆನೆನ್ಸಿ ಆಕ್ಟ್ (SPTA) ಮತ್ತು ೧೮೩೭ ರಲ್ಲಿ ವಿಲ್ಕಿನ್ಸನ್ ನಿಯಮವು ಜಾರ್ಖಂಡ್ನ ೩೨ ಬುಡಕಟ್ಟುಗಳಿಗೆ ವಿಶೇಷ ನಿಬಂಧನೆಗಳನ್ನು ನೀಡಿದೆ. ಇವು ಇಂದಿಗೂ ಸಂವಿಧಾನದ ಅಡಿಯಲ್ಲಿ ಮಾನ್ಯತೆ ಪಡೆದಿವೆ. “ಬುಡಕಟ್ಟು ಸಮಾಜದಲ್ಲಿ, ಭೂಮಿಯು ಖಾಸಗಿ ಘಟಕವಲ್ಲ, ಆದರೆ ಅದು ಸಮುದಾಯ ಅಥವಾ ಕುಲಕ್ಕೆ ಸಂಬಂಧಿಸಿದೆ, ಮತ್ತು ಅದನ್ನು ಮಾರಾಟ ಮಾಡುವ ಹಕ್ಕು ಯಾರಿಗೂ ಇಲ್ಲ” ಎಂದು ಯುಸಿಸಿಯಲ್ಲಿ ಪ್ರತಿಭಟಿಸುವ ಪ್ರಮುಖರಲ್ಲಿ ಒಬ್ಬರಾದ ಲಕ್ಷ್ಮಿ ನಾರಾಯಣ ಮುಂಡಾ ಹೇಳಿರುವ ಬಗ್ಗೆ ಲೇಖಕರು ಪ್ರಸ್ತಾಪಿಸಿದ್ದಾರೆ.
ಈಶಾನ್ಯ ಭಾರತದ ಕೆಲವು ಸಮುದಾಯಗಳಿಗಿಂತ ಭಿನ್ನವಾಗಿ, ಜಾರ್ಖಂಡ್ನ ಬುಡಕಟ್ಟು ಸಮಾಜವು ಕಟ್ಟುನಿಟ್ಟಾಗಿ ಪಿತೃಪ್ರಧಾನವಾಗಿದೆ. ಭೂಮಿಯನ್ನು ಪುರುಷರ ನಡುವೆ ಮಾತ್ರ ಹಂಚಲಾಗುತ್ತದೆ, ಆದ್ದರಿಂದ ಅದು ಒಂದೇ ಕುಲದೊಳಗೆ ಉಳಿಯುತ್ತದೆ. ಬುಡಕಟ್ಟು ಜನಾಂಗದವರು ತಮ್ಮ ಎಲ್ಲಾ ಪ್ರಮುಖ ಪದ್ಧತಿಗಳನ್ನು ನಿರ್ವಹಿಸುವ ಪಹನ್ಗಳನ್ನು (ಪುರೋಹಿತರು) ಹೊಂದಿದ್ದಾರೆ ಮತ್ತು ಸಂಪ್ರದಾಯವು ಅವರಿಗೆ ಪ್ರತ್ಯೇಕ ಭೂಮಿಯನ್ನು ಒದಗಿಸುವಂತೆ ಆದೇಶಿಸುತ್ತದೆ. ಈ ಭೂಮಿಯಲ್ಲಿ, ಸಮುದಾಯವು ತನ್ನ ಎಲ್ಲಾ ಪ್ರಮುಖ ಆಚರಣೆಗಳು ಮತ್ತು ಹಬ್ಬಗಳನ್ನು ಆಚರಿಸುತ್ತದೆ, ಉದಾಹರಣೆಗೆ ಸರ್ಹುಲ್ (ಸಾಲ್ ಮರ/ಪ್ರಕೃತಿಯ ಆರಾಧನೆ) ಮತ್ತು ಕರ್ಮ (ಕರ್ಮದ ಆರಾಧನೆ). ಭೂಮಿ ಕೇವಲ ಆಸ್ತಿಯಾಗಿರದೆ ಅದು ಆದಿವಾಸಿಗಳ ಜೀವನ ವಿಧಾನ, ಇದು ಸಮುದಾಯಕ್ಕೆ ಮಿಂಚಿನ ಕಡ್ಡಿ. ಬಿರ್ಸಾ ಮುಂಡಾನ ದಂಗೆಯಿಂದ ಹಿಡಿದು ಕೋಲ್ ಬಂಡಾಯದವರೆಗೆ ಹಿಂದಿನ ಎಲ್ಲಾ ದಂಗೆಗಳು ಈ ಭೂಮಿಯಲ್ಲಿ ಬೇರೂರಿದ್ದು ಅಂದಿನಿಂದಲೂ ಹೋರಾಟ ಮುಂದುವರೆದಿದೆ ಎನ್ನುತ್ತಾರೆ ಲೇಖಕರು.
ಮುಂದುವರೆಯುವುದು…