ಪೆನ್‌ಡ್ರೈವ್ (Pendrive) ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ (Dcm DK shivakumar) ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ (Kumaraswamy) ಮಾಡಿದ್ದ ಆರೋಪಗಳ ಬಗ್ಗೆ ಡಿಕೆ ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಹೆಚ್‌ಡಿಕೆ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿರುವ ಡಿಕೆಶಿ, ಅವನಿಗೆ ನನ್ನ ರಾಜೀನಾಮೆ ಬೇಕಂತೆ ಎಂದು ಹರಿಹಾಯ್ದಿದ್ದಾರೆ.
ರಾಜೀನಾಮೆ ನೀಡಬೇಕು ಎಂಬ ಕುಮಾರಸ್ವಾಮಿ ಆಗ್ರಹಕ್ಕೆ ಡಿ.ಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಕುಮಾರಸ್ವಾಮಿ ಪಾಪ ಕಿಂಗ್ ಮೇಕರ್ (King maker) ಆಗಲು ಹೊರಟಿದ್ರು. ಈಗ ನನ್ನ ಅಧ್ಯಕ್ಷತೆಯಲ್ಲಿ ನಮಗೆ 136 ಸಂಖ್ಯೆಯನ್ನು ಕೊಟ್ಟಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ 19 ಸ್ಥಾನ ಬಂದಿದೆ. ನಮಗೆ ಅವಕಾಶ ಸಿಕ್ಕಿಲ್ಲ ಅಂತ ಪಾಪ ಈಗ ಕೈ ಹೊಸಕಿ ಕೊಳ್ತಿದ್ದಾರೆ ಎಂದು ಹೇಳಿದ್ರು.
ಅಸೂಯೆಗೂ ಮದ್ದಿಲ್ಲ, ಜಲಸಿಗೂ ಮದ್ದಿಲ್ಲ. ಅವರು ಏನ್ ಬೇಕಾದರೂ ಮಾತಾಡಿಕೊಳ್ಳಲಿ.ರಾಜೀನಾಮೆ ಕೊಡಬೇಕು ಅಂತ ಆಸೆ ಪಡುವವರನ್ನ ತಪ್ಪು ಅಂತ ಹೇಳೋಕೆ ಆಗುತ್ತಾ. ಪಾಪ ಅವನ ಆಸೆ ಅದು ಅಂತ ಏಕವಚನದಲ್ಲೇ ಕುಮಾರಸ್ವಾಮಿಗೆ ಡಿ.ಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.