ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಕ್ರಾಂತಿಯಾಗಿದ್ದು ನಿತೀಶ್ ಕುಮಾರ್ ನೇತೃತ್ವದ ಜೆಡಿಯು NDA ಮೈತ್ರಿಕೂಟ ತೊರೆಯುವುದು ಬಹುತೇಕ ಖಚಿತವಾಗಿದೆ.
ಇನ್ನು ಮಂಗಳವಾರ ಬೆಳ್ಳಗ್ಗೆ ಕಾಂಗ್ರೆಸ್, ರಾಷ್ಟ್ರೀಯ ಜನತಾದಳ ಹಾಗೂ ಸಂಯುಕ್ತ ಜನತಾದಳ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು ನಿತೀಶ್ ಮತ್ತೊಮ್ಮೆ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.
ಇನ್ನು ರಾಜ್ಯಪಾಲರ ಸಮಯಾವಕಾಶ ಕೇಳಿರುವ ಜೆಡಿಯು ಹಾಲಿ ಬಿಜೆಪಿ ಜೊತೆಗಿನ ಮೈತ್ರಿ ಸರ್ಕಾರವನ್ನ ವಿಸರ್ಜಿಸಿ ನೂತನ ಸರ್ಕಾರ ರಚನೆ ಕುರಿತು ಹಕ್ಕು ಮಂಡಿಸಲಿದೆ ಎಂದು ತಿಳಿದು ಬಂದಿದೆ.

ಇನ್ನು ಶಾಸಕಾಂಗ ಪಕ್ಷದ ಸಭೆ ನಂತರ ಮಹತ್ವದ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಜನತಾದಳದ ಹಿರಿಯ ನಾಯಕರೊಬ್ಬರು ಜೆಡಿಯು ಬಿಜೆಪಿ ಜೊತೆಗಿನ ಮೈತ್ರಿ ತೊರೆದರೆ ನಾವು ಅವರನ್ನು ಅಪ್ಪಿಕೊಳ್ಳಲು ಸಿದ್ದರಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್-ಜೆಡಿಯು-ಆರ್‌ಜೆಡಿ ನೂತನ ಸರ್ಕಾರ ರಚನೆ ಬೆನ್ನಲ್ಲೇ ಮೂರು ಪಕ್ಷದ ಮುಖ್ಯಸ್ಥರು ತಮ್ಮ ಪಕ್ಷದ ಶಾಸಕರನ್ನು ರಾಜ್ಯ ರಾಜಧಾನಿ ಪಾಟ್ನಾ ತೊರಯದಂತೆ ಸೂಚಿಸಿದೆ.