• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

JDS ಟಾರ್ಗೆಟ್ 123 ಠುಸ್ ಆಗೋಯ್ತಾ..? ಕುಮಾರಸ್ವಾಮಿ ಈ ಮಾತಿನ ಅರ್ಥ ಏನು..?

ಕೃಷ್ಣ ಮಣಿ by ಕೃಷ್ಣ ಮಣಿ
January 30, 2023
in ಕರ್ನಾಟಕ, ರಾಜಕೀಯ
0
JDS ಟಾರ್ಗೆಟ್ 123 ಠುಸ್ ಆಗೋಯ್ತಾ..? ಕುಮಾರಸ್ವಾಮಿ ಈ ಮಾತಿನ ಅರ್ಥ ಏನು..?
Share on WhatsAppShare on FacebookShare on Telegram

ಮಾಜಿ ಮುಖ್ಯಮಂತ್ರಿ H.D ಕುಮಾರಸ್ವಾಮಿ ಮಹತ್ವದ ಐದು ಯೋಜನೆಗಳನ್ನು ರಾಜ್ಯದಲ್ಲಿ ಜಾರಿ ಮಾಡ್ತೇನೆ ಎಂದು ರಾಜ್ಯಾದ್ಯಂತ ಪಂಚರತ್ನ ಯಾತ್ರೆ ಮಾಡ್ತಿದ್ದಾರೆ. ಕಾಂಗ್ರೆಸ್ ಹಾಗು ಬಿಜೆಪಿ ಸರ್ಕಾರಗಳನ್ನು ಈಗಾಗಲೇ ನೋಡಿದ್ದೀರಿ. ಒಮ್ಮೆ ನಮ್ಮ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಡಲು ಮತ ಕೊಟ್ಟು ಆಯ್ಕೆ ಮಾಡಿ. ಜನತೆಗೆ ಅಗತ್ಯವಾಗಿ ಬೇಕಿರುವ ವಸತಿ, ಶಿಕ್ಷಣ, ಕೃಷಿ-ನೀರಾವರಿ, ಆರೋಗ್ಯ, ಮಹಿಳಾ ಸಬಲೀಕರಣ ಮಾಡಲು ಐದು ಪ್ರಮುಖ ಅಂಶಗಳ ವಿಚಾರವನ್ನು ಹಿಡಿದು ರಥಯಾತ್ರೆ ನಡೆಸುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್‌ಗೆ ತಿರುಗೇಟು ಕೊಡುವ ವೇಳೆ ಕೊಟ್ಟಿರುವ ಹೇಳಿಕೆ ಸತಃ ತಮ್ಮ ಉದ್ದೇಶವನ್ನೇ ಬದಲು ಮಾಡುವಂತಿದೆ.

ADVERTISEMENT

ಮಂಡ್ಯದಲ್ಲಿ ಜೆಡಿಎಸ್ ಟಾರ್ಗೆಟ್ ಮಾಡಿದ್ದ ಕಾಂಗ್ರೆಸ್ ನಾಯಕರು..?

ಮಂಡ್ಯದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಜೆಡಿಎಸ್ ಪಕ್ಷವನ್ನೇ ಗುರಿಯಾಗಿಸಿಕೊಂಡ ನಾಯಕರು ವಾಗ್ದಾಳಿ ಮಾಡಿದ್ದರು. ಜೆಡಿಎಸ್ ಬೆಂಬಲಿಸುವ ನಿರ್ಧಾರ ಮಾಡಬೇಡಿ, ಕೋಮುವಾದಿ ಬಿಜೆಪಿಯನ್ನು ಆಡಳಿತದಿಂದ ದೂರ ಇಡುವ ಉದ್ದೇಶದಿಂದ ಈಗಾಗಲೇ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಆದರೆ ಕುಮಾರಸ್ವಾಮಿ ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ, ಹೋಟೆಲ್‌ನಲ್ಲಿ ಕುಳಿತು ಆಡಳಿತ ಮಾಡುತ್ತ ಅಧಿಕಾರ ಕಳೆದುಕೊಂಡರು ಎಂದಿದ್ದರು. ಇನ್ನು ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ ಶೂರನು ಅಲ್ಲ ಎಂದಿದ್ದ ಡಿ.ಕೆ ಶಿವಕುಮಾರ್ ಮಾತಿಗೆ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದರು. 2018 ರಲ್ಲಿ ನಡೆದ ಘಟನೆ ಮರುಕಳಿಸುವ ಬಗ್ಗೆ ಮಾತನಾಡಿದ್ದರು.

ಕಾಂಗ್ರೆಸ್ ಟೀಕೆಗೆ ಹೆಚ್‌.ಡಿ ಕುಮಾರಸ್ವಾಮಿ ಹೇಳಿದ್ದೇನು..?

ಬಾಗಲಕೋಟೆಯಲ್ಲಿ ಮಾತನಾಡಿರುವ ಕುಮಾರಸ್ವಾಮಿ, ಸಿದ್ದರಾಮಣ್ಣ ನನಗೆ ಅಧಿಕಾರ ಇದ್ದಾಗ ಪಂಚರತ್ನ ಯಾಕೆ ಮಾಡಲಿಲ್ಲ ಅಂತ ಕೇಳಿದ್ದಾರೆ. ಷರತ್ತು ಹಾಕದೆ ಸಪೋರ್ಟ್ ಕೊಟ್ಟಿದ್ವಿ ಅಂತ ಹೇಳಿದ್ದೀರಲ್ಲ. ಯಾವ ಅನ್ ಕಂಡಿಶನಲ್ ಸಪೋರ್ಟ್…? ನಿಮ್ಮ ಹೈಕಮಾಂಡ್ ಹೇಳಿದೆ ಅಂತ ನನ್ನ ತಲೆಗೆ ಗಂಟು ಹಾಕಿದ್ರಿ. ಸರ್ಕಾರ ರಚನೆ ಮಾಡ್ತಿದ್ದಂತೆ ಕಂಡಿಶನ್ ಹಾಕಿ ಕುಳಿತುಕೊಂಡ್ರಿ. ಸಚಿವ ಸ್ಥಾನ, ಖಾತೆ ಬಗ್ಗೆ ಪಟ್ಟು ಹಿಡಿದಿದ್ರಿ. ಇದೇನಾ ಅನ್ ಕಂಡಿಶನಲ್ ಸಪೋರ್ಟಾ.? ಸುಳ್ಳು ಹೇಳೋದಕ್ಕೆ ನಾಚಿಕೆ ಆಗಲ್ವಾ ನಿಮಗೆ..? ಎಂದು ಪ್ರಶ್ನೆ ಮಾಡಿದ್ದಾರೆ. ನೀವು ಕೊಟ್ಟ ಫೈಲ್‌ಗೆ ರುಜು ಹಾಕಬೇಕಿತ್ತು. ಈಗ ಕೊಟ್ಟ ಕುದುರೆ ಏರದವನು ಧೀರನೂ ಅಲ್ಲ, ಶೂರನೂ ಅಲ್ಲ ಅಂತಿರಿ. ನಾನು ಸಿಎಂ ಇದ್ದಾಗಲೇ ಹೇಳಿದ್ದೇನೆ. ನಾನು ಗುಮಾಸ್ತನ ರೀತಿ ಕೆಲಸ ಮಾಡ್ತಿದ್ದೇನೆ ಅಂತ. ವಿಷಕಂಠನಾಗಿದ್ದೇನೆ ಅಂತ ಆವತ್ತೆ ಹೇಳಿದ್ದೆ ಎಂದು ಸಿದ್ದರಾಮಯ್ಯಗೆ ಡಿಚ್ಚಿ ಕೊಟ್ಟಿದ್ದಾರೆ. ಇದೇ ವೇಳೆ ಈ ಬಾರಿಯೂ ಮನೆ ಬಾಗಿಲು ತಟ್ಟುವ ಸಂಭವ ಬರುತ್ತದೆ ಹುಷಾರ್ ಎಂದಿದ್ದಾರೆ.

ಕುಮಾರಸ್ವಾಮಿ ಹೇಳಿದ್ದು ಭವಿಷ್ಯವೋ..? ಅಸಲಿ ಸತ್ಯವೋ..?

ಕಳೆದ ಬಾರಿ ನಮ್ಮ ಮನೆ ಬಾಗಿಲಿಗೆ ಯಾಕೆ ಬಂದಿದ್ರಿ..? ಎಂದು ಕುಟುಕಿರುವ ಕುಮಾರಸ್ವಾಮಿ, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಎಲ್ಲಿ ಹೋಗಿದ್ರಿ..? ಕಾಂಗ್ರೆಸ್ ನಾಯಕರು..? ನಾವು ಹುಟ್ಟಿದ್ದು ರೈತರಿಗಾಗಿ, ರೈತರ ಬಗ್ಗೆ ನಿಮ್ಮ ಬಳಿ ಕಲಿಯಬೇಕಾಗಿಲ್ಲ. 5 ವರ್ಷ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನು ಮಾಡಿದ್ರಿ ಸಿದ್ಧರಾಮಯ್ಯನವರೇ..?ಪಂಚರತ್ನ‌ ಕಾರ್ಯಕ್ರಮದ‌ ಬಗ್ಗೆ ಲಘುವಾಗಿ ಮಾತನಾಡ್ತಿರಾ..? ಮಂಡ್ಯದಲ್ಲೇ ನಿಮ್ಮ ಟೀಕೆಗಳ ಬಗ್ಗೆ ಬಂದು‌ ಮಾತನಾಡ್ತೇನೆ ಎಂದಿದ್ದಾರೆ. ಜೊತೆಗೆ ಕಾಂಗ್ರೆಸ್ ಪಕ್ಷ‌ ಈ ಚುನಾವಣೆಯಲ್ಲಿ ಢಮಾರ್ ಆಗ್ತಿದೆ. 2018 ರಲ್ಲಿ ನಮ್ಮಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದಿಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದರು. ನಾನೂ ಮುಖ್ಯಮಂತ್ರಿ ಆದೆ ಯಡಿಯೂರಪ್ಪನೂ ಮುಖ್ಯಮಂತ್ರಿ ಆದರು. ನೋಡ್ತಿರಿ ಸಿದ್ದರಾಮಯ್ಯ ಬಾಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದಿದ್ದಾರೆ. 2018ರ ಭವಿಷ್ಯವೇ ಮರುಕಳಿಸುತ್ತೆ. ಕಾಂಗ್ರೆಸ್ ಢಮಾರ್ ಆಗುತ್ತೆ ಎಂದಿದ್ದಾರೆ ಕುಮಾರಸ್ವಾಮಿ. ಆದರೆ ಸಿದ್ದರಾಮಯ್ಯ ಮಾತಿಗೆ ವಿರುದ್ಧವಾಗಿ ನಾನು ಮುಖ್ಯಮಂತ್ರಿ ಆಗ್ತೀನಿ ಎಂದಿದ್ದಾರೋ..? ಅಥವಾ ಕಳೆದ ಬಾರಿಯ ಅತಂತ್ರ ಸರ್ಕಾರವೇ ಬರಲಿದ್ದು, ಮತ್ತೆ ಕಾಂಗ್ರೆಸ್ ದೇವೇಗೌಡರ ಮನೆ ಬಾಗಿಲು ತಟ್ಟಲಿದೆ ಎನ್ನುವುದನ್ನು ಹೇಳಿದ್ದಾರೋ ಅನ್ನೋದಕ್ಕೆ ಕುಮಾರಸ್ವಾಮಿಯೇ ಸ್ಪಷ್ಟನೆ ಕೊಡಬೇಕಿದೆ.

Previous Post

ಗಾಂಧಿ ಏಕೆ ಇಂದಿಗೂ ಪ್ರಸ್ತುತವಾಗುತ್ತಾರೆ ? ವರ್ತಮಾನದ ಭಾರತಕ್ಕೆ ಗಾಂಧಿ ಪ್ರಸ್ತುತ ಎನಿಸಲು ಇರುವ ಹತ್ತು ಮುಖ್ಯ ಕಾರಣಗಳು

Next Post

Rameshjarkiholi Video ಬಿಡುಗಡೆ ಮಾಡಿದ್ದು D K Shivakumar ಅಂತೆ ..ನನಗೆ ಏನು ಗೊತ್ತಿಲ್ಲ : Siddaramaiah

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
Next Post
Rameshjarkiholi Video ಬಿಡುಗಡೆ ಮಾಡಿದ್ದು D K Shivakumar ಅಂತೆ ..ನನಗೆ ಏನು ಗೊತ್ತಿಲ್ಲ : Siddaramaiah

Rameshjarkiholi Video ಬಿಡುಗಡೆ ಮಾಡಿದ್ದು D K Shivakumar ಅಂತೆ ..ನನಗೆ ಏನು ಗೊತ್ತಿಲ್ಲ : Siddaramaiah

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada