ಅಸಹಜ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಅಡಿಯಲ್ಲಿ ಜೆಡಿಎಸ್ ಎಮ್ಎಲ್ಸಿ (Jds Mic) ಸೂರಜ್ ರೇವಣ್ಣರನ್ನ (Sura) revanna) ಹೊಳೆನರೀಪುರ ಪೋಲಿಸರು ಬಂಧಿಸಿದ್ದಾರೆ. ಸಂತ್ರಸ್ತ ಯುವಕ ನೀಡಿದ್ದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡ ಪೋಸಿಸರು ಇಂದು ಬೆಳಿಗ್ಗೆ ಸೂರಜ್ರನ್ನ ಬಂಧಿಸಿದ್ದಾರೆ.
ಐಪಿಸಿ ಸೆಕ್ಷನ್ 342,377,506,34 ರ ಅಡಿಯಲ್ಲು ಎಫ್ಐಆರ್ (FIR) ದಾಖಲಾಗಿದ್ದು, ನಿನ್ನೆ ರಾತ್ರಿ 7.30 ರ ಸುಮಾರಿಗೆ ಸೂರಜ್ ರೇವಣ್ಣರನ್ನ ಹೊಳೆನರಸಿಪುರದ ಸೆನ್ ಠಾಣೆಗೆ (CEN) ಕರೆದುಕೊಂಡು ಬಂದ ಪೋಲಿಸರು ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ.
ನಂತರ ಬೆಳಗ್ಗೆ ಅಧಿಕೃತವಾಗಿ ಎಮ್ಎಲ್ಸಿ ಸೂರಜ್ ರೇವಣ್ಣ ರನ್ನ ಪೋಲಿಸ್ ಅಧಿಕಾರಿಗಳು ಅರೆಸ್ಟ್ ಮಾಡಿದ್ದು, ಮತ್ತೊಂದು ಕಡೆ ಸಂತ್ರಸ್ತ ಯುವಕನನ್ನ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕರೆತಂದು ಮೆಡಿಕಲ್ ಚೆಕಪ್ಗೆ (Medical test) ಒಳಪಡಿಸಿದ್ದಾರೆ.