ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ಮಂಡ್ಯ ಜಿಲ್ಲೆ ಪ್ರವೇಶಿಸಿದ್ದು ಯಾತ್ರೆಗೆ ಅದ್ದೂರಿ ಸ್ವಾಗತ ದೊರೆತಿದೆ.
ಇನ್ನು ಪಂಚರತ್ನ ರಥಯಾತ್ರೆ ಬಗ್ಗೆ ಮಾಜಿ ಸಚಿವ ಚೆಲುವರಾಯಸ್ವಾಮಿ ವ್ಯಂಗ್ಯವಾಡಿದ್ದು ಈ ಬಗ್ಗೆ ಶಾಸಕ ಸುರೇಶ್ ಗೌಡ ಕೆಂಡಾಮಂಡಲರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್ ಗೌಡ ಚೆಲುವರಾಯಸ್ವಾಮಿ ಒಬ್ಬ ರಾಜಕೀಯ ಶಕುನಿ ಶಕುನಿಗಳ ಮಾತು ಕೇಳುವಂತ ಪ್ರಮೇಯ ನಮಗಿಲ್ಲ ಅಧಿವೇಶನಕ್ಕೆ ಯಾವಾಗ ಹೋಗಬೇಕು, ಪಕ್ಷ ಹೇಗೆ ಕಟ್ಟಬೇಕು, ಅಭಿವೃದ್ಧಿ ಹೇಗೆ ಮಾಡಬೇಕು ಅನ್ನೋದನ್ನ ಅವರಿಂದ ಕಲಿಯುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ಅವರು ಅಷ್ಟು ಬುದ್ದಿವಂತರಾಗಿದ್ರೆ ಜನ ಮನಗೆ ಯಾಕೆ ಕಳುಹಿಸುತ್ತಿದ್ದರು ನಮಗೆ ಅವರೇನು ಬುದ್ದಿ ಹೇಳುವ ಅವಶ್ಯಕತೆ ಇಲ್ಲ ಅವರು ಒಳ್ಳೆಯ ಬುದ್ದಿ ಕಲಿತರೆ ಅಷ್ಟೆ ಸಾಕು ಅಂತ್ಯ ಕಾಲದಲ್ಲಿ ಪಾಪಾ ಬಾಯಿಗೆಬಂದಾಗೆ ಬಡೆದುಕೊಳ್ತಿದ್ದಾರೆ ಬಡ್ಕೊಳ್ಳಿ ಎಂದು ಲೇವಡಿಯಾಡಿದ್ದಾರೆ.
ಅಧಿವೇಶನದಲ್ಲಿ ಅಷ್ಟೆಲ್ಲಾ ಹೋರಾಟ ಮಾಡ್ತೇವೆ ಈ ಕಿವುಡು ಸರ್ಕಾರಕ್ಕೆ ನಾವು ಏನು ಮಾಡೋದು ಮೃತ್ರಿ ಸರ್ಕಾರ ತೆಗೆಯುವುದಕ್ಕೆ ಚಲುವರಾಯಸ್ವಾಮಿ ಪಾತ್ರ ಇದೆ. ಹೇಳುವುದು ಒಂದು ಮಾಡೋದು ಇನ್ನೊಂದು ಅದಕ್ಕೆ ಅವರು ಬೆಳಿಗ್ಗೆ ಕಾಂಗ್ರೆಸ್, ರಾತ್ರಿ ಬಿಜೆಪಿ ಅಂತ ಜೆಡಿಎಸ್ ಸರ್ಕಾರ ತೆಗೆಯುವುದರಲ್ಲಿ ಚೆಲುವರಾಯಸ್ವಾಮಿ ಪಾತ್ರ ಇತ್ತು ಎಂದು ಆರೋಪಿಸಿದ್ದಾರೆ.
ಚೆಲುವರಾಯಸ್ವಾಮಿ ಪ್ರಮಾಣ ಮಾಡಲಿ ನನ್ನ ಕುತಂತ್ರ ಇಲ್ಲ ಅಂತ ಶಕುನಿ ಪಾತ್ರ ಮಾಡ್ಕೊಂಡು ಆಟವಾಡ್ತಿದ್ದಾರೆ ಅಧಿವೇಶನಕ್ಕೆ ನಮ್ಮವರು ಹೋಗಿದ್ದಾರೆ ನಾವು ನಾಳೆ ಹೊಗ್ತೇವೆ ಎತ್ತಿಕಟ್ಟುವ ಕೆಲಸ ಮಾಡ್ಕೊಂಡು ನಿಂತಿದ್ದಾರೆ ಇದು ಮಂಡ್ಯ ಜಿಲ್ಲೆ ಹಿಂದಿನ ಚುನಾವಣೆಯಲ್ಲಿ ನಡೆದ ಕುತಂತ್ರ ಇವಾಗ ನಡೆಯಲ್ಲ ಜನರೆ ಅವರಿಗೆ ಚೆನ್ನಾಗಿ ಬುದ್ದಿ ಕಲಿಸುತ್ತಾರೆ ಎಂದು ಹೇಳಿದ್ದಾರೆ.