• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, August 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಜೆಡಿಎಸ್, ಬಿಜೆಪಿಗೆ ನನ್ನ ಕಂಡ್ರೆ ಭಯ, ಹಾಗಾಗಿ ಇಬ್ಬರಿಗೂ ನಾನೇ ಟಾರ್ಗೆಟ್ – ಸಿದ್ದರಾಮಯ್ಯ

ಪ್ರತಿಧ್ವನಿ by ಪ್ರತಿಧ್ವನಿ
October 24, 2021
in ಕರ್ನಾಟಕ, ರಾಜಕೀಯ
0
ಜೆಡಿಎಸ್, ಬಿಜೆಪಿಗೆ ನನ್ನ ಕಂಡ್ರೆ ಭಯ, ಹಾಗಾಗಿ ಇಬ್ಬರಿಗೂ ನಾನೇ ಟಾರ್ಗೆಟ್ – ಸಿದ್ದರಾಮಯ್ಯ
Share on WhatsAppShare on FacebookShare on Telegram

ರಾಜ್ಯದಲ್ಲಿ ಉಪಚುನಾವಣಾ ಕಾವು ರಂಗೇರಿದೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮೂರೂ ಪಕ್ಷಗಳೂ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಜೆಡಿಎಸ್‌, ಬಿಜೆಪಿ ಎರಡೂ ಪಕ್ಷಗಳೂ ಕಾಂಗ್ರೆಸ್‌ಅನ್ನು ಅದರಲ್ಲೂ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಟೀಕಾಸ್ತ್ರ ಹೂಡುತ್ತಿದೆ. ಇತ್ತ ಸಿದ್ದರಾಮಯ್ಯನವರೂ ಎರಡೂ ಪಕ್ಷಗಳ ವಿರುದ್ಧ ನೇರ ವಾಗ್ದಾಳಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

ಸಿಂದಗಿಯಲ್ಲಿ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಉಪಚನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ನೇರ ಸ್ಪರ್ಧೆ ಇದೆ. ಜೆಡಿಎಸ್‌ ಕಣದಲ್ಲಿದ್ದರೂ ಸಹ ಸ್ಪರ್ಧೆಯಲ್ಲಿ ಇಲ್ಲ. ಜೆಡಿಎಸ್ಗೂ ನಾನೇ ಟಾರ್ಗೆಟ್, ಬಿಜೆಪಿಗೂ ನಾನೇ ಟಾರ್ಗೆಟ್. ಏಕೆಂದರೆ ಇಬ್ಬರಿಗೂ ನನ್ನನ್ನು ಕಂಡರೆ ಭಯವಾಗುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹೆಚ್‌.ಡಿ. ಕುಮಾರಸ್ವಾಮಿ, ಹೆಚ್.ಡಿ. ದೇವೇಗೌಡರು ನನ್ನ ವಿರುದ್ಧ ಬಾಣ ಬಿಡ್ತಿದ್ದಾರೆ. ಸಿಂದಗಿಯಲ್ಲಿ ಜೆಡಿಎಸ್ ಗೆಲ್ಲಲ್ಲ. ಆದರೂ ದೇವೆಗೌಡರ ಪೂರ್ತಿ ಕುಟುಂಬ ಇಲ್ಲೇ ಇದೆ. ನಾನು ಅವತ್ತೇ ಹೇಳಿದ್ದೆ ಇದು ಜೆಡಿಎಸ್‌ ಅಲ್ಲ ಜೆಡಿʼಎಫ್ʼ. ʼಜೆಡಿ ಫ್ಯಾಮಿಲಿʼ. ಜೆಡಿಎಸ್ ಕುಟುಂಬದ ಪಕ್ಷ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯವರು ಹಿಂದುಳಿದ ಜಾತಿಗಳ‌ ವಿರೋಧಿಗಳು. ಬಿಜೆಪಿಯವರು ಶ್ರೀಮಂತರ ಪರವಾಗಿ ಇದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಜೆಡಿಎಸ್ ಬಿಜೆಪಿಯ ಬಿ ಟೀಂ. ಹಿಂದುಳಿದ ವರ್ಗಗಳ ಜಾತಿಗೆ ಅನ್ಯಾಯ ಮಾಡಿದ್ರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಈ ವೇಳೆ ಅವರು ಎಚ್ಚರಿಸಿದ್ದಾರೆ.

ಕಂಬಳಿ ಹಾಕಲು ಯೋಗ್ಯತೆ ಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಬೊಮ್ಮಾಯಿ ನೀನು ಯಾವತ್ತಾದರೂ ಕುರಿ ಕಾದಿದ್ದೀಯಾ? ನಾನು ಕುರಿ ಕಾದಿದ್ದೇನೆ ಎಂದು ಮಾಜಿ ಸಿಎಂ ಕುಟುಕಿದ್ದಾರೆ. ಕನಕಗುರು ಪೀಠ ಮಾಡಿದ್ದು ನಾನು. ಸಂಗೊಳ್ಳಿ ಬ್ರಿಗೇಡ್ ಮಾಡಿದ ಈಶ್ವರಪ್ಪ. ಇದೀಗ ಬ್ರಿಗೇಡ್ ಎಲ್ಲಿದೆ. ಸ್ವಾರ್ಥಕ್ಕಾಗಿ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದ್ದ. ಇದೀಗ ಬ್ರಿಗೇಡ್ ಎಲ್ಲಿದೆ ಎಂದು ಕೇಳಿದ್ದಾರೆ.

ಕೆಂಪೇಗೌಡ ಜಯಂತಿ ಮಾಡಿದ್ದು ಸಿದ್ದರಾಮಯ್ಯ. ದೇವೇಗೌಡ, ಕುಮಾರಸ್ವಾಮಿ ಅಲ್ಲ. ಈಶ್ವರಪ್ಪ ಒಂದು ಸಲ ಹೇಳಿದ್ರು ನಾನು ಕುರುಬ ಅಲ್ಲಾ ಅಂತ. ಆದ್ರೆ ನಾನು ಕುರುಬ. ಕುರುಬ ಜಾತಿಯಲ್ಲಿ ಹುಟ್ಟಿರೋದನ್ನು ಸುಳ್ಳು ಹೇಳಲು ಆಗುತ್ತಾ? ಆದ್ರೆ ಯಾವ ಜಾತಿಯಲ್ಲಿ ಹುಟ್ಟಿದ್ದೇವೆ ಅನ್ನೋದು ಮುಖ್ಯವಲ್ಲ. ಮಾನವೀಯತೆ ಮುಖ್ಯ ಎಂದು ಅವರು ಹೇಳಿದ್ದಾರೆ. 

ಸಿದ್ದರಾಮಯ್ಯ ಅವರನ್ನು ಮುಗಿಸಿಬಿಟ್ರೆ ಕಾಂಗ್ರೆಸ್ ಮುಗಿಸಬಹುದು ಎಂದು ಎರಡು ಪಕ್ಷಗಳು ಲೆಕ್ಕಾಚಾರ ಹಾಕಿಕೊಂಡಿವೆ. ಆದರೆ ಸಿದ್ದರಾಮಯ್ಯರನ್ನು ಮುಗಿಸಲು ಜನರು ಬಿಡುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Tags: BJPByElectionbypollCongress PartyCovid 19hanagalKarnataka Assembly BypollKarnataka bypollsindhagiಉಪಚುನಾವಣೆಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ಜೆಡಿಎಸ್‌ದೇವೇಗೌಡನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯಸಿಂಧಗಿಹಾನಗಲ್‌
Previous Post

ಬಲಪಂಥೀಯ ಹಿಂಸೆಯೂ ಎಡಪಂಥೀಯ ಪ್ರಜಾತಂತ್ರವೂ

Next Post

ನಮ್ಮ ಮೆಟ್ರೋ ಕಾಮಗಾರಿ ವೇಳೆ ಕೆಳಗೆ ಬಿದ್ದ ಬಹು ದೊಡ್ಡ ಮಷಿನ್

Related Posts

ಸಾಕ್ಷ್ಯ ಬೆದರಿಕೆ ಪ್ರಕರಣದ ಆರೋಪಿನ ಭೇಟಿಯಾದ್ರಾ ವಿಜಯಲಕ್ಷ್ಮಿ ದರ್ಶನ್‌..?
Top Story

ಸಾಕ್ಷ್ಯ ಬೆದರಿಕೆ ಪ್ರಕರಣದ ಆರೋಪಿನ ಭೇಟಿಯಾದ್ರಾ ವಿಜಯಲಕ್ಷ್ಮಿ ದರ್ಶನ್‌..?

by ಪ್ರತಿಧ್ವನಿ
August 23, 2026
0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷ್ಯಗಳಿಗೆ ಬೆದರಿಕೆ ಹಾಕಿದ ಆರೋಪದ ಪ್ರಕರಣದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಕೆಲವರನ್ನು ಬಂಧಿಸಲಾಗಿದ್ದು, ಇನ್ನೂ ಕೆಲ ಆರೋಪಿಗಳು...

Read moreDetails
ಸ್ವಚ್ಛ ಬೆಂಗಳೂರು: ಬೆಸ್ಕಾಂನಿಂದ ವಾರಾಂತ್ಯದ ವಿಶೇಷ ಅಭಿಯಾನ

ಸ್ವಚ್ಛ ಬೆಂಗಳೂರು: ಬೆಸ್ಕಾಂನಿಂದ ವಾರಾಂತ್ಯದ ವಿಶೇಷ ಅಭಿಯಾನ

August 23, 2026
ರಾಜ್ಯದಲ್ಲಿ ಏಕಾಏಕಿ ಹೆಚ್ಚಿದ H1N1 ಪ್ರಕರಣಗಳು: ಆರೋಗ್ಯ ಇಲಾಖೆ ಕಟ್ಟೆಚ್ಚರ

ರಾಜ್ಯದಲ್ಲಿ ಏಕಾಏಕಿ ಹೆಚ್ಚಿದ H1N1 ಪ್ರಕರಣಗಳು: ಆರೋಗ್ಯ ಇಲಾಖೆ ಕಟ್ಟೆಚ್ಚರ

August 23, 2026
ಹೊಸಕೋಟೆ 4 ಗಂಟೆ ಬಿರಿಯಾನಿಗೆ ಬ್ರೇಕ್‌: ಕಾರಣವೇನು..?

ಹೊಸಕೋಟೆ 4 ಗಂಟೆ ಬಿರಿಯಾನಿಗೆ ಬ್ರೇಕ್‌: ಕಾರಣವೇನು..?

August 23, 2026
ರಾಜ್ಯದಲ್ಲಿ ಬರದ ಛಾಯೆ: ಮಳೆಗಾಗಿ ಕೊಡಗಿನಲ್ಲಿ ಕೃಷಿ ಸಚಿವರಿಂದ ವಿಶೇಷ ಪೂಜೆ

ರಾಜ್ಯದಲ್ಲಿ ಬರದ ಛಾಯೆ: ಮಳೆಗಾಗಿ ಕೊಡಗಿನಲ್ಲಿ ಕೃಷಿ ಸಚಿವರಿಂದ ವಿಶೇಷ ಪೂಜೆ

August 23, 2026
Next Post
ನಮ್ಮ ಮೆಟ್ರೋ ಕಾಮಗಾರಿ ವೇಳೆ ಕೆಳಗೆ ಬಿದ್ದ ಬಹು ದೊಡ್ಡ ಮಷಿನ್

ನಮ್ಮ ಮೆಟ್ರೋ ಕಾಮಗಾರಿ ವೇಳೆ ಕೆಳಗೆ ಬಿದ್ದ ಬಹು ದೊಡ್ಡ ಮಷಿನ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada