ಭಾರತದ ಖ್ಯಾತ ಆದ್ಯಾತ್ಮಿಕ ಪ್ರವಚನಕಾರ್ತಿ ಜಯ ಕಿಶೋರಿ (Jaya kishori) ಟೀಕೆಗೆ ಒಳಗಾಗಿದ್ದಾರೆ. ಜಯ ಕಿಶೋರಿ ಸದಾಕಾಲ ತಮ್ಮ ಅನುಯಾಯಿಗಳಿಗೆ ದೇವರು ಮತ್ತು ಸರ್ವ ಪರಿತ್ಯಾಗದ ಬಗ್ಗೆ ಬೋಧಿಸುತ್ತಾರೆ. ಆದರೆ ಅವರೇ 2 ಲಕ್ಷಕ್ಕೂ ಅಧಿಕ ಮೌಲ್ಯದ ದುಬಾರಿ ಡಿಯೊರ್ ಬ್ಯಾಗ್ (Dior bag) ಬಳಸಿದ್ದಾರೆ ಎಂಬ ಕಾರಣಕ್ಕೆ ಟೀಕೆಗಳು ವ್ಯಕ್ತವಾಗಿದೆ.

ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ ಚರ್ಮದ ಬ್ಯಾಗನ್ನ ಹಿಡಿದು ಜಯ ಕಿಶೋರಿ ಸಾಗುತ್ತಿರುವ ವೀಡಿಯೋ ವೈರಲ್ (Viral video) ಆಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ.ಓರ್ವ ಹಿಂದೂ ಪ್ರವಚನಕಾರ್ತಿ ಚರ್ಮದ ಬ್ಯಾಗ್ ಬಳಕೆ ಮಾಡಿರುವುದು ಮತ್ತಷ್ಟು ಟೀಕೆಗೆ ಕಾರಣವಾಗಿದೆ.
ಆಧ್ಯಾತ್ಮಿಕ ಪ್ರವಚನಕಾರ್ತಿ ಜಯ ಕಿಶೋರಿ ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ (Airport) 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಡಿಯೊರ್ ಬ್ಯಾಗೊಂದಿಗೆ ತೆರಳುತ್ತಿರುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ. ಈ ಐಷಾರಾಮಿ ಬ್ಯಾಗ್ ನ ಹತ್ತಿ ಮತ್ತು ಚರ್ಮದಿಂದ ತಯಾರಿಸಲಾಗುತ್ತದೆ.