ನಟಿ ಜಯಾ ಬಚ್ಚನ್ ಸಾರ್ವಜನಿಕವಾಗಿ ವಿಡಿಯೋ ಮಾಡುವವರ ಮೇಲೆ, ಫೋಟೋ ತೆಗೆಯುವವರ ಮೇಲೆ, ಯೂಟ್ಯೂಬರ್‌ಗಳ ಮೇಲೆ ಕೋಪಗೊಳ್ಳುವುದು ಹೊಸತಲ್ಲ. ಇದೀಗ ಜಯಾ ಬಚ್ಚನ್ ಫೋಟೋ ತೆಗೆಯುತ್ತಿರುವವರ ಮೇಲೆ ಹರಿಹಾಯ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬಾಲಿವುಡ್ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಜಯಾ ಬಚ್ಚನ್ ಅವರ ಫೋಟೋ ತೆಗೆಯುವಾಗ ಬಾಯ್ ಮೇಡಂ ಎಂದಿದ್ದಕ್ಕೆ ಕೋಪಗೊಂಡ ಜಯಾ ಬಚ್ಚನ್, ಬಾಯಿ ಮುಚ್ಚಿಕೊಂಡು ಫೋಟೋ..ವಿಡಿಯೋ ತೆಗೆಯಿರಿ. ಫೋಟೋ ತೆಗೆಯೋದು ಅಷ್ಟೇ ಕೆಲಸ. ನಾಟಕ ಮಾಡಬೇಡಿ ಎಂದು ಗುಡುಗಿದ್ದಾರೆ.

ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನಟಿ ಜಯಾ ಬಚ್ಚನ್ ನಡೆಯ ಬಗ್ಗೆ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ. ನಿಮ್ಮ ವೈಯಕ್ತಿಕ ಸಿಟ್ಟು ಕೋಪಗಳನ್ನು ಫೋಟೋ ತೆಗೆಯುವವರ ಮೇಲೆ ತೋರಿಸುವುದು ಸರಿಯಲ್ಲ ಎಂದು ಕಮೆಂಟ್ ಮಾಡಿದ್ದಾರೆ.








