ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನಿಂದ ಏಷ್ಯಾ ಕಪ್ ಟಿ-20 ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ.
ಬಿಸಿಸಿಐ ಆಯ್ಕೆ ಸಮಿತಿ ಸೋಮವಾರ ಭಾರತ ತಂಡದ ಅಂತಿಮ ಪಟ್ಟಿ ಪ್ರಕಟಿಸಿದ್ದು, ಟಿ-20 ವಿಶ್ವಕಪ್ಗೂ ಮೊದಲು ಅವರು ತಂಡಕ್ಕೆ ಮರಳುತ್ತಾರೆ ಎಂಬ ವಿಶ್ವಾಸವಿದೆ ಅವರು ನಮ್ಮ ತಂಡದ ಪ್ರಮುಖ ಬೌಲರ್ ಅವರಾಗಿದ್ದು ಶೀಘ್ರ ಗುಣಮುಖರಾಗಿ ತಂಡ ಕೂಡಿಕೊಳ್ಳಲಿ ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ರಾಷ್ಟ್ರೀಯ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.