CBI ಕೋರ್ಟ್ ವಿಧಿಸಿದ್ದ ಶಿಕ್ಷೆಯ ವಿರುದ್ಧ ತೆಲಂಗಾಣ ಹೈಕೋರ್ಟ್ನಿಂದ ತಾತ್ಕಾಲಿಕ ತಡೆಯಾಜ್ಞೆ ಪಡೆದು ಇವತ್ತು ಜೈಲಿನಿಂದ ಹೊರಬಂದ ಗಾಲಿ ಜನಾರ್ಧನ ರೆಡ್ಡಿ.

ಮಾಧ್ಯಮಗಳೊಂದಿಗೆ ಮಾತಾಡುತ್ತಾ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ಪಡೆಯಬೇಕೆಂಬ ರಾಜಕೀಯ ದುರಾಸೆಯಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ, ತನ್ನ ವಿರುದ್ಧ ಅಕ್ರಮ ಗಣಿಗಾರಿಕೆಯ ಆರೋಪ ಹೊರೆಸಿ ಜೈಲಿಗೆ ಹೋಗುವಂತೆ ಮಾಡಿದ್ದರು ಎಂದು ಹೇಳಿದರು.

ಆದರೆ, ಸಿಬಿಐ ಕೋರ್ಟ್ ತನ್ನ ತೀರ್ಪಿನಲ್ಲಿ ಅಕ್ರಮ ಗಣಿಗಾರಿಕೆ ನಡೆದಿಲ್ಲ ಎಂದು ಹೇಳಿದೆ ಮತ್ತು ಓಬಳಪುರಂ ಮೈನಿಂಗ್ ಕಂಪನಿಯಿಂದ ಬೇರೆ ದೇಶಗಳಿಗೆ ಅದಿರನ್ನು ರಫ್ತು ಮಾಡಿದರೆಂಬ ಅರೋಪವನ್ನೂ ನ್ಯಾಯಾಲಯ ಹೊಡೆದು ಹಾಕಿದೆ ಎಂದು ರೆಡ್ಡಿ ಹೇಳಿದರು.