ರಾಜ್ಯ ಬಿಜೆಪಿಯಲ್ಲಿ (Bjp) ಭಿನ್ನಮತ ತಾರಕಕ್ಕೇರಿದೆ . ಒಂದೆಡೆ ವಿಜಯೇಂದ್ರ ಬಣ (Vijayendra) ಮತ್ತು ಯತ್ನಾಳ್ (Yatnal) ಬಣದ ನಡುವೆ ಆಂತರಿಕ ಯುದ್ಧ ನಡೆಯುತ್ತಿದ್ರೆ, ಮತ್ತೊಂದೆಡೆ ಒಂದು ಕಾಲದ ಗೆಳೆಯರಾದ ರೆಡ್ಡಿ- ರಾಮುಲು ನಡುವೆ ಕೂಡ ಅಸಮಾಧಾನ ಭುಗಿಲೆದ್ದಿದೆ.

ಬಿಜೆಪಿ ಮುಖಂಡ,ಶಾಸಕ ಜನಾರ್ದನ ರೆಡ್ಡಿ (Janardhan reddy) ಹಾಗೂ ಮಾಜಿ ಸಚಿವ ಶ್ರೀರಾಮುಲು (Sri ramulu) ನಡುವಿನ ಸಮರ ಮುಂದುವರೆದಿದೆ. ಇದೀಗ ಹೈಕಮಾಂಡ್ ನಾಯಕರ ಭೇಟಿ ವಿಚಾರದಲ್ಲೂ ಜನಾರ್ದನ ರೆಡ್ಡಿ ಒಂದು ಹೆಜ್ಜೆ ಮುಂದಿದ್ದಾರೆ.ಹೀಗಾಗಿ ತಮ್ಮ ಗೇಮ್ ಪ್ಲಾನ್ ಮೂಲಕ ರಾಮುಲುಗೆ ಟಕ್ಕರ್ ಕೊಟ್ಟಿದ್ದಾರೆ.
ಮಾಜಿ ಸಚಿವ ಬಿ.ಶ್ರೀರಾಮುಲುಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡೋದಕ್ಕೆ ತುದಿಗಾಲಲ್ಲಿ ನಿಂತಿದ್ರು.ಆದ್ರೆ ರಾಮುಲುಗಿಂತ ಮೊದಲೇ ಅಮಿತ್ ಶಾರನ್ನ ಭೇಟಿ ಮಾಡಿ ಜನಾರ್ದನ್ ರೆಡ್ಡಿ ಟಕ್ಕರ್ ಕೊಟ್ಟಿದ್ದಾರೆ.

ಹೌದು, ನಿನ್ನೆ (ಮಾ.೭) ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಶಾರನ್ನ ಭೇಟಿ ಮಾಡಿರುವ ಜನಾರ್ಧನ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಮಾನ, ಕೋರ್ ಕಮೀಟಿ ಸಭೆ ಬೆಳವಣಿಗೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.ಆದ್ರೆ ಅಮಿತ್ ಶಾ ಮತ್ತು ರೆಡ್ಡಿ ನಡುವಿನ ಈ ದಿಢೀರ್ ಭೇಟಿ ಬಿಜೆಪಿಯಲ್ಲೇ ಚರ್ಚೆಗೆ ಗ್ರಾಸವಾಗಿದೆ.