ಬುಡಕಟ್ಟು ಸಮುದಾಯಗಳ ಐಕಾನ್ ಎಂದೇ ಪ್ರಸಿದ್ಧಿ ಪಡೆದಿರುವ ಬಿರ್ಸಾ ಮುಂಡಾ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಆದಿವಾಸಿಗಳ ಅಭಿವೃದ್ಧಿಗಾಗಿ 24 ಸಾವಿರ ಕೋಟಿ ರೂ. ಮೊತ್ತದ ‘ಪಿಎಂ ಜನಜಾತಿ ಆದಿವಾಸಿ ನಯಾ ಮಹಾ ಅಭಿಯಾನ್’ (ಜನಮನ್) ಯೋಜನೆಗೆ ಚಾಲನೆ ನೀಡಿದರು.
ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಕಾರ‍್ಯಕ್ರಮದಲ್ಲಿ 25 ಅಡಿ ಎತ್ತರದ ಬಿರ್ಸಾ ಮುಂಡಾ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಸರಕಾರದ ಯೋಜನೆಗಳ ಲಾಭ ಎಲ್ಲ ಅರ್ಹ ಫಲಾನುಭವಿಗಳಿಗೂ ತಲುಪಿದಾಗಲೇ ಸಾಮಾಜಿಕ ನ್ಯಾಯ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಎಲ್ಲಾ ಪ್ರಯತ್ನ ನಡೆಸಿದೆ. ಬಿರ್ಸಾ ಮುಂಡಾ ಅವರು ಒಬ್ಬ ಮಹಾನ್ ನಾಯಕ. ಅವರು ಜನಿಸಿದ ಈ ನೆಲದಲ್ಲಿ ಅಭಿವೃದ್ದಿ ಕಾರ್ಯಗಳು ಮುನ್ನಡೆಯಲಿ ಎಂದು ಹೇಳಿದರು.
ಜಾರ್ಖಂಡ್, ಛತ್ತೀಸ್‌ಗಢ, ಮಧ್ಯಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಆದಿವಾಸಿಗಳ ಮತಗಳ ಪ್ರಮಾಣ ದೊಡ್ಡದಿದ್ದು, ಅವುಗಳನ್ನು ಸೆಳೆಯಲು ಕೇಂದ್ರ ಸರಕಾರ ಈ ಬೃಹತ್ ಯೋಜನೆಗೆ ಚಾಲನೆ ನೀಡಿದೆ ಎಂದು ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸಿದ್ದಾರೆ.