ಶ್ರೀರಂಗಪಟ್ಟಣ (Sri ranga pattana) ಜಾಮಿಯಾ ಮಸೀದಿ (jamlya masjid) ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಮಸೀದಿ ಜಾಗದಲ್ಲಿ ಶ್ರೀ ಮೂಡಲ ಬಾಗಿಲು ಆಂಜನೇಯನ ಪುನರ್ ಪ್ರತಿಷ್ಠಾಪನೆಗೆ ಜನಜಾಗೃತಿ, ಪ್ರತಿಭಟನೆ ಬಳಿಕ ಇದೀಗ ಕಾನೂನು ಸಮರ ಆರಂಭವಾಗಿದೆ.

ಜಾಮಿಯಾ ಮಸೀದಿ ವಿವಾದದ ಬಗ್ಗೆ ಪ್ರಮುಖ ಅಂಶಗಳನ್ನು ಉಲ್ಲೇಖಿಸಿ ಭಜರಂಗಸೇನೆ (bhajaranga Dal) ಹಾಗೂ 101 ಹನುಮ ಭಕ್ತರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಕೋರ್ಟ್‌ನಲ್ಲಿ (court) ನಾಳೆಯಿಂದ ಮೊದಲ ವಿಚಾರಣೆ ಆರಂಭವಾಗಲಿದೆ.

ಜ್ಯಾನಪ್ಯಾಪಿ ಮಸೀದಿಯ ಮಾದರಿಯಲ್ಲೇ, ಜಾಮಿಯಾ ಮಸೀದಿಯಲ್ಲೂ ಹಿಂದೂ ದೇವಾಲಯಗಳ (Hindu temple) ಕುರುಹುಗಳು ಪತ್ತೆಯಾಗಿದ್ದು, ಈ ಮಸೀದಿಯನ್ನು ದೇವಸ್ಥಾನದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ. ಹೀಗಾಗಿ ಇಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಶುರುವಾದ ಪ್ರತಿಭಟನೆ, ಹೋರಾಟ ಇದೀಗ ಕೋರ್ಟ್ ಅಂಗಲಕ್ಕೆ ಬಂದು ತಲುಪಿದ್ದು, ಕುತೂಹಲಕ್ಕೆ ಕಾರಣವಾಗಿದೆ.