ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ನಾಯಕತ್ವ ಬದಲಾವಣೆ ಗೊಂದಲ ಜೋರಾದ ಬೆನ್ನಲ್ಲೇ ಕರ್ನಾಟಕಕ್ಕೆ ಆಗಮಿಸಿದ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಅವರು ಕಾಂಗ್ರೆಸ್ ನಾಯಕರು ಹಾಗೂ ಸಚಿವರ ಜೊತೆಗೆ ಹಲವು ವಿಚಾರಗಳ ಬಗ್ಗೆ ಒನ್ ಟು ಒನ್ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಇದೇ ವೇಳೆ ಸಂಪುಟದ ಸಚಿವರ ಪೈಕಿ ಸಚಿವ ಜಮೀರ್ ಅಹ್ಮದ್‌ಗೆ ನಂಬರ್ ಒನ್ ಸಚಿವ ಎಂದು ಮೆಚ್ಚುಗೆ ನೀಡಿದ ಬೆನ್ನಲ್ಲೇ ಜಮೀರ್ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ..ಬಳ್ಳಾರಿಯಲ್ಲಿ ಮಾತನಾಡಿದ ಶ್ರೀರಾಮುಲು, ಜಮೀರ್ ಗಣಿನಾಡು ಬಳ್ಳಾರಿ ಜಿಲ್ಲೆ ಉಸ್ತುವಾರಿ ಸಚಿವರಾಗಿ 1 ವರ್ಷ ಕಳೆದಿದೆ, ಆದ್ರೆ ಜಿಲ್ಲೆಗೆ ಒಮ್ಮೆ ಮಾತ್ರ ಬಂದು ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಜಿಲ್ಲೆಯಲ್ಲಿ ಮಳೆ ಇಲ್ಲದೇ ಬರ ಆವರಿಸಿ ರೈತರು ಕಂಗಾಲಾದಾಗ ಜಮೀರ್ ಬರಲಿಲ್ಲ.ಬಳ್ಳಾರಿ ಜಿಲ್ಲೆ ಮಟ್ಕಾ,ಗಾಂಜಾ ಹಬ್ ಆಗಿದೆ, ಅಭಿವೃದ್ಧಿಯಂತು ಆಗ್ತಾನೆ ಇಲ್ಲ.ಜಮೀರ್ ಕಿರಿಕಿರಿ ಮಾಡ್ತಾರೆ ಅಂತಾ ಸುರ್ಜೇವಾಲ ಬೆಸ್ಟ್ ಮಿನಿಸ್ಟರ್ ಎಂದಿರಬಹುದು ಅಂತಾ ಶ್ರೀರಾಮುಲು ಜಮೀರ್ ವಿರುದ್ಧ ಹರಿಹಾಯ್ದಿದ್ದಾರೆ.