ಉತ್ತರ ಪ್ರದೇಶದ ಆಗ್ರಾದಲ್ಲಿರುವ ಪ್ರಸಿದ್ದ ಪ್ರವಾಸಿ ತಾಣ ವಿಶ್ವದ ಏಳು ಅದ್ಬುತಗಳಲ್ಲಿ ಒಂದಾದ ತಾಜ್ಮಹಲ್ ಬಗ್ಗೆ ಬಿಜೆಪಿ ಸಂಸದ ವಿವಾದಕ್ಕೀಡು ಮಾಡುವ ಹೇಳಿಯನ್ನು ನೀಡಿದ್ದಾರೆ.
ಆದರೆ, ರಾಜಸ್ಥಾನದ ಬಿಜೆಪಿ ಸಂಸದೆ ದಿಯಾ ಕುಮಾರಿ, ತಾಜ್ಮ ಮಹಲ್ ಇರುವ ಜಾಗ ಜೈಪುರದ ರಾಜ ಜೈಸಿಂಗ್ಗೆ ಸೇರಿದ್ದು ಅದನ್ನು ಮೊಘಲ್ ಚಕ್ರವರ್ತಿ ಶಹಜಹಾನ್ ಮೋಸದಿಂದ ಆಕ್ರಮಿಸಿಕೊಂಡು ತಾಜ್ಮಹಲ್ ಕಟ್ಟಿದ್ದಾನೆ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದಾರೆ.
ಮಹಾರಾಜ ಜೈಸಿಂಗ್ಗೆ ಜಾಗ ಸೇರಿದ್ದು ಎಂಬ ಪುರಾವೆಗಳು ಜೈಪುರ್ ಹಿಂದಿನ ರಾಜವಂಶಸ್ಥರ ಬಳಿಯಿದೆ ಎಂದು ಹೇಳಿದ್ದಾರೆ. ತಾಜ್ಮಹಲ್ ಇತಿಹಾಸವನ್ನು ತಿಳಿಯಲು ಸತ್ಯಶೋಧನಾ ಸಮಿತಿಯನ್ನು ನೇಮಿಸುವಂತೆ ಅಲಹಾಬಾದ್ ಹೈಕೋರ್ಟ್ಗೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಇತಿಹಾಸವನ್ನು ಅರಿಯಲು ಒಳಗಡೆಯಿರುವ 22 ಕೋಣೆಗಳನ್ನು ತೆಗಸಬೇಕು ಎಂದು ಅರ್ಜಿದಾರರು ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.

ಅಲ್ಲಿ ಬೃಹತ್ ಸ್ಮಾರಕ ನಿರ್ಮಾಣವಾಗುವುದಕ್ಕು ಮುನ್ನ ಆ ಸ್ಥಳದಲ್ಲಿ ಏನಿತ್ತು ಎಂಬುದನ್ನು ತನಿಖೆ ಮಾಡಬೇಕು ಜನರಿಗೆ ಅದನ್ನು ತಿಳಿಯುವ ಹಕ್ಕಿದೆ ಎಂದು ಪ್ರತಿಪಾದಿಸಿದ್ದಾರೆ.
ಆಗಿನ ಕಾಲದಲ್ಲಿ ನ್ಯಾಯಾಲಯಗಳು ಇರಲಿಲ್ಲ ಬಹುಶಃ ಇದೇ ಕಾರಣಕ್ಕೆ ದಾಖಲೆಗಳನ್ನು ಸಲ್ಲಿಸಲು ಆಗಿರಲಿಲ್ಲ. ದಾಖಲೆ ಪರಿಶೀಲಿಸಿದ ನಂತರ ಎಲ್ಲದಕ್ಕು ಪರಿಹಾರ ಸಿಗಲಿದೆ. ಬೇಕಿದ್ದಲ್ಲಿ ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸಲಾಗುತ್ತದೆ ಎಂದು ಸಂಸದೆ ದಿಯಾ ಕುಮಾರಿ ತಿಳಿಸಿದ್ದಾರೆ.