ಜೈ ಶ್ರೀರಾಮ್ (Jai sri ram) ಎಂಬ ಘೋಷಣೆ ಕೂಗಿದವರಿಗೆ ಪೊಲೀಸರು (Police) ಬೂಟು ಕಾಲಿನಿಂದ ಒದಿಯಬೇಕು ಎಂದು ಕಾಂಗ್ರೆಸ್ (congress) ನಾಯಕ ಬಷಿರುದಿನ್ ಅತಿರೇಕದ ಹೇಳಿಕೆ ಕೊಟ್ಟಿದ್ದಾನೆ. ಮುಸ್ಲಿಂ (muslim) ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ನಾಯಕ ಈ ಹೇಳಿಕೆ ನೀಡಿದ್ದು , ಇದು ಬಿಜೆಪಿ(Bjp) ಮತ್ತು ಹಿಂದೂ ಕಾರ್ಯಕರ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಚುನಾವಣೆಯ (Election) ಸಂಧರ್ಬದಲ್ಲಿ ಪ್ರಚಾರದ ಘೀಳಿಗೆ ನಾಲಿಗೆ ಹರಿಬಿಡುವ ಚಿಲ್ಲರೆ ನಾಯಕರ ಹೇಳಿಕೆಗೆ ಕಾಂಗ್ರೆಸ್ ಪಕ್ಷ ಲಗಾಮು ಹಾಕದಿದ್ರೆ , ಭಾರೀ ನಷ್ಟ ಎದುರಿಸಬೇಕಾದೀತು. ಮೊನ್ನೆ ಮೊನ್ನೆಯಷ್ಟೇ ಶಾಸಕ ರಾಜು ಕಾಗೆ (Raaju kaage), ಹಿಂದೂ ಕಾರ್ಯಕರ್ತರು ಬಿಕಾರ್ಚೋಟ್ ಎಂದು ಹೇಳಿಕೆ ನೀಡಿದ್ದು ವಿಪರೀತ ಆಕ್ರೋಶಕ್ಕೆ ಕಾರಣವಾಗಿತ್ತು.
ಇದೇ ರೀತಿ ಹಿಂದೂ ವಿರೋಧಿ (Anti-hindu) ಹೇಳಿಕೆಗಳು ಮೇಲಿಂದ ಮೇಲೆ ಕಾಂಗ್ರೆಸ್ ಪಾಳಯದಿಂದ ಬಂದಿದ್ದೇ ಆದಲ್ಲಿ, ಪಕ್ಷಕ್ಕೆ ಡ್ಯಾಮೇಜ್ (Damage) ಆಗೋದ್ರಲ್ಲಿ ಅನುಮಾನವಿಲ್ಲ. ರಾಜ್ಯ ಕಾಂಗ್ರೆಸ್ ನಾಯಕರು ಈ ಬಗ್ಗೆ ತುಟಿ ಬಿಚ್ಚದೆ, ಏನೊಂದು ಸೂಚನೆಯನ್ನು ನೀಡದೆ ಇರುವುದು, ಇಂಥ ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ನ ನಿಲುವೇನು ಎಂಬ ಪ್ರಶ್ನೆ ಹುಟ್ಟುಹಾಕಿದೆ.