ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ, ರೇವಣ್ಣ (Revanna) ಮತ್ತು ಪ್ರಜ್ವಲ್ ರೇವಣ್ಣ (Prajwal revanna) ತನಿಖೆ ಎದುರಿಸಲಿ ಎಂದು ಹೆಚ್.ಡಿ ಕುಮಾರಸ್ವಾಮಿ (HD kumaraswamy) ಪ್ರತಿಕ್ರಿಸಿದ್ದಾರೆ. ಅವರು ತಪ್ಪು ಮಾಡಿದ್ದರೆ ಅದು ತನಿಖೆಯಿಂದ ಹೊರಬರಲಿ ಎಂದು ಹೇಳಿದರು.

ಈ ಕೃತ್ಯದಲ್ಲಿ ಕುಟುಂಬದ ಪ್ರಶ್ನೆ ಬರುವುದಿಲ್ಲ. ಇದು ಅವರ ವಯಕ್ತಿಕ ಕೃತ್ಯ. ಯಾರು ಪ್ರತಿನಿತ್ಯ ಎಲ್ಲಿಗೆ ಹೋಗುತ್ತಾರೆ, ಏನು ಮಾಡುತ್ತಾರೆ ಎಲ್ಲವನ್ನೂ ನಾನು ಗಮನಿಸಲು ಸಾಧ್ಯವಿಲ್ಲ. ಹೀಗಾಗಿ ಇದು ದೇವೇಗೌಡರ (Devegowda) ಕುಟುಂಬ ವಿಷ್ಯ ಅಲ್ಲ, ಕೇವಲ ಅವರ ವಯಕ್ತಿಕ ವಿಚಾರ ಎಂದು ಹೇಳಿದ್ರು
ಇದಕ್ಕೂ ಮುಂಚೆ ಈ ಬಗ್ಗೆ ಮಾತನಾಡಿದ್ದ ಹೆಚ್.ಡಿ.ಕೆ, (Hdk) ಉಪ್ಪು ತಿಂದವರು ನೀರು ಕುಡಿಯಲೇಬೇಕು. ತಪ್ಪು ಮಾಡಿದ್ದರೆ ತಕ್ಕ ಶಿಕ್ಷೆಯಾಗಲಿ ಎಂದು ಹೇಳಿದ್ದರು. ಎಸ್.ಐ.ಟಿ (SIT) ತನಿಖೆ ನಡೆಸಲಿದ್ದು ಈ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.