ಭಾರತದ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ರಾಷ್ಟ್ರೀಯ ಓಪನ್ ರ‍್ಯಾಂಕಿಂಗ್ ಟೂರ್ನಿಯಲ್ಲಿ ಭಾಗವಹಿಸುವ ವಿಚಾರವಾಗಿ Wrestling Federation of India (WFI) ಜೊತೆಗಿನ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, “ಓಪನ್ ರ‍್ಯಾಂಕಿಂಗ್ ಟೂರ್ನಿಗೆ ನೋಂದಣಿ ಮಾಡಲು ITA ಲಿಖಿತ ಅನುಮತಿ ನೀಡಿತ್ತು” ಎಂದು ವಿನೇಶ್ ಫೋಗಟ್ ಸ್ಪಷ್ಟನೆ ನೀಡಿದ್ದಾರೆ.
ಗೋಂಡಾದಲ್ಲಿ ನಡೆಯುತ್ತಿರುವ 2026ರ ಸೀನಿಯರ್ ಓಪನ್ ರ‍್ಯಾಂಕಿಂಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ತಾನು ಕಾನೂನುಬದ್ಧವಾಗಿ ಅರ್ಹಳಾಗಿದ್ದೇನೆ ಎಂದು ವಿನೇಶ್ ಹೇಳಿದ್ದಾರೆ. ಜನವರಿ 1, 2026ರಿಂದ ಸ್ಪರ್ಧಿಸಲು ಅನುಮತಿ ಇದೆ ಎಂದು ITA ಇ-ಮೇಲ್ ಮೂಲಕ ತಿಳಿಸಿತ್ತು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ನೊಂದೆಡೆ, WFI ಶಿಸ್ತು ಕ್ರಮ ಪೂರ್ಣಗೊಳ್ಳುವವರೆಗೆ ವಿನೇಶ್‌ಗೆ ಸ್ಪರ್ಧಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದೆ. ಇದರಿಂದ ಭಾರತೀಯ ಕುಸ್ತಿ ವಲಯದಲ್ಲಿ ಹೊಸ ವಿವಾದ ಸೃಷ್ಟಿಯಾಗಿದೆ.






