ಬೆಂಗಳೂರು, ಮೇ 12 : ರಾಜ್ಯದ ಬಹು ನಿರೀಕ್ಷಿತ ಬೆಂಗಳೂರು Suburban Rail Projectಗೆ ಮಹತ್ವದ ಉತ್ತೇಜನ ದೊರೆತಿದೆ. ಯೋಜನೆಗಾಗಿ 153 ಮೆಟ್ರೋ ಮಾದರಿಯ ಕೋಚ್‌ಗಳನ್ನು ಖರೀದಿಸಲು Integral Coach Factory (ICF) ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.ಈ ಒಪ್ಪಂದದ ಮೂಲಕ ಬೆಂಗಳೂರಿನ ಉಪನಗರ ರೈಲು ಸೇವೆಯನ್ನು ಆಧುನಿಕ ಹಾಗೂ ವೇಗದ ಸಾರಿಗೆ ವ್ಯವಸ್ಥೆಯಾಗಿ ರೂಪಿಸುವತ್ತ ಮಹತ್ವದ ಹೆಜ್ಜೆ ಇಡಲಾಗಿದೆ. ಹೊಸ ಕೋಚ್‌ಗಳು ಪ್ರಯಾಣಿಕರಿಗೆ ಮೆಟ್ರೋ ಮಾದರಿಯ ಸೌಕರ್ಯ, ಹೆಚ್ಚಿನ ಸುರಕ್ಷತೆ ಮತ್ತು ವೇಗದ ಸಂಚಾರ ಅನುಭವ ನೀಡಲಿವೆ.
ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ಉಪನಗರ ರೈಲು ಯೋಜನೆಯನ್ನು ಸರ್ಕಾರ ಪ್ರಮುಖ ಯೋಜನೆಯಾಗಿ ಪರಿಗಣಿಸಿದೆ. ನಗರದ ಹೊರವಲಯಗಳಿಂದ ಕೇಂದ್ರ ಭಾಗಗಳಿಗೆ ವೇಗವಾಗಿ ಸಂಪರ್ಕ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ.
153 ಕೋಚ್‌ಗಳ ಖರೀದಿ ಬಳಿಕ ಯೋಜನೆಯ ವಿವಿಧ ಕಾರಿಡಾರ್‌ಗಳಲ್ಲಿ ರೈಲು ಸಂಚಾರವನ್ನು ಹಂತ ಹಂತವಾಗಿ ಆರಂಭಿಸಲು ತಯಾರಿ ನಡೆಯುತ್ತಿದೆ. ಇದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗುವ ಜೊತೆಗೆ ರಸ್ತೆ ಸಂಚಾರದ ಒತ್ತಡವೂ ಕಡಿಮೆಯಾಗಲಿದೆ.






