ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಬಂಧನವಾಗಿರೋ ನಟ ದರ್ಶನ್‌ಗೆ (Actor darshan) ಇದೀಗ ಕೊಲೆ ಕೇಸ್ ಜೊತೆಗೆ ಐಟಿಯಿಂದ (IT) ಕೂಡ ಟೆನ್ಸನ್ ಶುರುವಾಗಿದೆ. ದರ್ಶನ್ ಮನೆಯಲ್ಲಿ ಸಿಕ್ಕ ಹಣ ಮತ್ತು ಕೊಲೆ ಕೇಸ್‌ನಲ್ಲಿ ಬಳಸಲಾದ ಹಣದ ಮೂಲ ಪತ್ತೆಗೆ ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.
ಈ ಹಿನ್ನಲೆ ನಾಳೆ ಮತ್ತು ನಾಡಿದ್ದು ದರ್ಶನ್ ವಿಚಾರಣೆಗೆ 57ನೇ ಸಿಸಿಹೆಚ್ ಕೋರ್ಟ್‌ನಿಂದ (CCH court) ಅನುಮತಿ ಪಡೆದಿದ್ದು, ಬಳ್ಳಾರಿ ಜೈಲಲ್ಲೇ ದರ್ಶನ್‌ರನ್ನ 2 ದಿನ ವಿಚಾರಣೆ ಮಾಡಲಿದ್ದಾರೆ.ಜೊತೆಗೆ ಹಣ ಕೊಟ್ಟಿರೋ ಮೋಹನ್ ರಾಜ್, ಹಾಗೂ ಡೆವಿಲ್ ನಿರ್ದೇಶಕ ಸೇರಿದಂತೆ ಕೆಲ ನಿರ್ಮಾಪಕರ ವಿಚಾರಣೆ ನಡೆಸುವ ಸಾದ್ಯತೆಗಳಿದೆ.ಹಾಗೇ ಆರ್ ಆರ್ ನಗರದ (RR nagar) ದರ್ಶನ್ ಮನೆಯಲ್ಲೂ ಐಟಿ ಅಧಿಕಾರಿಗಳು ಪರಿಶೀಲನೆ ಮಾಡೋ ಸಾಧ್ಯತೆ ಇದೆ.
ಈ ಪ್ರಕರಣದಲ್ಲಿ ಬೇರೆ ಆರೋಪಿಗಳು ಸರೆಂಡರ್ ಆಗುವಂತೆ ಹಣದ ಆಮಿಷ ತೋರಲಾಗಿತ್ತು ಮತ್ತು ಹಣ ಹಂಚಲಾಗಿತ್ತು ಕೂಡ. ಸುಮಾರು 30 ರಿಂದ 40 ಲಕ್ಷ ರೂಪಾಯಿ ಕ್ಯಾಶ್ ರೂಪದಲ್ಲಿ ನಡೆದಿದ್ದು, ಈ ಹಣದ ಮೂಲ ಏನು ಎಂಬುದರ ಬಗ್ಗೆ ಐಟಿ ತನಿಖೆಗೆ ಮುಂದಾಗಿದೆ.