ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ಮತ್ತೊಂದು ದಾಳಿ ನಡೆಸಿದ್ದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ರಾಜಕೀಯ ಪ್ರಚಾರ ನಿರ್ವಹಣೆಯ ಗುತ್ತಿಗೆ ಪಡೆದಿದ್ದ ಜಾಹೀರಾತು ಸಂಸ್ಥೆ “ಡಿಸೈನ್ ಬಾಕ್ಸ್ಡ್ ಸಂಸ್ಥೆ ಮೇಲೆ ದಾಳಿ ಮಾಡಿದ್ದಾರೆ.
ನರೇಶ್ ಅರೋರಾ ಮಾಲಿಕತ್ವದ ಡಿಸೈನ್ ಬಾಕ್ಸ್ ಡಿ ಕೆ ಶಿವಕುಮಾರ್ ಸಾಮಾಜಿಕ ಜಾಲತಾಣ ನಿರ್ವಹಿಸುತ್ತಿದ್ದ ಸಂಸ್ಥೆಯಾಗಿದೆ.
ಡಿಸೈನ್ ಬಾಕ್ಸ್ ಸಂಸ್ಥೆಯು ಖಾಸಗಿಯಾಗಿ ಡಿಕೆ ಶಿವಕುಮಾರ್ ಅವರ ಚುನಾವಣಾ ಸಮೀಕ್ಷೆ ಜವಾಬ್ದಾರಿ ಹೊತ್ತಿತ್ತು. ಕಳೆದ ತಿಂಗಳು ಸಂಸ್ಥೆಯ ಜೊತೆ ಡಿ ಕೆ ಶಿವಕುಮಾರ್ ಒಪ್ಪಂದ ಕಡಿದುಕೊಂಡಿದ್ದರು. ಬೆಂಗಳೂರಿನ ಕಾವೇರಿ ಜಂಕ್ಷನ್ ಬಳಿ ಇರುವ ಡಿಸೈನ್ ಬಾಕ್ಸ್ ಕಚೇರಿ ಮೇಲೆ ಇದೀಗ ಐಟಿ ರೇಡ್ ನಡೆದಿದೆ. ಬೆಳಗ್ಗೆ 6.30ಕ್ಕೆ 2 ಕಾರುಗಳಲ್ಲಿ ಬಂದಿದ್ದ IT ಅಧಿಕಾರಿಗಳು ಆಗಮಿಸಿದ್ದಾರೆ. ಸಂಸ್ಥೆಯು ಖಾತೆ ಹೊಂದಿರುವ ಬ್ಯಾಂಕ್ಗೆ ತೆರಳಿ ಒಂದು ತಂಡ ಮಾಹಿತಿ ಸಂಗ್ರಹಿಸಿದೆ. ಬ್ಯಾಂಕ್ಗೆ ತೆರಳಿ ಸಂಸ್ಥೆಯ ಖಾತೆ, ವಹಿವಾಟು ಬಗ್ಗೆ ಪರಿಶೀಲನೆ ನಡೆಸಿದ್ದಾರೆ.