ಬೆಂಗಳೂರು : ಇದು ಮಾತನಾಡುವ ವೇದಿಕೆಯಲ್ಲ, ಈ ರೀತಿ ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಜಾಲಹಳ್ಳಿಯ ತಮ್ಮ ನಿವಾಸದ ಬಳಿ ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿ, ಸರ್ಕಾರಿ ಅಧಿಕಾರಿಗಳು, ನೌಕರರು ಮೀಡಿಯಾ ಮುಂದೆ ಬರಬಾರದು ಅಂತ ಇದೆ. ಹಾಗಾಗಿ ನಾನು ಮಾತನಾಡಿಲ್ಲ. ನಾನು ಹೇಳಬಹುದಾದ ಒಂದೇ ಮಾತು ಅಂದ್ರೆ ಆದಷ್ಟು ಬೇಗ ಅವರು ಗುಣಮುಖರಾಗಲಿ ಅಷ್ಟೇ ಎಂದಿದ್ದಾರೆ.

ಈ ವಿಚಾರವನ್ನು ಇಲ್ಲಿಗೆ ಬಿಡಲು ಸಾಧ್ಯವಿಲ್ಲ, ಕೆಲಸದ ವಿಚಾರದಲ್ಲಿ ಏನಾದರೂ ಮಾತನಾಡಲಿ, ಆದರೆ ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ. ಅಲ್ಲದೇ ಈಗಾಗಲೇ ಈ ವಿಚಾರವಾಗಿ ನನ್ನ ಪತಿ ಕೂಡಾ ಮಾತನಾಡಿದ್ದಾರೆ ಎಂದು ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿದ್ದಾರೆ.
ರೂಪ ಅವರು. ಇಲ್ಲಸಲ್ಲದ ಆರೋಪಮಾಡಿದ್ದಾರೆ. ಸಿಎಸ್’ಗೆ ದೂರು ಕೊಡಲು ಬಂದಿದ್ದೇನೆ, ದೂರು ನೀಡಿದ್ದೇನೆ. ಏನು ಆಗ್ತಿದೆ ಎಲ್ಲವನ್ನೂ ಹೇಳಿದ್ದೇನೆ. ಅವರ ಕಾರ್ಯವ್ಯಾಪ್ತಿನೆ ಬೇರೆ. ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ನಾನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪ ಮಾಡಬಾರದು ಎಂದರು.